ಕೊಪ್ಪಳದಿಂದ ಗುಲ್ಬರ್ಗಾದವರೆಗೆ ನಡೆದಿರುವ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಗವಿಮಠದಿಂದ ಆರಂಭಗೊಂಡ ಮೆರವಣಿಗೆಯ ಉದ್ದಕ್ಕೂ ಕೊಪ್ಪಳದ ವಿವಿದ ಸಂಘಟನೆಗಳು ಭಾಗವಹಿಸಿದ್ದವು. ಅಟೋ ಚಾಲಕರ ಸಂಘ, ಹಮಾಲರ ಸಂಘ, ಹಡಪದ ಸಮಾಜದವರು, ಇನ್ನರ್ ವೀಲ್ ಕ್ಲಬ್, ರೈತ ಹೋರಾಟಗಾರರ, ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಮೆರವಣಿಗೆ ಗವಿಮಠದಿಂದ ಆರಂಭಗೊಂಡು ಜವಾಹರ ರಸ್ತೆ ಮುಖಾಂತರ ಅಶೋಕ ಸರ್ಕಲ್ ಮೂಲಕ ಮೈದಾನಕ್ಕೆ ತೆರಳಿತು. ಅಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಬಸವಂತರಾಯ ಕುರಿ, ಅಮರೇಗೌಡ ಬಯ್ಯಾಪೂರ, ಕರಡಿ ಸಂಗಣ್ಣ, ರಾಘವೇಂದ್ರ ಕುಷ್ಟಗಿ ಸೇರಿದಂತೆ ಹಲವಾರು ಹೋರಾಟಗಾರರು ಮಾತನಾಡಿದರು. ಗವಿಮಠದ ಶ್ರೀಗಳು ಕೊನೆಯಲ್ಲಿ ಮಾತನಾಡಿ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದರು.
Home
»
»Unlabelled
» 371ನೇ ಕಲಂ ತಿದ್ದುಪಡಿಗೆ ಒತ್ತಾಯಿಸಿ ಬೃಹತ್ ಜಾಥಾ
Subscribe to:
Post Comments (Atom)
0 comments:
Post a Comment