PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠ, ಕೊಪ್ಪಳದಲ್ಲಿ ದಿನಾಂಕ ೨೮.೦೩.೨೦೧೧ ಸೋಮವಾರದಂದು ಲಿಂಗೈಕ್ಯ ಶ್ರೀ ಶಿವಶಾಂತವೀರ ಮಹಾಶಿವಯೋಗಿಗಳ ೮ನೇಯ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವು ಜರುಗಲಿದೆ. ಅಂದು ಬೆಳಿಗ್ಗೆ ೭.೩೦ಕ್ಕೆ ಪರಮಪೂಜ್ಯ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಗರದ ಶ್ರೀ ಮಳೆಮಲ್ಲೇಶ್ವರ ದೇವಸ್ಥಾನದಿಂದ ಶ್ರೀಗವಿಮಠದವರೆಗೆ ಪಾದಯಾತ್ರೆ ಕಾರ್ಯಕ್ರಮ ಜರುಗುವದು. ಅಂದೆ ಬೆಳಿಗ್ಗೆ ೧೦.೩೦ಕ್ಕೆ ಬಸವೇಶ್ವರ ವೃತ್ತದಲ್ಲಿನ ನೂತನ ಮಹಾದ್ವಾರ ಕಟ್ಟಡದ ಉದ್ಘಾಟನೆ ಹಾಗೂ ಕಳಸಾರೋಹಣವನ್ನು ಷ. ಬ್ರ. ಶ್ರೀ ಬಸವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀಧರ ಮುರುಡಿ, ಹಿರೇಮಠ, ಯಲಬುರ್ಗಾ ಪೂಜ್ಯರ ಲಿಂಗ ಹಸ್ತದಿಂದ ಜರುಗುವದು. ಬೆಳಿಗ್ಗೆ ೧೧.೦೦ ಗಂಟೆಗೆ ೧೦೮ ಅಡಿ ಎತ್ತರದ ರಾಜಗೋಪುರ ಕಟ್ಟಡದ ಶಿಲಾನ್ಯಾಸವನ್ನು ಶ್ರೀ ಮ. ನಿ. ಪ್ರ. ಡಾ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ವಿರಕ್ತಮಠ, ಕನಕಗಿರಿ ಪೂಜ್ಯರು ಶ್ರೀಮಠದ ಆವರಣದಲ್ಲಿ ನೆರವೇರಿಸುವರು. ಅಂದು ಸಾಯಂಕಾಲ ೬.೩೦ ಗಂಟೆಗೆ ಕೈಲಾಸಮಂಟಪದಲ್ಲಿ ಜರುಗಲಿರುವ ಗುರುಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಹಿರೇನಾಗಾವಿಯ ಶ್ರೀ ಮ. ನಿ. ಪ್ರ. ಜಯಶಾಂತಲಿಂಗ ಮಹಾಸ್ವಾಮಿಗಳು, ಹೆಬ್ಬಾಳದ ಷ. ಬ್ರ. ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ, ಹೆಬ್ಬಾಳ, ಢವಳಗಿಯ ಪರಮಪೂಜ್ಯ ಶ್ರೀ ಘನಮಠೇಶ್ವರ ಮಹಾಸ್ವಾಮಿಗಳು ಅಲ್ಲದೇ, ಶ್ರೀ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಪ್ರಧಾನ ಸಂಚಾಲಕರಾದ ಡಾ. ಬಸವರಾಜ ಪಾಟೀಲ ಸೇಡಂ ಆಗಮಿಸಲಿದ್ದಾರೆ. ಶ್ರೀ ಷ. ಬ್ರ. ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ರಚಿಸಿದ ಶಿವಶಾಂತ ಎಂಬ ಕವನಸಂಕಲನವು ಲೋಕಾರ್ಪಣೆಯಾಗಲಿದೆ. ಇದೇ ವೇದಿಕೆಯಲ್ಲಿ ಪಂ. ಪ್ರಕಾಶ ಸೊಂಟಕ್ಕಿ ಹಾಗೂ ಶ್ರೀಮತಿ ಸುಮಾ ಸುಧೀಂದ್ರ ಬೆಂಗಳೂರು ತಂಡದವರಿಂದ ಫ್ಯೂಜನ್ ಸಂಗೀತ ಕಾರ್ಯಕ್ರಮ ನಡೆಯಲಿದೆ. ಅಪಾರ ಸಂಖ್ಯೆಯಲ್ಲಿ ಸದ್ಭಕ್ತರು ಆಗಮಿಸಿ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.
ಉಚಿತ ಆರೋಗ್ಯ ತಪಾಸಣೆ
ಈ ಗುರುಸ್ಮರಣೆ ಕಾರ್ಯಕ್ರಮದ ಅಂಗವಾಗಿ ಪೂಜ್ಯ ಶ್ರೀಗಳ ಸಂಕಲ್ಪದಂತೆ ಶ್ರೀ ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಬೆಳಿಗ್ಗೆ ೯.೩೦ ರಿಂದ ಸಂಜೆ ೫.೦೦ ಗಂಟೆಯವರೆಗೆ ಪ್ರಖ್ಯಾತ ತಜ್ಞ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ. ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು

Advertisement

0 comments:

Post a Comment

 
Top