PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ, ಫೆ.: ಯಲಬುರ್ಗಾ ತಾಲೂಕಿನ ಕುದರಮೋತಿಯಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಶಾಲೆಯಲ್ಲಿ ಶಾಲಾ ವಾಷಿಕೋತ್ಸವ ಸಮಾರಂಭ ಜರುಗಿತು. ಗ್ರಾಮದ ಹಿರಿಯರಾದ ಸಂಗಯ್ಯ ಹಿರೇಮಠ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಗಳು ಬಹಳಷ್ಟು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುದರಿಮೋತಿ ಗ್ರಾ.ಪಂ. ಅಧ್ಯಕ್ಷ ಸಣ್ಣ ಶಿವಪ್ಪ ಗ್ರಾಮೀಣ ಪ್ರದೇಶದಲ್ಲಿ ತೆರದಿರುವ ಈ ಶಾಲೆ ಇಲ್ಲಿನ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತಿದೆ. ಇಂತಹ ಶಿಕ್ಷಣ ಕಾಯಕ ಮುಂದುವರಿಯಲಿ ಎಂದು ಹಾರೈಸಿದರು.
ವೇದಿಕೆ ಮೇಲೆ ಎಸ್.ಡಿ.ಎಂ.ಸಿ. ಅಧ್ಯಕ್ಷ ಹಂಪಯ್ಯ ಜಂಗಮರ, ಉಪಾಧ್ಯಕ್ಷ ಮಹಾಂತಪ್ಪ ಗುತ್ತೂರ. ಗ್ರಾ.ಪಂ. ಮಾಜಿ ಅಧ್ಯಕ್ಷ ಮಹಾಂತಪ್ಪ ಸಿದ್ನಳ್ಳಿ, ಗ್ರಾಮದ ಮುಖಂಡರಾದ ಅಮರೇಶ್ ತಲ್ಲೂರ, ಮುದಕಪ್ಪ ರ್‍ಯಾವಣಕಿ, ಬಸವಂತಪ್ಪ ವಣಗೇರಿ, ಶೇಖರಪ್ಪ ವಣಗೇರಿ, ಅಶೋಕ ಸಜ್ಜನ ಸೇರಿದಂತೆ ಶಾಲೆಯ ಶಿಕ್ಷಕರು ಹಾಜರಿದ್ದರು.
ಸಂಸ್ಥೆಯ ಕಾರ್ಯದರ್ಶಿ ನವೀನಕುಮಾರ್ ಹಂಪಣ್ಣವರ ಪ್ರಾಸ್ತವಿಕವಾಗಿ ಮಾತನಾಡಿದರು. ಸಂಸ್ಥಯ ಖಜಾಂಚಿ ಜಂಜುನಾಥ ಹಂಪಣ್ಣವರು ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರೇಣುಕಾ ಆರ್. ವಂದಿಸಿದರು. ನಂತರ ಶಾಲೆ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.

Advertisement

0 comments:

Post a Comment

 
Top