PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ ಫೆ.೨೨ (ಕ.ವಾ): ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಮಿತಿಮೀರಿದ ಕ್ರಿಮಿನಾಶಕ ಬಳಕೆಯಿಂದ ರೈತರ ಭೂಮಿ ಬಂಜರುವಾಗುತ್ತಿದೆ. ಭೂಮಿಯ ಫಲವತ್ತತೆ ಕಾಯ್ದುಕೊಂಡು ಬರಲು ರೈತರು ಸಾವಯವ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಆಗತ್ಯವಾಗಿದೆ ಎಂದು ಶಾಸಕ ಸಂಗಣ್ಣ ಕರಡಿ ಅವರು ಹೇಳಿದ್ದಾರೆ.
ವಾರ್ತಾ ಇಲಾಖೆ, ಕೃಷಿ ಇಲಾಖೆ ಹಾಗೂ ಓಲೇಕಾರ ಶಿಕ್ಷಣ ಮತ್ತು ಕಲ್ಯಾಣ ಸಂಸ್ಧೆ ಇವರ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಹೂವಿನಾಳ ಗ್ರಾಮದಲ್ಲಿ ಡಾ.ಭಾಗೀರಥ ತರಬೇತಿ ಕೇಂದ್ರದ ಅವರಣದಲ್ಲಿ ಏರ್ಪಡಿಸಲಾಗಿದ್ದ ಸಾವಯವ ಕೃಷಿ ರೈತರಿಗೆ ವರದಾನ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿನೆ ನೆರವೇರಿಸಿ ಇಂದು ಅವರು ಮಾತನಾಡುತ್ತಿದ್ದುರು.
ಪೂರ್ವಿಕರು ಅನುಸರಿಸುತ್ತಿರುವ ಕೃಷಿ ವಿಧಾನಗಳ ಬದಲಾಗಿ ಹೆಚ್ಚು ಫಸಲುಪಡೆಯಬೇಕು ಆರ್ಥಿಕ ಮುನ್ನಡೆ ಸಾಧಿಸಬೇಕೆಂಬ ಆಸೆಯಿಂದ ರೈತರು ಇಂದು ಹೆಚ್ಚು ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿದ್ದು. ಬೆಳೆಗಳಿಗೆ ರೋಗ ಬಾಧೆ ತಾಗದಿರಲಿ ಎನ್ನುವ ಉದ್ದೇಶದಿಂದ ಆತಿಯಾದ ಕೀಟನಾಶಕ ಬಳಸುತ್ತಿರುವುದು ಮನುಷ್ಯನ ಆಹಾರ ವಿಷಯುಕ್ತವಾಗುತ್ತಿದೆ. ಭೂಮಿ ತನ್ನ ಫಲವತ್ತತೆ ಕಳೆದು ಕೊಂಡು ಬಂಜರು ಭೂಮಿಯಾಗುತ್ತಿದೆ. ಇದರಿಂದ ರೈತರು ಕೃಷಿಯಲ್ಲಿ ಹಲವಾರು ಸಂಕಟಗಳನ್ನು ಎದುರಿಸುವಂತಾಗಿದೆ. ಅಲ್ಲದೆ ರೈತರ ಆತ್ಮಹತ್ಯೆ ಪ್ರಕಣಗಳು ಹೆಚ್ಚುತ್ತಿವೆ. ಕೀಟ ನಾಷಕಯುಕ್ತ ಆಹಾರ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳುಂಟಾಗುತ್ತದೆ ಈ ಎಲ್ಲಾ ಕಾರಣಗಳನ್ನು ತೊಡೆದು ಹಾಕಲು ರೈತರು ಸಾವಯವ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಕೃಷಿಯಲ್ಲಿ ನಿರೀಕ್ಷಿತ ಇಳುವರಿ ಬಾರದಿರುವಾಗ ಕೃಷಿಯ ಜೊತೆಗೆ ರೈತರು ಹೈನುಗಾರಿಗೆ,ಕುರಿಸಾಕಣೆ,ಜೇನುಕೃಷಿ,ಎರೆಹುಳುಗೊಬ್ಬರ ತಯಾರಿಕೆ, ಗೃಹಕೈಗಾರಿಕೆಗಳನ್ನು ಅಳವಡಿಸಿಕೊಂಡು ಅರ್ಥಿಕತೆಯನ್ನು ಹೆಚ್ಚಿಸಿಕೊಳ್ಳಬೇಕು. ರೈತರು ಹೊಸ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರೊಂದಿಗೆ ಸಂಘಟಿತರಾಗಿ ಸರಕಾರದ ಯೋಜನೆಗಳನ್ನು ಸುದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಸಂಗಣ್ಣ ಕರಡಿಯವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಪ್ರೊ ಎಸ್.