PLEASE LOGIN TO KANNADANET.COM FOR REGULAR NEWS-UPDATES



ಮುಸ್ಲಿಂ ಸಮಾಜದಲ್ಲಿ ಬಡವರ ಸಂಖ್ಯೆ ಹೆಚ್ಚಾಗಿದೆ. ಇತೀಚಿನ ದಿನಗಳಲ್ಲಿ ಖತ್ನಾ ಕಾರ್‍ಯಕ್ರಮಗಳಿಗೆ ಖರ್ಚು ಹೆಚ್ಚು. ಹೀಗಿರುವಾಗ ಇಂತಹ ಉಚಿತ ಖತ್ನಾ ಶಿಬಿರಗಳು ಉಪಯೋಗಕಾರಿಯಾಗುತ್ತವೆ. ಸತತ ಮೂರನೇ ಬಾರಿಗೆ ಉಚಿತ ಖತ್ನಾ ಶಿಬಿರ ಏರ್ಪಡಿಸಿರುವ ಭಾಗ್ಯನಗರದ ಜಾಮೀಯಾ ಮಜೀದ್ ಪಂಚ್ ಕಮಿಟಿಯ ಅಧ್ಯಕ್ಷರಾದ ಇಬ್ರಾಹಿಂ ಬಿಸರಳ್ಳಿ ಹಾಗೂ ಕಮಿಟಿಯ ಸರ್ವ ಸದಸ್ಯರಿಗೆ ಅಭಿನಂದನೆಗಳು ಎಂದು ಹಿರಿಯ ನ್ಯಾಯವಾದಿ ಹಾಗೂ ಜಿಲ್ಲಾ ವಕ್ಫ ಸಲಹಾ ಸಮಿತಿಯ ಆಡಳಿತಾಧಿಕಾರಿ ಪೀರಾ ಹುಸೇನ್ ಹೊಸಳ್ಳಿ ಹೇಳಿದರು. ಅವರು ಭಾಗ್ಯನಗರದಲ್ಲಿ ಜಾಮೀಯಾ ಮಸ್ಜಿದ್ ಪಂಚ್ ಕಮಿಟಿ ಹಾಗೂ ಡಾ.ಹಸನ್ ಅಲಿ ಸಹೋದರರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ್ ಖತ್ನಾ ಶಿಬಿರದ ಉದ್ಘಾಟನಾ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ಭಾಗ್ಯನಗರದಲ್ಲಿ ಮುಸ್ಲಿಂ ಸಮಾಜಕ್ಕೆ ಅವಶ್ಯಕವಾಗಿರುವ ಎಲ್ಲ ನೆರವನ್ನು ಜಿಲ್ಲಾ ವಕ್ಫ ಕಮಿಟಿಯಿಂದ ನೀಡುವುದಾಗಿ ಹೇಳಿದರು.
ಡಾ.ಹಸನ್ ಅಲಿ ನಿಂಗಾಪೂರ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿ ಖತ್ನಾದ ಮಹತ್ವವನ್ನು ವಿವರಿಸಿದರು. ನಂತರ ಬೇರೆ ಬೇರೆ ಊರುಗಳಲ್ಲಿ ನಡೆಸಿದ ಖತ್ನಾ ಶಿಬಿರಗಳ ಬಗ್ಗೆ ಮಾತನಾಡಿದರು.
ವೈಜ್ಞಾನಿಕವಾಗಿ ಹಾಗೂ ಧಾರ್ಮಿಕವಾಗಿ ಮಹತ್ವಪೂರ್ಣವಾದ ಖತ್ನಾ ಕಾರ್‍ಯಕ್ರಮವನ್ನು ಸತತ ೩ ವರ್ಷಗಳಿಂದ ಹಮ್ಮಿಕೊಂಡು ಅದರ ಲಾಭವನ್ನು ಎಲ್ಲರಿಗೂ ಸಿಗುವಂತೆ ಮಾಡುತ್ತಿರುವ ಕಾರ್‍ಯವನ್ನು ಹಿರಿಯ ನ್ಯಾಯವಾದಿ ಅಸೀಫ್ ಅಲಿ ಶ್ಲಾಘಿಸಿದರು.ಹತ್ತಾರು ವರ್ಷಗಳಿಂದ ನಿಸ್ವಾರ್ಥದಿಂದ ಖತ್ನಾ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿರುವ ಡಾ.ಹಸನ್ ಅಲಿ ಸಹೋದರರ ಸೇವೆಯನ್ನು ರಾಘವೇಂದ್ರ ಪಾನಘಂಟಿಯವರು ಸ್ಮರಿಸಿದರು.
ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದಂತಹ ಸಂದರ್ಭಗಳಿಂದ ಇಲ್ಲಿಯವರೆಗೆ ಬೆಳೆದು ಬಂದಿರುವ ಭಾಗ್ಯನಗರದ ಮುಸ್ಲಿಂ ಸಮಾಜದ ಬಂಧುಗಳು ಹಲವಾರು ಸೇವಾ ಕಾರ್‍ಯಕ್ರಮಗಳನ್ನು ಹಮ್ಮಿಕೊಂಡಿರುವುದು ಅಭಿನಂದನೀಯ. ಮುಸ್ಲಿಂ ಸಮಾಜಕ್ಕೆ ತಮ್ಮ ಸಹಾಯ,ಸಹಕಾರ ಎಂದಿಗೂ ಇರುತ್ತದೆ ಎಂದು ಭಾಗ್ಯನಗರದ ಖ್ಯಾತ ವಾಣಿಜ್ಯೋಧ್ಯಮಿ ಶ್ರೀನಿವಾಸ ಗುಪ್ತಾ ಹೇಳಿದರು. ಇದೇ ಸಂದರ್ಭದಲ್ಲಿ ಅವರು ೩೫,೦೦೦/- ರೂಗಳ ದೇಣಿಗೆಯನ್ನು ನೀಡುವುದಾಗಿ ಹೇಳಿದರು. ನಂತರ ಮಾತನಾಡಿದ ಸೈಯದ್ ಪೌಂಡೇಷನ್ ಅಧ್ಯಕ್ಷ ಕೆ.