PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಮಾ. :. ನಗರದ ಆದ್ಯ ದೈವ ಶ್ರೀ ಗವಿಸಿದ್ಧೇಶ್ವರ ಮಠ ಮತ್ತು ಕೊಪ್ಪಳ ಜಿಲ್ಲೆಯ ಐತಿಹಾಸಿಕ ಮತ್ತು ಧಾರ್ಮಿಕ ದರ್ಶನದ ಸಾಕ್ಷ್ಯಚಿತ್ರಕ್ಕೆ ಜಗದ್ಗುರು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಜ್ಯೋತಿ ಬೆಳಗಿಸುವದರ ಮುಲಕ ಚಾಲನೆ ನೀಡಿದರು.
ಸಾಹಿತ್ಯ ಎಂಟರ್ ಪ್ರೈಸಸ್ ಶ್ರೀ ಸಹಸ್ರಾಂಜನೇಯ ಪಿಕ್ಚರ್‍ಸ್ ವತಿಯಿಂದ ನಡೆಯುತ್ತಿರುವ ಈ ಸಾಕ್ಷ್ಯ ಚಿತ್ರಗಳು ದೇಶದಲ್ಲಿಯೇ ಹೆಸರು ಮಾಡಲಿ, ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡಿರುವ ಮಂಜುನಾಥ ಗೊಂಡಬಾಳ ಎತ್ತರಕ್ಕೆ ಬೆಳೆಯಲಿ ಇದಕ್ಕೆ ಎಲ್ಲರ ಸಹಕಾರವೂ ದೊರೆಯಲಿ ಎಂದ ಶ್ರೀಗಳು, ಕೊಪ್ಪಳವೇ ಒಂದು ಕ್ರಿಯಾಶೀಲತೆಯ ಕೇಂದ್ರ ಹಿಂದುಳಿದ ನಾಡಿನಲ್ಲಿ ಇಂಥಹ ಹೊಸ ಪ್ರಯತ್ನ ಸಫಲವಾಗಲೆಂದು ಶುಭ ಹಾರೈಸಿದರು. ಇಲ್ಲಿ ಬಹಳಷ್ಟು ಹೊಸತನವಿದೆ ಎಂದು ಶುಭ ಹಾರೈಸಿದರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುರೇಶ ಭೂಮರೆಡ್ಡಿ ಮತ್ತು ಗುತ್ತಿಗೆದಾರ ಎಸ್. ಆರ್. ನವಲಿ ಹಿರೇಮಠರವರು ಕ್ಯಾಮರಾಕ್ಕೆ ಆನ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನಿಡಿದರು. ವಿನೂತನ ಶಕ್ಷಣ ಸೇವಾ ಸಂಸ್ಥೆಯ ಕಾರ್ಯದರ್ಶಿ ಸಿದ್ದಲಿಂಗಯ್ಯ ಹಿರೇಮಠ ರವರು ಮಗುವಿಗಾಗಿ ಮಕ್ಕಳ ಕವನ ಸಂಕಲನವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಡಾ. ಎಂ. ಬಿ. ರಾಂಪೂರ, ಜಿ. ಪಂ. ಸದಸ್ಯ ನಾಗನಗೌಡ ಮಾಲಿಪಾಟೀಲ್, ಜಿ. ಪಂ. ಸದಸ್ಯೆ ನೇತ್ರಾವತಿ ಮಲ್ಲಪ್ಪ, ವೆಂಕನಗೌಡ ಪಾಟೀಲ್ ಹೊರತಟ್ನಾಳ, ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ, ಭರಮಣ್ಣ ಲಳಗಿ, ಮಲ್ಲಪ್ಪ ಗುಮಗೇರಿ, ವಿಜಯ ಅಮೃತರಾಜ್, ಶಿವಾನಂದ ಹೊದ್ಲೂರ,ಚಿತ್ರದ ನಿರ್ಮಾಪಕ ಮಂಜುನಾಥ ಜಿ. ಗೊಂಡಬಾಳ, ಸಹ ನಿರ್ಮಾಪಕ ಕೆ. ಎಂ. ಸೈಯ್ಯದ್, ಜಯ ಕರ್ನಾಟಕ ಸಂಘದ ವಿಜಯಕುಮಾರ ಕವಲೂರ ಇನ್ನಿತರರು ಉಪಸ್ಥಿತರಿದ್ದರು. ಐದು ದಿನಗಳ ಕಾಲ ಕೊಪ್ಪಳ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಚಿತ್ರೀಕರಣ ನಡೆಯಲಿದ್ದು, ರಾಜ್ಯ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಮಲ್ಲಿಕಾರ್ಜುನ ಬೆಂಗಳೂರ ರವರು ಶ್ರೀ ಗವಿಮಠ ಮತ್ತು ನಗರದ ವಿವಿಧ ಸ್ಥಳಗಳನ್ನು ಚಿತ್ರೀಕರಿಸಿದರು. ನಂತರ ಟಿ. ವಿ. ಯಲ್ಲಿ ಹಾಗೂ ಡಿವಿಡಿ ರೂಪದಲ್ಲಿ ಸದರಿ ಸಾಕ್ಷ್ಯಚಿತ್ರ ಹೊರಬರಲಿದೆ ಎಂದು ತಿಳಿಸಿದರು. ಸೋಮುವಾರ ಆನೆಗೊಂದಿ, ಕನಕಗಿರಿ, ಗವಿಮಠದ ಕಾರ್ಯಕ್ರಮ, ಕುಮ್ಮಟದುರ್ಗದ ಕುಮಾರರಾಮ ಮುಂತಾದ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಯಲಿದೆ.

















z

Advertisement

0 comments:

Post a Comment

 
Top