PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ. ಮೇ. . ಕೊಪ್ಪಳ ಜಿಲ್ಲೆಯಾಗಿ ೧೪ ವರ್ಷಗಳು ಕಳೆದರೂ ಇನ್ನೂ ಮೂಲಭೂತ ಸೌಕರ್ಯಗಳಿಗೆ ಪರಿತಪಿಸುವಂತ ಸ್ಥಿತಿ ನಿರ್ಮಾಣವಾಗಿರುವದು ದುರದೃಷ್ಟಕರ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ತಂತ್ತಜ್ಞ, ಧಾರವಾಡ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಿ. ವಿ. ಚಂದ್ರಶೇಖರ ವಿಷಾಧಿಸಿದರು.
ಅವರು ಪತ್ರಕರ್ತ, ಸಾಹಿತಿ, ಚಲನಚಿತ್ರ ನಿರ್ದೇಶಕ ಸುರ್ವೆ ರವರ ೫೪ ನೇ ಹುಟ್ಟು ಹಬ್ಬದ ನಿಮಿತ್ಯ ಖ್ಯಾತ ಗಾಯಕ ಪಂಡಿತ ಶ್ರೀ ಮಾಧವ ಗುಡಿ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ನಲವತ್ತು ಸಾವಿರದಷ್ಟು ಕಿರಿಯ ಹಿರಿಯ ಪ್ರತಿಭೆಗಳನ್ನು, ಕಲಾವಿದರನ್ನು ಗುರುತಿಸಿ ಬೃಹತ್ ವೇದಿಕೆಗಳನ್ನು ನಿರ್ಮಾಣ ಮಾಡಿಕೊಟ್ಟು ಪ್ರತಿಭಾ ಪೋಷಣೆಯನ್ನು ೨೦ ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ಅವರು ಸರಕಾರಕ್ಕೂ ಈ ಕೆಲಸದಲ್ಲಿ ಮಾರ್ಗದರ್ಶಕರಾಗಿದ್ದಾರೆಂದ ಅವರು, ರಮೇಶ ಸುರ್ವೆಯವರು ಕೊಪ್ಪಳದ ರೈಲ್ವೆ ಸೇತುವೆ, ರಸ್ತೆ ಹಾಗೂ ಮೂಲಭೂತ ಸೌಕರ್ಯಗಳಿಗೆ ಹೋರಾಡಬೇಕು, ಅದಕ್ಕೆ ಜನರ ಬೆಂಬಲವಿರುತ್ತದೆ, ಸಾಹಿತ್ಯ ಭವನ ಅಭರ್ವದ್ಧಿಯಾಗಬೇಕು ಎಂದರು.
ಚಲನಚಿತ್ರ ನಿರ್ದೇಶಕ, ರಮೇಶ ಸುರ್ವೆ ಮಾತನಾಡಿ, ನನ್ನ ಜಿಲ್ಲೆಯ ಬೆಳವಣಿಗೆಗೆಯ ಸಲುವಾಗಿ ಎಲ್ಲ ಹೋರಾಟಗಳಿಗೂ ಸಿದ್ಧನಾಗಿದ್ದೇನೆ, ನನ್ನ ೫೪ ನೇ ಹುಟ್ಟು ಹಬ್ಬ ನಿಜವಾಗಲೂ ನನ್ನ ಮೊದಲ ಹುಟ್ಟು ಇದ್ದ ಹಾಗೆ, ಹೃದಯ ಶಸ್ತ್ರ ಚಿಕೆತ್ಸೆಗೊಳಗಾಗಿ ಬದುಕಿಬಂದಿದ್ದೇ ಅಧೃಷ್ಟ, ೨೭ ವರ್ಷಗಳ ನನ್ನ ಸಿನೆಮಾ ಮಾಡುವ ಕನಸು ಈಡೇರಿಸುವ ಸಲುವಾಗಿ ಎಲ್ಲವನ್ನೂ ಮರೆತೆ, ಕೊನೆಗೂ ಸಿನೆಮಾ ಮಾಡಿದರೆ ಕಾಕದೃಷ್ಟಿಬೀರಿ ಮಂದಾಕಿನಿ ಮುಳುಗುವಂತೆ ಮಾಡಿದರು, ಮಂಜುನಾಥ ಗೊಂಡಬಾಳ ಮತ್ತು ಚಂದ್ರಶೇಖರ ರವರು ಈ ಕಾರ್ಯಕ್ರಮ ಮಾಡಿ, ಜೀವನೋತ್ಸಾಹ ತುಂಬಿದ್ದಾರೆ, ಅದಕ್ಕಾಗಿ ನಾನು ಚಿರಋಣಿ ಎಂದರು. ಚಲನಚಿತ್ರ, ದೂರದರ್ಶನ ಕಲಾವಿದರು, ಬಿಬಿಎಂಪಿ, ಬೆಂಗಳೂರು ಸಹಾಯಕ ಆಯುಕ್ತ ಸಂಗಮೇಶ ಉಪಾಸೆ ೭೦ ಕವಿಗಳು ರಚಿಸಿದ ಕವಿಗಳ ಕಣ್ಣಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಕೃತಿ ಲೋಕಾರ್ಪಣೆ ಮಾತನಾಡಿ, ಸುರ್ವೆಯವರು ಮಾಡಿರುವ ಕೆಲಸ ಅದ್ಭುತ ಮತ್ತು ಅನನ್ಯ. ಅವರು ಹಣ ಮಾಡಲಿಲ್ಲ ಆದರೆ ಜನರನ್ನು ಗಳಿಸಿದ್ದಾರೆ, ಅದಕ್ಕಾಗಿ ಅವರ ಹುಟ್ಟುಹಬ್ಬ ಸಾರ್ವಜನಿಕವಾಗಿ ಮಾಡುತ್ತಿದ್ದಾರೆ. ಮಂಜುನಾಥ ಗೊಂಡಬಾಳರ ಸಾಹಸ ಹಾಗೂ ಪ್ರೀತಿಯನ್ನು ಮೆಚ್ಚಲೇಬೇಕು ಯುವ ಸಮುದಾಯಕ್ಕೆ ಅವರು ಪ್ರೇರಕ ಶಕ್ತಿ ಎಂದರು.
ಡಾ. ವಿ. ಆರ್. ನಾರ್ಲಾ ರಾಷ್ಟ್ರೀಯ ಪ್ರಶಸ್ತಿ ಪುರಸ್ಕ್ರತ ಹಿರಿಯ ಸಾಹಿತಿ ಪುಸ್ತಕಮನೆ ಹರಿಹರ ಪ್ರಿಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಕೊಪ್ಪಳ ಜಿಲ್ಲೆ ಹಿಂದುಳಿದಿಲ್ಲ ಕೊಪ್ಪಳದ ಜನರ ಮನಸ್ಥಿತಿ ಮಾತ್ರ ಹಿಂದೆಬಿದ್ದಿದೆ, ಇಲ್ಲಿನ ಕುಮಾರರಾಮ, ಆಂಜನೇಯ, ಮಹಾದೇವ ದೇವಾಲಯ, ಆನೆಗೊಂದಿಯನ್ನು ಗಮನಿಸಿದರೆ, ರಾಮಾಯಣ ಮತ್ತು ಮಹಾಭಾರತದ ಕಾಲಕ್ಕೂ ಇದು ಸರ್ಮದ್ಧ ನಾಡು, ನಾವು ಸರಿಯಾಗಿ ಕಟ್ಟಲು ಅಸರ್ಥರಾದ್ದರಿಂದ ಹಿಂದೆ ಬಿದ್ದಿದ್ದೇವೆ. ರಮೇಶ ಸುರ್ವೆ ಜಾಗದಲ್ಲಿ ಬೇರೆ ಯಾರೇ ಇದ್ದರೂ ಬಹು ಎತ್ತರಕ್ಕೆ ಬೆಳೆದುಬಿಡುತ್ತಿದ್ದರು, ಸ್ವಂತಕ್ಕೆ ಒಂದು ಮನೆಯನ್ನೂ ಕಟ್ಟಿಕೊಳ್ಳಲೂ ಸಾಧ್ಯವಾಗದೇ ನಿರಂತರ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಕೊಪ್ಪಳದಲ್ಲಿ ಕುಮಾರರಾಮನ ಮೂರ್ತಿ ಪ್ರತಷ್ಠಾಪನೆಗೊಳ್ಳಬೇಕು ಎಂದರು. ಅಳವಂಡಿಯ ವಿನೂತನ ಶಿಕ್ಷಣ ಸೇವಾ ಸಂಸ್ಥೆ ಪ್ರಧಾನ ಕಾರ್ಯದಶಿ ಸಿದ್ದಲಿಂಗಯ್ಯ ಹಿರೇಮಠ ಮತ್ತು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಸುರೇಶ ಭೂಮರೆಡ್ಡಿ, ನಿವೃತ್ತ ಕೆ.ಎ.