ಎಂ.ಸೈಯದ್ ಭಾಗ್ಯನಗರದ ಮುಸ್ಲಿಂ ಸಮಾಜಕ್ಕೆ ಅವಶ್ಯಕವಿರುವ ಎಲ್ಲ ಸಹಾಯ,ಸಹಕಾರ ನೀಡುವುದಾಗಿ ಹೇಳಿದರು.
ನಂತರ ಇದುವರೆಗೆ ೪೦,೦೦೦ಕ್ಕೂ ಹೆಚ್ಚು ಖತ್ನಾಗಳನ್ನು ಮಾಡಿರುವ ಡಾ.ಹಸನ್ ಅಲಿ ನಿಂಗಾಪೂರ ಇವರಿಗೆ ಹಾಗೂ ಜಿಲ್ಲಾ ವಕ್ಫ ಸಲಹಾ ಸಮಿತಿಯ ಆಡಳಿತಾಧಿಕಾರಿಯಾಗಿ ನೇಮಕವಾಗಿರುವ ಪೀರಾಹುಸೇನ್ ಹೊಸಳ್ಳಿಯವರಿಗೆ, ಕೊಡುಗೈದಾನಿ ವಾಣಿಜ್ಯೋಧ್ಯಮಿ ಶ್ರೀನಿವಾಸ ಗುಪ್ತಾ ಹಾಗು ಕೆ.ಎಂ.ಸೈಯದ್ ಇವರಿಗೆ ಸನ್ಮಾನ ಮಾಡಲಾಯಿತು.
ಅಧ್ಯಕ್ಷೀಯ ಭಾಷಣ ಮಾಡಿದ ಇಬ್ರಾಹಿಂಸಾಬ ಬಿಸರಳ್ಳಿ ಮಾತನಾಡಿ ಈ ಶಿಬಿರವನ್ನು ಹಮ್ಮಿಕೊಳ್ಳಲು ಸಹಾಯ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ವೇದಿಕೆಯ ಮೇಲೆ ತಾಲೂಕ ಪಂಚಾಯತ್ ಸದಸ್ಯರಾದ ದಾನಪ್ಪ ಕವಲೂರ, ಶ್ರೀನಿವಾಸ ಹ್ಯಾಟಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀಧರ್ ಹುರಕಡ್ಲಿ,ಹೊನ್ನೂರಸಾಬ ಬೈರಾಪೂರ, ಮರ್ದಾನಸಾಬ, ಮೌಲಾಸಾಬ, ದಾದಾಸಾಬ,ಖಾದರ್, ಮಂಜೂರಸಾಬ ಟಾಂಗಾ, ಮೌಲಾನಾ ಹಾಫೀಜ್ , ಸಲೀಂ ಸಾಬ್, ಮಹ್ಮದ್ ಅಬ್ದುಲ್ ಜಲೀಲ್, ಗ್ರಾ.ಪಂ. ಸದಸ್ಯರಾದ ಚೆನ್ನಪ್ಪ ತಟ್ಟಿ,ದೇವಪ್ಪ ಮಗಜಿ ಇನ್ನಿತರರು ಉಪಸ್ಥಿತರಿದ್ದರು.ಕಾರ್‍ಯಕ್ರಮದಲ್ಲಿ ಭಾಗ್ಯನಗರ ಮುಸ್ಲಿಂ ಸಮಾಜದ ಗುರು ಹಿರಿಯರು ಉಪಸ್ಥಿತರಿದ್ದರು.ಹಾಫೀಜ್‌ರು ಕುರಾನ್ ಪಠಣ ಮಾಡಿದರು. ಕಾರ್‍ಯಕ್ರಮವನ್ನು ಸಿರಾಜ್ ಬಿಸರಳ್ಳಿ ನಡೆಸಿಕೊಟ್ಟರು. ನಂತರ ನಡೆದ ಖತ್ನಾ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮಕ್ಕಳಿಗೆ ಉಚಿತವಾಗಿ ಖತ್ನಾ ನೆರವೇರಿಸಲಾಯಿತು. ಅವರಿಗೆ ಬಟ್ಟೆ, ಔಷದಿ ಮತ್ತು ಗುಳಿಗೆಗಳನ್ನು ವಿತರಿಸಲಾಯಿತು. ಶಿಬಿರದಲ್ಲಿ ಕೊಪ್ಪಳ,ಭಾಗ್ಯನಗರ, ಯತ್ನಟ್ಟಿ,ಓಜನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಮುಸ್ಲಿಂ ಬಂಧುಗಳು ಭಾಗವಹಿಸಿದ್ದರು. ಕಾರ್‍ಯಕ್ರಮಕ್ಕೆ ಆಗಮಿಸಿದ ಸರ್ವರಿಗೆ ಅನ್ನ ಸಂತರ್ಪಣೆ ನಡೆಯಿತು.


Advertisement

0 comments:

Post a Comment

 
Top