PLEASE LOGIN TO KANNADANET.COM FOR REGULAR NEWS-UPDATES




ಕೊಪ್ಪಳ ಮಾ. : ಸುವರ್ಣಯುಗವೆಂದೇ ಬಣ್ಣಿಸಲಾಗಿರುವ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿ ಆನೆಗೊಂದಿಯ ಭವ್ಯ ಇತಿಹಾಸವನ್ನು ಮೆಲುಕು ಹಾಕುವ ರೀತಿಯಲ್ಲಿ ಈ ಬಾರಿ ಅದ್ಧೂರಿ ಆನೆಗೊಂದಿ ಉತ್ಸವವನ್ನು ಮಾ. ೨೩ ಮತ್ತು ೨೪ ರಂದು ಎರಡು ದಿನಗಳ ಕಾಲ ಆನೆಗೊಂದಿಯಲ್ಲಿ ಏರ್ಪಡಿಸಲಾಗಿದೆ.
ಮಾ. ೨೩ ರಂದು ಸಂಜೆ ೪ ಗಂಟೆಗೆ ಆನೆಗೊಂದಿ ಉತ್ಸವದ ಮುಖ್ಯ ವೇದಿಕೆಯಾಗಿರುವ ’ಶ್ರೀ ಪ್ರೌಢದೇವರಾಯ ವೇದಿಕೆ’ಯಲ್ಲಿ ಉತ್ಸವದ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನೆರವೇರಿಸಲಿದ್ದಾರೆ. ಮಾ. ೨೩ ರಂದು ಮುಖ್ಯ ವೇದಿಕೆ ’ಶ್ರೀ ಪ್ರೌಢದೇವರಾಯ ವೇದಿಕೆ’ ಹಾಗೂ ಆನೆಗೊಂದಿ ಗ್ರಾಮದಲ್ಲಿನ ’ಕುಪ್ಪಮ್ಮ ರಾಣಿ ವೇದಿಕೆ’ಯಲ್ಲಿ ಜರುಗುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಇಂತಿದೆ.
’ಶ್ರೀ ಪ್ರೌಢದೇವರಾಯ ವೇದಿಕೆ ಯಲ್ಲಿನ ಕಾರ್ಯಕ್ರಮಗಳು:
ಸಂಜೆ ೪ ಗಂಟೆಗೆ ಉತ್ಸವದ ಉದ್ಘಾಟನೆ ಇದಕ್ಕೂ ಮುನ್ನ ಬೆಂಗಳೂರಿನ ಕಿಕ್ಕೇರಿ ಕೃಷ್ಣಮೂರ್ತಿ ಅವರಿಂದ ನಾಡಗೀತೆ. ಸಂಜೆ ೫ ಗಂಟೆಗೆ ಮಾರುತಿ ಭಜಂತ್ರಿ ಅವರಿಂದ ಷಹನಾಯ್ ವಾದನ, ೫-೧೦ ಕೆ ಆನೆಗೊಂದಿಯ ಚಂಪಕಮಾಲಾ ರಿಂದ ವಚನಗಾಯನ, ೫-೨೦ಕ್ಕೆ ಧಾರವಾಡದ ಶಫೀಕಖಾನ್, ಮುಂಬೈನ ಸಮೀರ್ ಎಲ್ ರಾವ್, ಕಲ್ಕತ್ತಾದ ಸಂದೀಪ್ ಯಾನ್ ಚಟರ್ಜಿ ಅವರಿಂದ ಹಿಂದುಸ್ತಾನಿ ವಾದ್ಯತ್ರಯ ಕಾರ್ಯಕ್ರಮ, ೬ಕ್ಕೆ ರಾಜಸ್ತಾನ ನೃತ್ಯ ಕಲಬೇಲಿಯಾ, ೬-೧೫ಕ್ಕೆ ಮರ‍್ಲಾನಹಳ್ಳಿಯ ಎಸ್. ರಾಮಾಂಜನೇಯಲು ರಿಂದ ಕ್ಲಾರಿಯೋನಟ್ ವಾದನ, ೬-೩೦ಕ್ಕೆ ಗಂಗಾವತಿಯ ಸುರಯ್ಯ ಬೇಗಂ ಮುದ್ದಾಬಳ್ಳಿ ರಿಂದ ಸುಗಮ ಸಂಗೀತ, ೬-೪೦ಕ್ಕೆ ಹರಿಯಾಣ ರಾಜ್ಯ ತಂಡದಿಂದ ಹೋಲಿ ನೃತ್ಯ, ೬-೫೦ಕ್ಕೆ ಹುಸೇನಸಾಬ ಗುಂಡೂರ ರಿಂದ ರಂಗಗೀತೆ, ೭ ಕ್ಕೆ ಬೆಂಗಳೂರಿನ ಆಸ್ಪೆಕ್ಟ್ ಕನ್ಸ್‌ಲ್ಟನ್ಸಿ ಮತ್ತು ನವೀನ್‌ಕೃಷ್ಣ ತಂಡದಿಂದ ಶ್ರೀಕೃಷ್ಣದೇವರಾಯ ರೂಪಕ, ೭-೪೫ಕ್ಕೆ ಬೆಂಗಳೂರಿನ ಬಿ.ಕೆ. ಸುಮಿತ್ರಾ ತಂಡದಿಂದ ಸುಗಮ ಸಂಗೀತ, ೮-೧೫ಕ್ಕೆ ಬೆಂಗಳೂರಿನ ವಿಕ್ರಂ ಸೂರಿ ತಂಡದಿಂದ ನೃತ್ಯರೂಪಕ, ೮-೪೫ಕ್ಕೆ ಪಟ್ಟಲಚಿಂತಿಯ ಯಮನೂರಪ್ಪ ಭಜಂತ್ರಿ ರಿಂದ ತತ್ವಪದ, ೯ ಕ್ಕೆ ರಾಯಚೂರಿನ ರೂಪಾ ನಂಜರಗಿ ತಂಡದಿಂದ ಭರತ ನಾಟ್ಯ, ೯-೩೦ ಕ್ಕೆ ಬೆಂಗಳೂರಿನ ಚಲನಚಿತ್ರ ಹಿನ್ನೆಲೆ ಗಾಯಕರಾದ ಅಜಯ್ ವಾರಿಯರ್ ಸಂಗಡಿಗರಿಂದ ಚಲನಚಿತ್ರ ಸಂಗೀತ, ೧೦-೩೦ಕ್ಕೆ ಬೆಂಗಳೂರಿನ ನಾಟ್ಯಾಂಜನ ಸ್ಕೂಲ್ ಆಫ್ ಡ್ಯಾನ್ಸ್ ಅಂಡ್ ಮ್ಯೂಜಿಕ್ ತಂಡದಿಂದ ನೃತ್ಯ ರೂಪಕ, ೧೧ ಕ್ಕೆ ರಾಜಮಹ್ಮದ್ ಬಿ. ಕೆಸರಟ್ಟಿ ರಿಂದ ದಾಸವಾಣಿ, ೧೧-೧೫ಕ್ಕೆ ಹುಬ್ಬಳ್ಳಿಯ ಪಂ. ನಾಗನಾಥ್ ಒಡೆಯರ್ ರಿಂದ ಹಿಂದುಸ್ತಾನಿ ಗಾಯನ, ೧೧-೪೫ಕ್ಕೆ ಬೆಂಗಳೂರಿನ ಶೋಭಾ ಮಹೇಶ್ ತಂಡದಿಂದ ಜಾನಪದ ಸಂಗೀತ, ಹಾಗೂ ರಾತ್ರಿ ೧೨ ಗಂಟೆಗೆ ಕೊಪ್ಪಳದ ತಾಲೂಕಾ ರಂಗ ಕಲಾವಿದರ ಸಂಘದಿಂದ ’ಎಚ್ಚಮನಾಯಕ’ ನಾಟಕ. ಕಾರ್ಯಕ್ರಮಗಳು ಜರುಗಲಿವೆ.


