ಕೊಪ್ಪಳ, ಮಾ. ೫: ಯಾವುದೇ ಯೋಜನೆಯ ಯಶಸ್ಸು, ಅನುಷ್ಠಾನಾಧಾರಿತವಾಗಿದ್ದು, ಸಾರ್ವಜನಿಕ ಮಾಹಿತಿ ಆಂದೋಲನ ಈ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲಾಗಿದೆ ಎಂದು ಕೊಪ್ಪಳ ಸಂಸದ ಶಿವರಾಮಗೌಡ ಅಭಿಪ್ರಾಯಪಟ್ಟಿದ್ದಾರೆ.
ಗಂಗಾವತಿಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾರತ ಸರ್ಕಾರದ ವಾರ್ತಾ ಶಾಖೆ, ಪಿ.ಐ.ಬಿ. ಹ"ಕೊಂಡಿರುವ ಮೂರು ದಿನಗಳ ಭಾರತ ನಿರ್ಮಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಾಹಿತಿಯ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳದೆ ಹಲವು ಸರ್ಕಾರಗಳೇ ಉರುಳಿ ಹೋಗಿವೆ. ಮಾಹಿತಿ ಅತ್ಯಂತ ಮಹತ್ವದ ಹಾಗೂ ಪರಿಣಾಮಕಾರಿ ಅಸ್ತ್ರವಾಗಿದೆ. ಕೇಂದ್ರ ಯುಪಿಎ ಸರ್ಕಾರ ೨೦೧೧-೧೨ನೇ ಸಾಲಿನಲ್ಲಿ ಭಾರತ ನಿರ್ಮಾಣಕ್ಕಾಗಿ ೧೦ಸಾವಿರ ಕೋಟಿ ರೂಪಾ ಯೋಜನೆ ಪ್ರಕಟಿಸಿದೆ. ಸಮಾಜದ ಎಲ್ಲರಿಗೂ ಆರೋಗ್ಯ, ಆಹಾರ, ಆಸರೆ, ಅಕ್ಷರಜ್ಞಾನ ಹಾಗೂ ಅರಿವು ಮೂಡಿಸುವುದು ಯೋಜನೆಯ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಒಗ್ಗೂಡಿ ದುಡಿಯುತ್ತಿವೆ ಎಂದು ಸಂಸದ ಶಿವರಾಮಗೌಡ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವ"ಸಿ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡರ ಉದ್ದೇಶವೂ ಯೋಜನೆಗಳ ಸಮರ್ಥ ಅನುಷ್ಠಾನವೇ ಆಗಿದೆ. ಈ ನಿಟ್ಟಿನಲ್ಲಿ ಯಾವುದೇ ಯೋಜನೆಯ ಯಶಸ್ಸಿನ ಫಲ ಎರಡೂ ಸರ್ಕಾರಗಳಿಗೆ ಸಮಾನವಾಗಿ ಸಲ್ಲುತ್ತದೆ ಕೇಂದ್ರ ಸರ್ಕಾರ ಹಲವು ಜನಪರ ಯೋಜನೆ ರೂಪಿಸಿದ್ದು ಅದಕ್ಕೆ ಹಣವನ್ನೂ ನೀಡುತ್ತಿದೆ, ಆದರೆ, ಇದನ್ನು ಅನುಷ್ಠಾನ ಮಾಡುವ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ರಾಜ್ಯ ಸರ್ಕಾರ ಈ ಕಾರ್ಯವನ್ನು ಯಶಸ್ವಿಯಾಗಿ ಮಾಡಿದೆ. "ಗಾಗಿಯೇ ಕಾರ್ಯಕ್ರಮ ಅನುಷ್ಠಾನದಲ್ಲಿ ರಾಜ್ಯ ದೇಶದಲ್ಲೇ ೨ನೇ ಸ್ಥಾನ ಪಡೆದಿದೆ. ಹನುಮ ಹುಟ್ಟಿದ ನಾಡು ಗಂಗಾವತಿ, ಪ"ತ್ರ ಪುಣ್ಯತಾಣವೂ ಆಗಿದ್ದು, ಈ ತಾಲೂಕಿನಲ್ಲಿ ಹಲವು ಮಹತ್ವದ, ಐತಿಹಾಸಿಕ ಹಾಗೂ ಪುರಾಣ ಪುಣ್ಯ ತಾಣಗಳಿದ್ದು, ಪ್ರವಾಸೋದ್ಯಮಕ್ಕೆ "ಫುಲ ಅವಕಾಶ"ದೆ. ಈ ನಿಟ್ಟನಲ್ಲಿ ತಾಲೂಕಿನ ಪ್ರವಾಸಿ ತಾಣಗಳ ಬಗ್ಗೆಯೂ ಹೆಚ್ಚಿನ ಪ್ರಚಾರ ಮಾಡುವುದು ಅಗತ್ಯ ಎಂದು ಪ್ರತಿಪಾದಿಸಿದ ಅವರು, ಕೇಂದ್ರ ಸರ್ಕಾರದ ವಾರ್ತಾ ಶಾಖೆ ಗಂಗಾವತಿಯನ್ನು ಆಯ್ಕೆ ಮಾಡಿಕೊಂಡು ಇಲ್ಲಿ, ೩ ದಿನಗಳ ಕಾಲ ಮಾ"ತಿ ಆಂದೋಲನ ಹ"ಕೊಂಡಿದೆ. ಊರಿನ ಸಮಸ್ತರು ಈ ಕಾರ್ಯಕ್ರಮಕ್ಕೆ ಆಗ"ಸಿ, ಮಳಿಗೆಗಳಲ್ಲಿ ವಿವಿಧ ಇಲಾಖೆಗಳು ಪ್ರಕಟಿಸಿರುವ ಯೋಜನೆಗಳ ಬಗ್ಗೆ ಮಾ"ತಿ ಪಡೆದು, ಅದರ ಅನುಕೂಲತೆಯನ್ನು ಪಡೆಯಬೇಕೆಂದು ಮನವಿ ಮಾಡಿದರು.
ಭಾರತ ಸರ್ಕಾರದ ವಾರ್ತಾ ಶಾಖೆಯ ಉಪ ನಿರ್ದೇಶಕರಾದ ಪಲ್ಲವಿ ಚಿಣ್ಯ, ಕೊಪ್ಪಳ ಜಿಲ್ಲಾ ಪಂಚಾಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್. ಮೂರ್ತಿ, ಜಿಲ್ಲಾ ಪಂಚಾ ಸದಸ್ಯರಾದ ವಿಜಯಲಕ್ಷ್ಮೀ ರಾಮಕೃಷ್ಣ ಹಾಗೂ ಪಿ. ಕೊಂಡಯ್ಯ, ತಾಲೂಕು ಪಂಚಾ ಅಧ್ಯಕ್ಷರಾದ ಹೊನ್ನೂರಸಾಬ್, ಉಪಾಧ್ಯಕ್ಷೆ ಹಿರೆ ಹನುಮವ್ವ, ಗಂಗಾವತಿ ನಗರಸಭೆ ಅಧ್ಯಕ್ಷರಾದ ಗುಡ್ಡೇಕಲ್ ಬಸಪ್ಪನಾಯಕ ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು.
Home
»
»Unlabelled
» ಮಾಹಿತಿ ಆಂದೋಲನ ಮಹತ್ವದ ಮೈಲಿಗಲ್ಲು- ಶಿವರಾಮಗೌಡ
Advertisement
Subscribe to:
Post Comments (Atom)
0 comments:
Post a Comment