ಕೊಪ್ಪಳ, ಜೂ. ೬. ದಲಿತ ಸಾಹಿತ್ಯ ಪರಿಷತ್ ನಿಂದ ನಡೆಯುವ ೩ ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನ ಜೂನ್ ೧೮ ಮತ್ತು ೧೯ ರಂದು ಕೊಪ್ಪಳದಲ್ಲಿ ನಡೆಯಲಿದ್ದು ಇದರ ಸ್ವಾಗತ ಸಮಿತಿಯನ್ನು ದಲಿತ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಮತ್ತು ಸಮ್ಮೇಳನದ ಸಂಯೋಜಕ ಡಾ. ಅರ್ಜುನ ಗೊಳಸಂಗಿಯವರ ನೇತೃತ್ವದಲ್ಲಿ ರಚಿಸಲಾಗಿದೆ.
ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ ಮತ್ತು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ (ಗೌರವ ಅಧ್ಯಕ್ಷರು), ಕನಕಗಿರಿ ಶಾಸಕ, ಮಾಜಿ ಸಚಿವ ಶಿವರಾಜ ತಂಗಡಗಿ (ಅಧ್ಯಕ್ಷರು), ಜಿಲ್ಲಾ ಪಂಚಾಯತ ಅಧ್ಯಕೆ ಜ್ಯೋತಿ ಬಿಲ್ಗಾರ ಮತ್ತು ಉಪಾಧ್ಯಕ್ಷೆ ಡಾ. ಸೀತಾ ಗೂಳಪ್ಪ ಹಲಗೇರಿ (ಕಾರ್ಯಾಧ್ಯಕ್ಷರು), ಕೊಪ್ಪಳ ತಾ. ಪಂ. ಅಧ್ಯಕ್ಷ ಅಮರೇಶ ಉಪಲಾಪೂರ, ಕೊಪ್ಪಳ ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ, ಗಂಗಾವತಿ ತಾ. ಪಂ. ಅಧ್ಯಕ್ಷ ಹೊನ್ನೂರಸಾಬ್ ಬೆನ್ನೂರ, ನಗರಸಭೆ ಅಧ್ಯಕ್ಷ ಬಸಪ್ಪ ನಾಯಕ, ಕುಷ್ಟಗಿ ತಾ. ಪಂ. ಅಧ್ಯಕ್ಷೆ ಲಕ್ಷ್ಮೀದೇವಿ ಶರಣಪ್ಪ ಮೇಟಿ, ಕುಷ್ಟಗಿ ಪುರಸಭೆ ಅಧ್ಯಕ್ಷೆ ಮೋದಿನಬೀ ಜಂಗ್ಲಿಸಾಬ, ಯಲಬುರ್ಗಾ ತಾ. ಪಂ. ಅಧ್ಯಕೆ ಗೌರಮ್ಮ ಜವಳಿ, ಯಲಬುರ್ಗಾ ಪ. ಪಂ. ಅಧ್ಯಕ್ಷ ಸುರೇಶಗೌಡ ಮಲ್ಲನಗೌಡ್ರ (ಎಲ್ಲರೂ ಸಮಿತಿ ಉಪಾಧ್ಯಕ್ಷರು), ಜಿ. ಟಿ. ಪಂಪಾಪತಿ ಕುಕನೂರ, ಸಿ. ವಿ. ಚಂದ್ರಶೇಖರ ಕೊಪ್ಪಳ, ಸಿದ್ದಲಿಂಗಯ್ಯ ಹಿರೇಮಠ, ಜಿ. ಪಂ. ಸದಸ್ಯ ರಾಘವೇಂದ್ರ ಹಿಟ್ನಾಳ (ಎಲ್ಲರೂ ಕೋಶಾಧ್ಯಕ್ಷರು), ಜಿ. ಪಂ. ಸದಸ್ಯ ಎನ್. ವಿನಯಕುಮಾರ ಮೇಲಿನಮನಿ, ಜಿ. ಪಂ. ಸದಸ್ಯ ನಾಗನಗೌಡ ಮಾಲಿಪಾಟೀಲ, ಜಿ. ಪಂ. ಸದಸ್ಯ ಈರಪ್ಪ ಕುಡಗುಂಟಿ, ನವೀನಕುಮಾರ ಈಶಣ್ಣ ಗುಳಗಣ್ಣವರ (ಎಲ್ಲರೂ ಸಹ ಕಾರ್ಯದರ್ಶಿಗಳು) ಮಂಜುನಾಥ ಜಿ. ಗೊಂಡಬಾಳ (ಪ್ರಧಾನ ಕಾರ್ಯದರ್ಶಿ) ಆರ್.ಟಿ.ಓ. ಶಿವರಾಜ ಪಾಟೀಲ, ಡಿಡಿಪಿಐ ಮಂಟೇಲಿಂಗಾಚಾರ್, ಬಿಇಓ ಉಮೇಶ ಪೂಜಾರ, ಜಿಲ್ಲಾ ಕಸಾಪ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ (ವಿಶೇಷ ಆಹ್ವಾನಿತರು), ಉದ್ಯಮಿ ಕೆ. ಪಂಪನಗೌಡ ಹೊಸಪೇಟೆ, ಚಲನಚಿತ್ರ ನಿರ್ದೇಶಕ ರಮೇಶ ಸುರ್ವೆ, ಬಿಬಿಎಂಪಿ ಸಹಾಯಕ ಆಯುಕ್ತ ಸಂಗಮೇಶ ಉಪಾಸೆ, ಕೆಎಸ್ ಆರ್ ಟಿ ಸಿ ಡಿಸಿ ಭಾಸುರಾವ್ (ಎಲ್ಲರೂ ಗೌರವ ಸಲಹೆಗಾರರು) ಯಾಗಿ ಸಮಿತಿ ರಚಿಸಿದ್ದು ಹಲವು ಉಪ ಸಮಿತಿಗಳನ್ನು ರಚಿಸಲಾಗಿದೆ ಎಂದು ಕೊಪ್ಪಳ ದಲಿತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಪ್ರಕಟಣೆ ನೀಡಿದ್ದಾರೆ
0 comments:
Post a Comment