ಪದ್ಮಶ್ರೀ ಪುರಸ್ಕೃತ ಡಾ ಬಿ. ಆರ್. ಶೆಟ್ಟಿಯವರು ಮತ್ತು ನೆರೆಯ ಕೊಲ್ಲಿ ರಾಷ್ಟ್ರಗಳ ಬಂಟರ ಸಂಘದ ಅಧ್ಯಕ್ಷರುಗಳು ಹಾಗೂ ಮಂಗಳೂರಿನಿಂದ ಅತಿಥಿಗಳಾಗಿ ಆಗಮಿಸಿದ ಭಾಸ್ಕರ್ ರೈ ಕುಕ್ಕುವಳ್ಳಿ, ಮುಖ್ಯ ಸಂಘಟಕರಾದ ಶ್ರೀ ಸರ್ವೋತ್ತಮ ಶೆಟ್ಟಿಯವರನ್ನು ಹಾಗೂ ಇನ್ನಿತರ ಅತಿಥಿಗಳನ್ನು ಪಂಚವಾಧ್ಯ ತಂಡದೊಂದಿಗೆ ಕಾರ್ಯಕಾರಿ ಸಮಿತಿಯ ಸದಸ್ಯರು ಕಲಶದೊಂದಿಗೆ ಸಭಾಂಗಣಕ್ಕೆ ಬರಮಾಡಿಕೊಂಡರು.
ಡಾ. ಬಿ ಆರ್. ಶೆಟ್ಟಿಯವರು ಮತ್ತು ಡಾ. ಚಂದ್ರಕುಮಾರಿ ಆರ್. ಶೆಟ್ಟಿ ಯವರು ಹಾಗೂ ಇನ್ನಿತರ ಬಂಟರ ಸಂಘದ ಅಧ್ಯಕ್ಷರುಗಳು ಕಾರ್ಯಕಾರಿ ಸಮಿತಿಯ ಸದಸ್ಯರು ಜ್ಯೋತಿ ಬೆಳಗುವುದ ರೊಂದಿಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಿತು.
ಶ್ರೀ ಕಿರಣ್ ಶೆಟ್ಟಿ ನಿರ್ದೇಶನದಲ್ಲಿ ಕಾರ್ಯಕಾರಿ ಸಮಿತಿಯವರಿಂದ ಸ್ವಾಗತ ಗೀತೆ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾದ ಶ್ರೀ ಸಂತೋಷ್ ಶೆಟ್ಟಿಯವರು ಸ್ನೇಹ ಮಿಲನಕ್ಕೆ ಆಗಮಿಸಿದ ಎಲ್ಲಾ ಬಂಟ ಬಾಂಧವರನ್ನು ಹಾರ್ದೀಕವಾಗಿ ಸ್ವಾಗತಿಸಿದರು.
ಕು. ಐಶ್ವರ್ಯ ಗಣೇಶ್ ರೈ ಮತ್ತು ಅನುಷಾ ವಿನಯಕುಮಾರ್ ಶೆಟ್ಟಿ ಯವರಿಂದ ಮಹಾ ಗಣಪತಿ ಶೃತಿ ಪ್ರಾಥನಾ ನೃತ್ಯ ಶ್ರೀಮತಿ ಮಂಜುಳಾ ಗಣೇಶ್ ರೈ ಮತ್ತು ಅಮೃತಾ ವಿನಯ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿಬಂದಿತು.
ಯು.ಎ.ಇ. ಬಂಟ್ಸ್ ಕಾರ್ಯಕ್ರಮ ನಮ್ಮ ಟಿ.ವಿ ಯಿಂದ ನೇರ ಪ್ರಸಾರ
ಯು.ಎ.ಇ. ಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕಾರ್ಯಕ್ರಮದ ನೇರ ಪ್ರಸಾರವಾಗಿ, ಕರಾವಳಿ ಕರ್ನಾಟಕದ ಕಾಸರ ಗೋಡಿನಿಂದ ಕುಂದಾಪುರ ಹಾಗೂ ಮುಂಬೈ ನಗರದ ವೀಕ್ಷಕರು ದುಬಾಯಿಯಲ್ಲಿ ನಡೆಯುತಿದ್ದ ಕಾರ್ಯಕ್ರಮವನ್ನು ನೋಡಿ ಆನಂದಪಟ್ಟರು. ವಿನಯ ಕುಮಾರ ನೇತ್ರತ್ವದಲ್ಲಿ ನದೆದ ಈ ಪ್ರಯೋಗ ನಮ್ಮ ಟಿ.ವಿ. ಮಾಧ್ಯಮದ ಹೆಗ್ಗಳಿಕೆಯಾಗಿದೆ.
ದುಬಾಯಿಯ ಪುಟ್ಟ ಮಕ್ಕಳ ಬಾಲಿಹುಡ್ ಮಿಕ್ಸ್. ಎ ಪೈವ್ ಮ್ಯಾಜಿಕ್, ಅಬುಧಾಬಿ ಮಕ್ಕಳು ಭಾರತೀಯ ಸಂಸ್ಕೃತಿಯ ಅನಾವರಣ ’ಸಂಸ್ಕೃತಿ’ ವಿವಿಧ ಹಬ್ಬಗಳ ಆಚರಣೆಯ ನೃತ್ಯ ಪ್ರದರ್ಶನ ಅಕರ್ಷಣೀಯವಾಗಿತ್ತು. ಪಂಜಾಬಿ ನೃತ್ಯ ಮೆಚ್ಚುಗೆಯನ್ನು ಪಡೆಯಿತು. ಜಯಶ್ರೀ ಶೆಟ್ಟಿ ಮತ್ತು ಸಂದೀಪ್ ಶೆಟ್ಟಿ ತಂಡದವರ ಪ್ಯಾಶನ್ ಶೋ ಮೆಚ್ಚುಗೆ ಪಡೆಯಿತು.
0 comments:
Post a Comment