ಕೊಪ್ಪಳ : ಸಾವಿರಾರು ಜನ ತುಂಗಭದ್ರೆಗಾಗಿ ಮನೆ,ಮಠ, ಜಮೀನುಗಳನ್ನು ಕಳೆದುಕೊಂಡರು. ಅದರಿಂದ ಎಲ್ಲರಿಗೆ ಒಳಿತಾಗಲಿ ಎನ್ನುವ ಕಾರಣಕ್ಕೆ ಆದರೆ ಈಗ ತುಂಗಭದ್ರೆ ನಮ್ಮವರಿಗಾರಿಗೂ ಉಪಯೋಗವೇ ಇಲ್ಲದಂತಾಗಿ ವಿಷದಗಂಗೆಯಾಗಿದ್ದಾಳೆ. ಸುತ್ತಮುತ್ತಲಿನ ಕಾರ್ಖಾನೆಗಳು ತುಂಗಭದ್ರೆಯಿಂದ ಉತ್ತಮ ನೀರನ್ನು ಪಡೆದು ವಿಷವನ್ನು ಬಿಡುತ್ತಿದ್ದಾರೆ. ಮಲೀನಗೊಂಡ ತುಂಗಭದ್ರೆಯನ್ನೇ ನೆಚ್ಚಿಕೊಂಡ ಜನಸಾಮಾನ್ಯರ ಬದುಕು ಎಂದಿಗೂ ಮುಗಿಯದ ಗೋಳಾಗುತ್ತಿದೆ. ತುಂಗಭದ್ರೆಯ ತೀರದ ದಾಹವನ್ನು ನಮ್ಮ ಸಾಹಿತಿಗಳು,ಕವಿಗಳು ಎತ್ತಿ ತೋರಿಸಿ ಅವಳಿಗೆ ಸೂಕ್ತ ನ್ಯಾಯ ಒದಗಿಸಬೇಕಿದೆ ಎಂದು ಹಿರಿಯ ಸಾಹಿತಿ,ಹೋರಾಟಗಾರ ವಿಠ್ಠಪ್ಪ ಗೋರಂಟ್ಲಿ ಹೇಳಿದರು.
ಅವರು ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೫೩ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಈ ಸಲ ಕವಿಸಮಯದಲ್ಲಿ "ತುಂಗಭದ್ರೆಯ ತೀರದ ದಾಹ" ಎನ್ನುವ ವಿಷಯ ಕುರಿತು ಕಾವ್ಯ ರಚಿಸಲು ಯೋಜಿಸಲಾಗಿತ್ತು. ಅದೇ ರೀತಿ ಕವಿಗಳು ತಮ್ಮ ಕವನಗಳನ್ನು ವಾಚನ ಮಾಡಿದರು. ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಸಿರಾಜ್ ಬಿಸರಳ್ಳಿ- ಸಾಕಿ ಪದ್ಯ, ವೀರಣ್ಣ ಹುರಕಡ್ಲಿ- ದಾಹ, ರಮೇಶ ಬನ್ನಿಕೊಪ್ಪ- ತುಂಗೆಯ ನೆಲದೊಡಲು, ಎ.ಪಿ.ಅಂಗಡಿ-ವಿಷಪಾನ, ಜಡೆಯಪ್ಪ ಎನ್- ತುಂಗೆಭದ್ರೆಯ ಅಂಗಳದಲ್ಲಿ, ಅಂಜನಾದೇವಿ-ಅಮ್ಮ, ತುಂಗೆ, ಪುಷ್ಪಲತಾ ಏಳುಬಾವಿ- ತೀರದ ದಾಹ, ಸುಮತಿ ಹೆಚ್.- ರಾಣಿ ಮಹಲು, ಅವಳ ದಾರಿ, ವಿಠ್ಠಪ್ಪ ಗೋರಂಟ್ಲಿ- ತೀರದ ದಾಹ ಕವನಗಳನ್ನು ವಾಚನ ಮಾಡಿದರು. ರಮೇಶ ಬನ್ನಿಕೊಪ್ಪ ಸ್ವಾಗತಿಸಿದರೆ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. ನಂತರ ಕಥನ ಕವನ, ನೀಳ್ಗವನಗಳ ಕುರಿತು ಚರ್ಚೆ ನಡೆಯಿತು. ಕಾರ್‍ಯಕ್ರಮದಲ್ಲಿ ಶಿವಾನಂದ ಹೊದ್ಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

0 comments:
Post a Comment