ಎಸ್. ಅಧಿಕಾರಿ ಕೆ. ಮಲ್ಲಿನಾಥ, ಸೈಯ್ಯದ್ ಫೌಂಡೇಶನ್ ಛಾರಿಟೇಬಲ್ ಟ್ರಸ್ಟ ಅಧ್ಯಕ್ಷ ಕೆ. ಎಂ. ಸೈಯದ್, ಯುವ ಮುಖಂಡ ಗೂಳಪ್ಪ ಹಲಗೇರಿ, ಕಿರುತೆರೆ ನಟ ಎನ್. ಎಸ್. ಪಾಟೀಲ, ಹಾಸ್ಯ ಕಲಾವಿದ ವೈಶಂಪಾಯನ ಇದ್ದರು. ರಮೇಶ ಸುರ್ವೆಯವರನ್ನು ಈ ಸಂದರ್ಭದಲ್ಲಿ ಅದ್ಧೂರಿಯಾಗಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿದ್ದ ಗಣ್ಯರು ಕಲಾವಿದರನ್ನು ಹಾಗೂ ರಂಗಭೂಮಿ ಕಲಾವಿದೆ ಜ್ಯೋತಿ ಬಳ್ಳಾರಿಯನ್ನು ಸಹ ಸನ್ಮಾನಿಸಲಾಯಿತು.
ಜನಮನ ರಂಜಿಸಿದ ಸಾಂಸ್ಕೃತಿಕ ಕಾರ್ಯಕ್ರಮ : ಜ್ಯೂನಿಯರ್ ಉಪೇಂದ್ರ ಮತ್ತು ಜ್ಯೂನಿಯರ್ ವಿಷ್ಣುವರ್ಧನ ರವರಿಂದ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ, ಚಲನಚಿತ್ರ ನಟ ಮಿಮಿಕ್ರಿ ರಾಜ್‌ಗೋಪಾಲರಿಂದ ಹಾಸ್ಯ ಕಾರ್ಯಕ್ರಮ ಮತ್ತು ಸದಾಶಿವ ಪಾಟೀಲ ರವರಿಂದ ನಡೆದ ಸಂಗೀತ ಕಾರ್ಯಕ್ರಮ ಹಾಗೂ ವಿಜಯಕುಮಾರ ಗೊಂಡಬಾಳ ರಿಂದ ಕೆರೋಕೆ ಸಂಗೀತ ಕಾರ್ಯಕ್ರಮ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿತು. ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ (ರಿ) ಕೊಪ್ಪಳ, ವಿಶ್ವ ಎಜ್ಯುಕೇಶನಲ್ ಆಂಡ್ ವೆಲ್‌ಫೇರ್ ಅಕಾಡೆಮಿ (ರಿ) ಕೊಪ್ಪಳ ಮತ್ತು ಬ್ಲ್ಯೂ ಸ್ಟಾರ್ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘ (ರಿ) ಕೊಪ್ಪಳ ಕಾರ್ಯಕ್ರಮ ಸಂಘಟಿಸಿದ್ದರು. ಕಾರ್ಯಕ್ರಮದ ಸಂಘಟಕ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿಮಂಡಲ ಜಿಲ್ಲಾ ಸಂಚಾಲಕ ಮಂಜುನಾಥ ಗೊಂಡಬಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮೇಶ ಸುರ್ವೆ ಕಾರ್ಯಕ್ರಮ ನಿರೂಪಿಸಿದರು, ಶರಣು ವಂದಿಸಿದರು.

ಮಂದಾಕಿನಿ ಚಿತ್ರ ಪ್ರದರ್ಶನ : ಕಾರ್ಯಕ್ರಮಕ್ಕೂ ಮುನ್ನ ಚಲನಚಿತ್ರ ನಿದೇರ್ಶಕ ರಮೇಶ ಸುರ್ವೆ ಬರೆದಿರುವ ಮತ್ತು ನಂದಿತಾ ಹಾಡಿರುವ ಹಾಡಿಗೆ ಕರ್ನಾಟಕ ಸರಕಾರದ ರಾಜ್ಯ ಪ್ರಶಸ್ತಿ ಪಡಿದಿರುವ ಮಂದಾಕಿನಿ ಚಿತ್ರವನ್ನು ಪ್ರದರ್ಶನ ಮಾಡಲಾಯಿತು.

Advertisement

0 comments:

Post a Comment

 
Top