PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಮೇ. : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಲಾಗಿರುವ ವಿವಿಧ ದತ್ತಿ ನಿಧಿ ಪ್ರಶಸ್ತಿಗಾಗಿ ಅರ್ಹ ಕೃತಿಗಳನ್ನು ಆಹ್ವಾನಿಸಲಾಗಿದೆ.
ಪ್ರಕಾಶಕ ಆರ್.ಎನ್. ಹಬ್ಬು ಅವರು ಕಸಾಪ ದಲ್ಲಿ ಒಂದು ಲಕ್ಷದ ಒಂದು ರೂ. ದತ್ತಿನಿಧಿ ಸ್ಥಾಪಿಸಿದ್ದು, ಇದರಿಂದ ಸಂಗ್ರಹವಾಗುವ ಬಡ್ಡಿಯಿಂದ ಕಾದಂಬರಿ ಪ್ರಕಾರದ ಪುಸ್ತಕಗಳನ್ನು ಪ್ರಕಟಿಸಿರುವ ಪ್ರಕಾಶ ಸಂಸ್ಥೆಗೆ ರೂ. ೫೦೦೦ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಈ ದತ್ತಿನಿಧಿಗಾಗಿ ಕನ್ನಡ ಪುಸ್ತಕ ಪ್ರಕಾಶನ ಸಂಸ್ಥೆಗಳು ಮಾತ್ರ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ೨೦೦೯ ರಲ್ಲಿ ಪ್ರಕಟಿಸಲಾದ ಕಾದಂಬರಿ ಪ್ರಕಾರದ ಪುಸ್ತಕಗಳನ್ನು ಸ್ಪರ್ಧೆಗೆ ಕಳುಹಿಸಬೇಕು, ಪ್ರತಿ ಪ್ರವೇಶಕ್ಕೆ ೦೩ ಪುಸ್ತಕಗಳನ್ನು ಕಳುಹಿಸಬೇಕು, ಪುಸ್ತಕಗಳನ್ನು ತಲುಪಿಸಲು ಜೂ. ೧೫ ಕೊನೆಯ ದಿನಾಂಕವಾಗಿರುತ್ತದೆ.
ಕೊಡಗಿನ ಎಸ್.ಎನ್. ವಿಜಯಶಂಕರ್ ಅವರು ಕಸಾಪ ದಲ್ಲಿ ಭಾರತೀಸುತ ಸ್ಮಾರಕ ದತ್ತಿ ಸ್ಥಾಪಿಸಿದ್ದು, ಇದರಡಿ ಕನ್ನಡ ಕಥಾ ಸಂಕಲನ ಕೃತಿಗೆ ರೂ. ರೂ. ೫೦೦೦ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಈ ದತ್ತಿನಿಧಿಗಾಗಿ ೨೦೦೮ ಮತ್ತು ೨೦೦೯ ರಲ್ಲಿ ಪ್ರಕಟವಾದ ಕಥಾಸಂಕಲನವನ್ನು ಸ್ಪರ್ಧೆಗೆ ಕಳುಹಿಸಬೇಕು. ಪ್ರತಿ ಪ್ರವೇಶಕ್ಕೆ ೦೩ ಪುಸ್ತಕ ಸಲ್ಲಿಸಬೇಕು, ಸ್ಪರ್ಧೆಗೆ ಪುಸ್ತಕಗಳನ್ನು ಜೂ. ೨೦ ರ ಒಳಗಾಗಿ ತಲುಪಿಸಬೇಕು.
ಡಾ. ಎಲ್. ಬಸವರಾಜು ಅವರು ಅಮೃತ ಮಹೋತ್ಸವ ಸವಿ ನೆನಪು ದತ್ತಿ ಸ್ಥಾಪಿಸಿದ್ದು, ಉತ್ತಮ ದಲಿತ ಸಾಹಿತ್ಯ ಕೃತಿಗೆ ರೂ. ರೂ. ೫೦೦೦ ನಗದು ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು. ಈ ದತ್ತಿನಿಧಿಗಾಗಿ ೨೦೧೦ ನೇ ಸಾಲಿನ ಯಾವುದೇ ಪ್ರಕಾರದ ಉತ್ತಮ ದಲಿತ ಸಾಹಿತ್ಯ ಕೃತಿಯನ್ನು ಸ್ಪರ್ಧೆಗೆ ಕಳುಹಿಸಬೇಕು, ಪ್ರತಿ ಪ್ರವೇಶಕ್ಕೆ ೦೩ ಪುಸ್ತಕ ಕಳುಹಿಸಬೇಕು. ಸ್ಪರ್ಧೆಗೆ ಪುಸ್ತಕಗಳನ್ನು ಕಳುಹಿಸಲು ಜೂ. ೧೫ ಕೊನೆಯ ದಿನವಾಗಿರುತ್ತದೆ.
ದತ್ತಿ ನಿಧಿ ಪ್ರಶಸ್ತಿಗಾಗಿ ಸ್ಪರ್ಧೆಗೆ ಬಂದ ಪುಸ್ತಕಗಳನ್ನು ಹಿಂದಿರುಗಿಸಲಾಗುವುದಿಲ್ಲ. ಬಹುಮಾನದ ಬಗ್ಗೆ ಪರಿಷತ್ತು ನೇಮಿಸುವ ತೀರ್ಪುಗಾರರ ಶಿಫಾರಸ್ಸು ಅಂತಿಮವಾಗಿರುತ್ತದೆ. ಒಂದಕ್ಕಿಂತ ಹೆಚ್ಚು ಪುಸ್ತಕಗಳು ಅತ್ಯುತ್ತಮವೆಂದು ಪರಿಗಣಿತವಾದರೆ ಬಹುಮಾನದ ಹಣವನ್ನು ಹಂಚಿಕೆ ಮಾಡಿ ವಿತರಿಸಲಾಗುವುದು. ಸ್ಪರ್ಧೆಗಾಗಿ ಪುಸ್ತಕಗಳನ್ನು ಗೌರವ ಕಾರ್ಯದರ್ಶಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು- ೧೮ ಇವರಿಗೆ ಕಳುಹಿಸಬೇಕು. ಹೆಚ್ಚಿನ ವಿವರಗಳನ್ನು ದೂರವಾಣಿ ಸಂಖ್ಯೆ: ೦೮೦- ೨೬೬೨೩೫೮೪ ಕ್ಕೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Advertisement

0 comments:

Post a Comment

 
Top