ಕುಪ್ಪಮ್ಮ ರಾಣಿ ವೇದಿಕೆಯ ಕಾರ್ಯಕ್ರಮಗಳು :


ಮಾ. ೨೩ ರಂದು ಸಂಜೆ ೫ ಗಂಟೆಗೆ ಬಿಜಾಪುರದ ಗಿರಿಮಲ್ಲಪ್ಪ ಭಜಂತ್ರಿ ರಿಂದ ಷಹನಾಯ್ ವಾದನ, ೫-೧೦ಕ್ಕೆ ಯಲಬುರ್ಗಾದ ಶರಣಕುಮಾರ ಬಂಡಿ ರಿಂದ ವಚನಗಾಯನ, ೫-೨೦ಕ್ಕೆ ಕಲ್ಲೂರಿನ ಮಹಾಂತೇಶ ಶಾಸ್ತ್ರಿ ಹಿರೇಮಠ ರಿಂದ ತತ್ವಪದ, ೫-೩೦ಕ್ಕೆ ಬಿನ್ನಾಳದ ಜೀವನಸಾಬ ವಾಲಿಕಾರ ರಿಂದ ಗೀಗೀ ಪದ, ೫-೪೦ಕ್ಕೆ ಭಾಗ್ಯನಗರದ ಅಂಬಿಕಾ ಉಪ್ಪಾರ ರಿಂದ ರಂಗಗೀತೆ, ೬ ಗಂಟೆಗೆ ಕೊಪ್ಪಳ ಜಿಲ್ಲೆ ನಾಗರಿಕ ವೇದಿಕೆ ತಂಡದಿಂದ ಮಯೂರ ದೀಪ ನೃತ್ಯ,, ೬-೨೦ಕ್ಕೆ ಉತ್ತರಪ್ರದೇಶ ರಾಜ್ಯ ತಂಡದಿಂದ ಮಯೂರ ನೃತ್ಯ, ೬-೪೦ಕ್ಕೆ ಬಳ್ಳಾರಿಯ ಅನೂಷಾ ಜಿ. ಕಾಡ್ಲೂರ ರಿಂದ ಸುಗಮ ಸಂಗೀತ, ೭-೧೦ಕ್ಕೆ ವಿದ್ವಾನ್ ಮೈಸೂರ ಮಂಜುನಾಥ್ ಮತ್ತು ನಾಗರಾಜ್ ರಿಂದ ಫ್ಯೂಜನ್ ಸಂಗೀತ, ೭-೪೦ಕ್ಕೆ ಪಂಜಾಬ್ ರಾಜ್ಯ ತಂಡದಿಂದ ಭಾಂಗಡಾ ನೃತ್ಯ, ೮ಕ್ಕೆ ಗಂಗಾವತಿಯ ಪಂಚಾಕ್ಷರಿ ಸ್ವಾಮಿ ಕುರುಬಗೊಂಡ ರಿಂದ ಸುಗಮ ಸಂಗೀತ, ೮-೧೦ಕ್ಕೆ ಬೆಂಗಳೂರಿನ ವೇಮಗಲ್ ನಾರಾಯಣಸ್ವಾಮಿ ರಿಂದ ಜಾನಪದ ಗಾಯನ, ೮-೪೦ಕ್ಕೆ ಚಿತ್ರದುರ್ಗದ ಅಂಜನಾ ನೃತ್ಯ ಶಾಲೆಯಿಂದ ನೃತ್ಯ ರೂಪಕ, ೯-೧೦ಕ್ಕೆ ಗಂಗಾವತಿಯ ಶೃಂಗೇರಿ ಶಾರದಾಂಬಾ ಭಜನಾ ಮಂಡಳಿಯಿಂದ ಜಾನಪದ ಭಜನೆ, ೯-೨೫ಕ್ಕೆ ಮೋರನಾಳದ ಕೇಶಪ್ಪ ಬಾಳಪ್ಪ ಶಿಳ್ಳಿಕ್ಯಾತರ ತಂಡದಿಂದ ತೊಗಲುಗೊಂಬೆಯಾಟ, ೯-೫೦ಕ್ಕೆ ಧಾರವಾಡದ ಡಿ. ಕುಮಾರದಾಸ ರಿಂದ ಹಿಂದುಸ್ತಾನಿ ಗಾಯನ, ೧೦-೨೦ಕ್ಕೆ ಗೊರಟಾ ಬೀದರ್‌ನ ಸಿದ್ರಾಮಯ್ಯ ಮಠಪತಿ ರಿಂದ ಭಾವಗೀತೆಗಳು, ೧೦-೪೦ಕ್ಕೆ ಕಾರಟಗಿಯ ಭೂಮಿಕಾ ಮತ್ತು ವಿನುತಾರಿಂದ ಭರತನಾಟ್ಯ, ೧೧ಕ್ಕೆ ಮರ‍್ಲಾನಹಳ್ಳಿಯ ಶಿವಲೀಲಾ ಹಾದಿಮನಿರಿಂದ ಸುಗಮ ಸಂಗೀತ, ೧೧-೧೦ಕ್ಕೆ ದಾವಣಗೆರೆಯ ಗುರು ವಾದ್ಯವೃಂದದಿಂದ ಸಂಗೀತ ಲಹರಿ, ೧೧-೩೦ಕ್ಕೆ ಬೆಂಗಳೂರಿನ ರೇಖಾ ಹರಿನಾಥ್ ರಿಂದ ಕರ್ನಾಟಕ ಸಂಗೀತ ಹಾಗೂ ರಾತ್ರಿ ೧೨ಕ್ಕೆ ಗಂಗಾವಗತಿಯ ನೀಲಕಂಠೇಶ್ವರ ನಾಟ್ಯ ಸಂಘದಿಂದ ’ಗಿರಿಜಾ ಕಲ್ಯಾಣ’ ಬಯಲಾಟ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ಆನೆಗೊಂದಿಯಲ್ಲಿ ಮಾ. ೨೩ ರಂದು ಎರಡೂ ವೇದಿಕೆಗಳಲ್ಲಿ ಸಂಗೀತ, ರಂಗಕಲೆ, ಜಾನಪದ, ಸಾಂಸ್ಕೃತಿಕ ಮುಂತಾದ ಕ್ಷೇತ್ರಗಳ ಪ್ರಸಿದ್ಧ ಕಲಾವಿದರಿಂದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿದ್ದು, ಕಲಾ ಪ್ರೇಮಿಗಳು, ಸಂಗೀತಾಸಕ್ತರು ಕಾರ್ಯಕ್ರಮಗಳ ರಸದೌತಣವನ್ನು ಸವಿದು, ಸಂಭ್ರಮಿಸಬಹುದಾಗಿದೆ.

Advertisement

0 comments:

Post a Comment

 
Top