PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜೂ. : ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಕಿತ್ತೂರು ರಾಣಿ ಚೆನ್ನಮ್ಮ, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಹೊರ ಸಂಪನ್ಮೂಲ ಏಜೆನ್ಸಿ ಮೂಲಕ ಭರ್ತಿ ಮಾಡಲು ಉದ್ದೇಶಿಸಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ವಸತಿ ಶಾಲೆಗಳಲ್ಲಿ ಸಮಾಜ- ೦೧, ಗಣಿತ-೨, ವಿಜ್ಞಾನ-೪, ಕ್ರಾಫ್ಟ್-೪, ಸಂಗೀತ-೪, ದೈಹಿಕ-೪, ಕಂಪ್ಯೂಟರ್-೪ ವಿಷಯಗಳ ಶಿಕ್ಷಕರು ಅಲ್ಲದೆ ಪ್ರಥಮ ದರ್ಜೆ ಸಹಾಯಕರ ೭ ಹುದ್ದೆಗಳನ್ನು ಹೊರ ಸಂಪನ್ಮೂಲ ಏಜೆನ್ಸಿ ಮೂಲಕ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಅರ್ಹರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಕಾರ್ಯಾಲಯದಲ್ಲಿ ಅರ್ಹತಾದಾಯಕ ವಿದ್ಯಾರ್ಹತೆ ಹೊಂದಿದ ಅಂಕಪಟ್ಟಿ ಹಾಗೂ ಜಾತಿ ಪ್ರಮಾಣ ಪತ್ರಗಳ ದೃಢೀಕೃತ ದಾಖಲಾತಿಗಳನ್ನು, ಅವರ ವಯಕ್ತಿಕ ವಿವರಗಳೊಂದಿಗೆ ಜೂ. ೧೬ ರ ಒಳಗಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ಕೊಪ್ಪಳ ಇವರಿಗೆ ಸಲ್ಲಿಸಬಹುದಾಗಿದೆ. ಇದು ಖಾಯಂ ಹುದ್ದೆಯಾಗಿರುವುದಿಲ್ಲ. ಹೊರ ಸಂಪನ್ಮೂಲ ಏಜೆನ್ಸಿ ಮೂಲಕ ತೆಗೆದುಕೊಳ್ಳಲಾಗುವುದು. ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ, ಕೊಪ್ಪಳ ಇವರಿಂದ ಪಡೆಯುವಂತೆ ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top