PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಪ್ರಾಚೀನವಾದ ಗಮಕ ಕಲೆ ತುಂಬಾ ಅಪರೂಪವಾದದ್ದು. ಅದರಿಂದ ಎಲ್ಲರಿಗೂ ಜ್ಞಾನ ಹಾಗೂ ಆನಂದ ಪ್ರಾಪ್ತಿಯಾಗುತ್ತದೆ ಎಂದು ಕಿನ್ನಾಳ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಎಸ್.ಜಿ.ಹೊಸಮನಿ ಅಭಿಪ್ರಾಯಪಟ್ಟರು. ಅವರು ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಿನ್ನಾಳದ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಜೂ. ೨೯ರಂದು ಏರ್ಪಡಿಸಿದ ಹರಿಹರ ಕವಿಯ ಅಲ್ಲಮಪ್ರಭು ಕಾವ್ಯ ಗಮಕ ವಾಚನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಈ ಭಾಗದಲ್ಲಿ ಜೋಳದರಾಶಿ ದೊಡ್ಡನಗೌಡರ ನಂತರ ಕಾಣೆಯಾಗುತ್ತಿರುವ ಈ ಗಮಕ ಕಲೆಯನ್ನು ವಿಠ್ಠಪ್ಪ ಗೋರಂಟ್ಲಿಯಂಥವರು ಉಳಿಸಿ ಬೆಳೆಸುವುದರಲ್ಲಿ ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಎಂದರು. ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಸ್ಥಳೀಯ ಸ್ವಾತಂತ್ರ ಯೋಧರಾದ ಕೃಷ್ಣಾಚಾರ ಅಡವಿ ವಹಿಸಿದ್ದರು. ಅತಿಥಿಗಳಾಗಿ ಸಾಹಿತಿಗಳಾದ ವೀರಣ್ಣ ಹುರಕಡ್ಲಿ, ಪಂಪಣ್ಣ ಎಲಿಗಾರ, ನಿಂಗಜ್ಜ ಅಜ್ಜಿ, ವಿರುಪಾಕ್ಷಪ್ಪ ಹುರಕಡ್ಲಿ ಮತ್ತು ಗ್ರಾ.ಪಂ.ಸದಸ್ಯ ಧರ್ಮಣ್ಣ ಕುದರಿಮೋತಿ ಭಾಗವಹಿಸಿದ್ದರು.
ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಒಂದೂವರೆ ತಾಸಿನವರಗೆ ಹರಿಹರ ಕವಿಯ ಅಲ್ಲಮ ಪ್ರಭುದೇವರ ರಗಳೆಯನ್ನು ಗಮಕದಲ್ಲಿ ವಾಚಿಸುವತ್ತ ಅರ್ಥ ವಿವರಿಸಿದರು. ಲಚ್ಚಪ್ಪ ಹಳೇಪೇಟೆ ಸಂಗೀತ ಸೇವೆ ನೀಡಿದರು. ಕು.ಸುಧಾ ಅಡವಿ ಪ್ರಾರ್ಥಿಸಿದರು. ಶಿವಲಿಂಗಪ್ಪ ಗುದಮುರಗಿ ಕಾರ್‍ಯಕ್ರಮ ನಿರೂಪಣೆ ಮಆಡಿದರು. ಕೊನೆಯಲ್ಲಿ ವೀರಣ್ಣ ನಂದ್ಯಾಲ ವಂದಿಸಿದರು. ಸ್ಥಳೀಯ ಸತ್ಸಂಗ ಬಳಗದವರು ಅಧಿಕ ಸಂಖ್ಯೆಯಲ್ಲಿ ಭಾಗವಿಸಿ ಕಾರ್‍ಯಕ್ರಮ ಯಶಸ್ವಿಗೊಳಿಸಿದರು/

Advertisement

0 comments:

Post a Comment

 
Top