PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಕೊಪ್ಪಳದ ಬಾಲಕಾರ್ಮಿಕ ಯೋಜನಾ ಸಂಘವು ಕೊಪ್ಪಳ ತಾಲೂಕಿನ ವಿವಿಧೆಡೆ ದಾಳಿ ನಡೆಸಿ ಕೋಳಿ ಫಾರಂ ಮತ್ತು ಇತರೆ ವಾಣಿಜ್ಯ ಕ್ಷೇತ್ರಗಳಲ್ಲಿ ಕೆಲಸಕ್ಕೆ ಇದ್ದ ೦೮ ಬಾಲಕಾರ್ಮಿಕರನ್ನು ಬಿಡುಗಡೆಗೊಳಿಸಿ, ಅವರನ್ನು ಶಾಲೆಗೆ ದಾಖಲಿಸಿದೆ.
ಬಾಲಕಾರ್ಮಿಕ ಯೋಜನಾ ಸಂಘವು ಕೊಪ್ಪಳ ನಗರ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ-೬೩ ರ ಬಳಿ ಹಾಗೂ ಇತರೆ ಕೋಳಿಫಾರಂಗಳು, ಕಾರ್ಖಾನೆಗಳ ಮೇಲೆ ಬಾಲಕಾರ್ಮಿಕ ಕಾಯ್ದೆಯಡಿ ಮೇ. ೩೦ ಮತ್ತು ೩೧ ರಂದು ಎರಡು ದಿನಗಳ ಕಾಲ ದಾಳಿ ನಡೆಸಿ ೦೮ ಬಾಲಕಾರ್ಮಿಕರನ್ನು ಪತ್ತೆ ಮಾಡಿದೆ. ಪತ್ತೆಯಾದ ಬಾಲಕಾರ್ಮಿಕರ ವಿವರ ಇಂತಿದೆ. ಎಲಿಮಿಂಜಲಿ ಕೋಳಿಫಾರಂ ನಿಂದ ಮಂಜುನಾಥ ತಂದೆ ನಿಂಗಪ್ಪ, ಪದ್ಮಜಾ ಫಾರಂನಿಂದ ಭೀಮಪ್ಪ ತಂದೆ ಯಂಕಪ್ಪ ತಳವಾರ, ಕೊಪ್ಪಳದ ಕೆ.ಜಿ. ಶಾಪಿಂಗ್ ಸೆಂಟರ್‌ನಿಂದ ಮಹಮದ್ ಅಲಿ ಹನೀಫ್, ಬಾಲಾಜಿ ಸಿಲ್ಕ್ ಮಳಿಗೆಯಿಂದ ಸಿದ್ದಲಿಂಗಯ್ಯ ತಂದೆ ಗುರುಲಿಂಗಯ್ಯ, ರಮೇಶ ತಂದೆ ಮಂಗಳೇಶ ಮಡಿವಾಳ, ಗವಿಸಿದ್ದಪ್ಪ ತಂದೆ ಗುರುಪಾದಪ್ಪ ಕುಂಬಾರ, ಕರ್ನಾಟಕ ಹಾರ್ಡ್‌ವೇರ್ ಅಂಗಡಿಯಿಂದ ಶಿವಕಾಂತ ತಂದೆ ಭರಮಪ್ಪ ಭಾವಿಮನಿ, ದೊಡ್ಡಬಸವೇಶ್ವರ ಕಿರಾಣಿ ಅಂಗಡಿಯಿಂದ ಭೀಮೇಶ ತಂದೆ ಮುದುಕಪ್ಪ ಹದ್ದಿನವರ ಸೇರಿದಂತೆ ಒಟ್ಟು ೦೮ ಮಕ್ಕಳನ್ನು ಬಾಲಕಾರ್ಮಿಕರೆಂದು ಗುರುತಿಸಿ ಅವರನ್ನು ಬಿಡುಗಡೆ ಮಾಡಲಾಗಿದೆ. ಬಾಲಕಾರ್ಮಿಕ ಮಕ್ಕಳನ್ನು ಶಿಕ್ಷಣದ ವಾಹಿನಿಗೆ ತರಲು ಅವರನ್ನು ಶಾಲೆಗಳಿಗೆ ದಾಖಲಿಸಲಾಗಿದೆ. ಅಕ್ರಮವಾಗಿ ಬಾಲಕಾರ್ಮಿಕರನ್ನು ನೇಮಿಸಿಕೊಂಡಿದ್ದ ಮಾಲೀಕರ ಮೇಲೆ ಕಾನೂನು ಕ್ರಮ ಜರುಗಿಸಲಾಗಿದೆ. ಕೊಪ್ಪಳದ ಕಾರ್ಮಿಕ ನಿರೀಕ್ಷಕ ಶಾಂತಯ್ಯ ಅಂಗಡಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ, ಬಿ.ಆರ್.ಪಿ. ಹನುಮಂತಪ್ಪ ಗಾಂಜಿ ಸೇರಿದಂತೆ ಕಾರ್ಮಿಕ ಇಲಾಖೆಯ ಇತರ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top