ಕೆ ಮುದ್ಲಾಪೂರ ಅವರು ಮಾತನಾಡಿ, ರೈತರ ಜಮೀನುಗಳಲ್ಲಿ ಇಳುವರಿ ಕಡಿಮೆಯಾಗಲು ನೀರಿನ ಕೊರತೆ ಹವಾಮಾನ ಏರುಪೇರು ಮಣ್ಣಿನ ಫಲವತ್ತತೆ ಕೊರತೆ ಕಾರಣವಾಗಿರುಬಹುದು. ರೈತರಲ್ಲಿ ಶ್ರಮದ ಕೊರತೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ರೈತರ ಭೂಮಿಯ ೧೦೦ ಕೆ.ಜಿ ಮಣ್ಣಿನಲ್ಲಿ ೫.ಕೆ.ಜಿ ಸಾವಯವ ವಸ್ತುಗಳು ಇದ್ದಾಗ ಮಣ್ಣು ಫಲವತ್ತತೆ ಎನಿಸಿಕೊಳ್ಳುತ್ತಿದೆ. ರೈತರು ಭೂಮಿಯಲ್ಲಿನ ಕೃಷಿ ತ್ಯಾಜ್ಯ ವಸ್ತುಗಳನ್ನು ಸುಡುವುದನ್ನು ನಿಲ್ಲಿಸಿ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಕೃಷಿಗೆ ಬಳಸಿಕೊಳ್ಳುವುದರಿಂದ ಕೃಷಿ ಭೂಮಿ ಫಲವತ್ತತೆ ಕಾಯ್ದುಕೊಂಡು ಬರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ತಾಲೂಕ ಕೃಷಿಕ ಸಮಾಜದ ಅಧ್ಯಕ್ಷ ಎಚ್.ವಿ.ವಿರೂಪಾಕ್ಷಪ್ಪ ಅಗನ್ಯ ಸಾವಯವ ಕೃಷಿ ಪರಿವಾರ ಅಧ್ಯಕ್ಷ ವೆಂಕಣ್ಣ ಗ್ಯಾನಪ್ಪನವರ, ಸಾವಯವ ಕೃಷಿ ಮಿಷಿನ್ ಜಿಲ್ಲಾ ಸಂಚಾಲಕ ವೆಂಕನಗೌಡ ಮೇಟಿ, ಕಾರ್ಯಕ್ರಮ ಕುರಿತು ಮಾತನಾಡಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಡಾ.ಸೀತಾ ಹಲಗೇರಿ ಅವರು ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಹೊರ ತಂದಿರುವ ಸಾವಯವ ಕೃಷಿ ಕುರಿತ ಮಡಿಕೆ ಪತ್ರ ಬಿಡುಗಡೆಗೊಳಿಸಿದರು.
ಜಿಲ್ಲಾ ಪಂಚಾಯತ್ ಸದಸ್ಯ ನಾಗನಗೌಡ, ತಾ.ಪಂ ಸದಸ್ಯೆ ಕರಿಯಮ್ಮ ಹೊಸಳ್ಳಿ, ಗ್ರಾ.ಪಂ ಅಧ್ಯಕ್ಷ ನಿಂಗಪ್ಪ ಬಡಿಗೇರ, ಓಲೇಕಾರ ಸಂಸ್ಧೆ ಅಧ್ಯಕ್ಷ ಪಾಂಡುರಂಗ ಓಲೇಕಾರ, ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಅಕಳವಾಡಿ ಅವರು ಸ್ವಾಗತಿಸಿದರು. ಜಂಟಿ ಕೃಷಿ ನಿರ್ದೇಶಕ ಎಲ್.ಎನ್.ಬೆಳವಣಿಕಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಹಾಯಕ ಕೃಷಿ ನಿರ್ದೇಶಕಿ ಮಂಜುಳಾ ವಂದಿಸಿದರು ಉಮೇಶ ಪರಡ್ಡಿ ಕಾರ್ಯಕ್ರಮ ನಿರೂಪಿಸಿದರು.





Advertisement

0 comments:

Post a Comment

 
Top