PLEASE LOGIN TO KANNADANET.COM FOR REGULAR NEWS-UPDATES


ಮಹಿಳಾಪರ ಅನೇಕ ಕಾಯ್ದೆ ಜಾರಿಯಾಗಿವೆ ಕಾನೂನಿನ ಕ್ರಮಗಳ ಜೋತೆಗೆ ಸಾಮಾಜಿಕ ಮನೋಭಾವದಲ್ಲಿ ಬದಲಾವಣೆಯಾದಾಗ ಮಾತ್ರ ಕೌಟುಂಬಿಕ ಹಿಂಸೆ ತಡೆಗಟ್ಟಿ ಸಮಾಜದಲ್ಲಿ ಬದಲಾವಣೆಯಾಗಲು ಸಾಧ್ಯ ಎಂದು ಬಾಲ ನ್ಯಾಯ ಮಂಡಲಿ ಸದಸ್ಯೆ ಸಾವಿತ್ರಿ ಮುಜುಮದಾರ ಹೇಳಿದರು.ಜಿಲ್ಲಾ ಕಾನೂನು ಸೇವೇಗಳ ಪ್ರಾಧಿಕಾರ,ಜಿಲ್ಲಾ ವಕೀಲರ ಸಂಘ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೊಪ್ಪಳ,ಸಂದೇಶ ಗ್ರಾಮೀಣ ಅಭಿವೃಧಿ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ಕಾರ್ಯಾಗಾರದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣ ಕಾಯ್ದೆಯಲ್ಲಿ ಪೊಲೀಸರ ಹಾಗೂ ವ್ಯದಾಧಿಕಾರಿಗಳ ಪಾತ್ರ ಕುರಿತ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.ಮಹಿಳೆ ಇಂದು ಮತದಾನದಂತಹ ಮೂಲಭೂತ ಹಕ್ಕಿನಿಂದ ಹಿಡಿದು ಕಾನೂನಿನ ರಕ್ಷಣೆ ಪಡೆಯುವ ಮಟ್ಟಕ್ಕೆ ಜಾಗೃತಳಾಗಿದ್ದರೂ ಮಹಿಳೆ ಮೇಲೆ ದ್ಯೌರ್ಜನ್ಯ,ಹಿಂಸಾ ಪ್ರಕರಣಗಳು ಜರುಗುತ್ತಿವೆ.ಮಹಿಳೆಯರ ಮೇಲಿನ ಹಿಂಸೆಗಳು ಸಮರ್ಥವಾಗಿ ತಡೆಯಲು ದೌರ್ಜನ್ಯ ತಡೆ ಕಾಯ್ದೆ ಅನುಷ್ಠಾನಗೊಳ್ಳಲು ಪೊಲೀಸರ,ವ್ಯದ್ಯರ ಪಾತ್ರ ಬಹಳ ಮುಖ್ಯ.ಪೊಲೀಸ ಇಲಾಖೆಯೂ ಸಾಮಾಜಿಕ ಜವಾಬ್ದಾರಿಯಿಂದಲೆ ಕಾರ್ಯನಿರ್ವಹಿಸುತ್ತಿದೆ,ಅಲ್ಲಿ ರೈಟರಗಳಿಂದ ,ಮೇಲಧಿಕಾರಿಗಳವರೆಗೆ ಎಲ್ಲರೂ ನ್ಯಾಯಕೊಡಿಸಲು ಹೋರಾಡುತಾರೆ,ಸಾಮಾಜಿಕ ಅನ್ಯಾಯದ ಸಂದರ್ಭದಲ್ಲಿ ಪೊಲೀಸರಿಗೆ ಸಾರ್ವಜನಿಕರು ಸಹಕರಿಸಿದರೆ ಆರೋಪಿಗಳಿ ಶಿಕ್ಷೆ ಕೊಡಿಸಲು ಸಾಧ್ಯವಿದೆ.ಕೌಟುಂಬಿಕ ದೌರ್ಜನ್ಯದಿಂದ ಮಹಿಳೆ ಸಾವಿಗೀಡಾದರೆ ಅದನ್ನು ಆತ್ಮಹತ್ಯೆ ಎಂದು ತಿರುಚುವ ಕೆಲಸ ನಡೆದಾಗ ಅಂಥಹ ಸಂದರ್ಭದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಿದಾಗ ಶಿಕ್ಷೆ ಕೊಡಿಸಲು ಸಾಧ್ಯವಿದೆ ಎಂದರು.ಕಳೆದ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಮಹಿಳೆಯರ ವಿರುದ್ದ ಜರುಗಿದ ವಿವಿಧ ಪ್ರಕರಣಗಳ ಸ್ವರೂಪ ಹಾಗೂ ವಿವರಗಳೊಂದಿಗೆ ಉದಾಹರಣೆ ನೀಡಿದ ಅವರು ಕೆಲ ಪ್ರಕರಣಗಳಲ್ಲಿ ಕ್ರಮ ಜರುಗಿಸಲು ಪೊಲೀಸರಿಗೆ ಸಹಾಯವಾದ ಅಂಶಗಳ ಬಗ್ಗೆ ವಿವರಿಸಿದರು.ನೌಕರಸ್ಥ ಮಹಿಳೆಯರಿಗೆ ಇಂದು ದ್ಯಹಿಕ ಕಿರುಕುಳಕ್ಕಿಂತ ಮಾನಸಿಕ ಸ್ಥ್ಯರ್ಯ ಕುಗ್ಗಿಸುವ ಭಾವನಾತ್ಮಕ ಹಿಂಸೆ ನೀಡಲಾಗುತ್ತಿದೆ,ಅಂಥ ಮಹಿಳೆಯರು ಕಾನೂನಿನ ಹಾಗೂ ಪೊಲೀಸರ ಸಹಾಯ ಪಡೆಯಲು ಹಿಂಜರಿಯಬಾರದು ಎಂದರುಈ ಸಂದರ್ಭದಲ್ಲಿ ವಕೀಲರಾದ ಶಿವಲೀಲ ವನ್ನೂರ,ಅಧಿಕಾರಿ ಬಿ.ವೆಂಕಣ್ಣ,ಪಿಎಸ್‌ಏ ಸುರೇಖಾ,ಅಕ್ಕಮಹಾದೇವಿ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕರದ ಆಡಳಿತ ಸಹಾಯಕ ವೀರಭದ್ರಪ್ಪ ಇನ್ನಿತರು ಉಪಸ್ಥಿತರಿದ್ದರು.

Advertisement

0 comments:

Post a Comment

 
Top