PLEASE LOGIN TO KANNADANET.COM FOR REGULAR NEWS-UPDATES

ಫೆ. 24 (ಕ.ವಾ): ಇತಿಹಾಸ ಪ್ರಸಿದ್ಧವಾದ ಆನೆಗೊಂದಿ ಉತ್ಸವವನ್ನು ಬರುವ ಮಾಚರ್್ ತಿಂಗಳ 23 ಮತ್ತು 24 ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂತರ್ಿ ಅವರು ಹೇಳಿದ್ದಾರೆ. ಆನೆಗೊಂದಿಯ ಹುಚ್ಚಪ್ಪಯ್ಯನ ಮಠದ ಆವರಣದಲ್ಲಿ ಏರ್ಪಡಿಸಲಾಗಿದ್ದ ಆನೆಗೊಂದಿ ಉತ್ಸವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಕಳೆದೆರಡು ವರ್ಷಗಳಿಂದ ಆನೆಗೊಂದಿ ಉತ್ಸವವನ್ನು ಮುಂದೂಡುತ್ತ ಬಂದಿದ್ದು, ಹಂಪಿ ಉತ್ಸವ ಮಾದರಿಯಲ್ಲಿ ಆನೆಗುಂದಿ ಉತ್ಸವ ನಡೆಸಬೇಕು ಎನ್ನುವ ಜನರ ಬೇಡಿಕೆಗೆ ಸಕರ್ಾರ ಸ್ಪಂದಿಸಿ ಅದಕ್ಕಾಗಿ 02 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ. ಆ ಪೈಕಿ 01 ಕೋಟಿ ರೂ. ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡಿದ್ದು, ಅಂತರ್ರಾಜ್ಯ ಮಟ್ಟದ ಖ್ಯಾತಿ ಹೊಂದಿದ ಕಲಾವಿದರನ್ನು ಉತ್ಸವಕ್ಕೆ ಆಹ್ವಾನಿಸಿ ಕಾರ್ಯಕ್ರಮ ನೀಡುವುದಕ್ಕೆ ಬೇಕಾಗಿರುವಂತಹ ಗೌರವ ಸಂಭಾವನೆ ನೀಡುವ ಸಲುವಾಗಿ 01 ಕೋಟಿ ರೂ.ಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಲಾಗಿದೆ. ಹಂಪಿ ಉತ್ಸವ ಮಾದರಿಯಲ್ಲಿ ಆನೆಗೊಂದಿ ಉತ್ಸವವನ್ನು ನಡೆಸಲು ಜಿಲ್ಲಾಡಳಿತ ಮುಂದಾಗಿದ್ದು, ಹೆಚ್ಚಿನ ಜವಾಬ್ದಾರಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಹಿಸಿಕೊಳ್ಳುತ್ತಿದ್ದು, ಸ್ಥಳೀಯ ವ್ಯವಸ್ಥೆಯನ್ನು ಜಿಲ್ಲಾಡಳಿತ ನೆರವೇರಿಸಲಿದೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೂ ಆದ್ಯತೆ ನೀಡಲಾಗುವುದು. ಉತ್ಸವ ನಡೆಸಲು ಇನ್ನು ಕೇವಲ ಒಂದು ತಿಂಗಳ ಅವಧಿ ಮಾತ್ರ ಇರುವುದರಿಂದ ಉತ್ಸವಕ್ಕೆ ಬೇಕಾಗಿರುವ ಪೂರ್ವ ತಯಾರಿಯನ್ನು ಅಧಿಕಾರಿಗಳು ನಡೆಸಿಕೊಳ್ಳಬೇಕಾಗುತ್ತದೆ. ಉತ್ಸವ ನಡೆಸಲು ಬೇಕಾಗಿರುವ ಸ್ಥಳವನ್ನು ವಶಪಡಿಸಿಕೊಂಡು, ಪ್ರತಿ ವರ್ಷ ಉತ್ಸವ ನಡೆಸಲು ಅನುಕೂಲ ಮಾಡಿಕೊಡಲಾಗುವುದು. ಈ ನಿಟ್ಟಿನಲ್ಲಿ 08 ಎಕರೆ ಜಮೀನನ್ನು ಭೂಸ್ವಾಧೀನ ಪಡಿಸಿಕೊಂಡು, ಉತ್ಸವಕ್ಕಾಗಿ ವೇದಿಕೆ, ಆಸನ ವ್ಯವಸ್ಥೆ ಕುರಿತಂತೆ ಯೋಜನಾ ನಕ್ಷೆ ಸಿದ್ಧಪಡಿಸಲು ಸಹಾಯಕ ಆಯುಕ್ತ ಶರಣಬಸಪ್ಪ ಮತ್ತು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಮೇಶ್ ಜಂಗಲ್ ಅವರಿಗೆ ಈ ಸಂದರ್ಭದಲ್ಲಿ ಸೂಚಿಸಿದರು. ಉತ್ಸವದಲ್ಲಿ ಭಾಗವಹಿಸುವ ಕಲಾವಿದರ ಪಟ್ಟಿ ತಯಾರಿಸುವುದು, ಆ ಸಂದರ್ಭದಲ್ಲಿ ನಡೆಸಲಾಗುವ ಕ್ರೀಡಾ ಸ್ಪಧರ್ೆಗಳ ವಿವರವಾದ ಪಟ್ಟಿಯನ್ನು ತಯಾರಿಸಿಟ್ಟುಕೊಳ್ಳಬೇಕಾಗುವುದು. ಆನೆಗೊಂದಿ ಉತ್ಸವ ಕುರಿತಾದ ಮಾಹಿತಿಯನ್ನು ಒದಗಿಸುವ ಮಡಿಕೆ ಪತ್ರವನ್ನು ತಯಾರಿಸಲು ಪ್ರವಾಸೋದ್ಯಮ ಇಲಾಖೆಯವರು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ. ಇದರಲ್ಲಿ ಆನೆಗೊಂದಿಯಲ್ಲಿರುವ ಐತಿಹಾಸಿಕ ಸ್ಥಳಗಳ ಪರಿಚಯವನ್ನು ಮಾಡಿಕೊಡುವುದು ಅಗತ್ಯವಾಗಿದೆ. ಉತ್ಸವದ ಯಶಸ್ವಿಗಾಗಿ ಒಟ್ಟು 14 ಉಪಸಮಿತಿಗಳನ್ನು ನೇಮಿಸಲಾಗಿದ್ದು, ತಮಗೆ ವಹಿಸಿರುವ ಕೆಲಸಗಳನ್ನು ಕಟ್ಟುನಿಟ್ಟಾಗಿ ಅಧಿಕಾರಿಗಳು ಕೈಗೊಳ್ಳಬೇಕು. ಉತ್ಸವಕ್ಕಾಗಿ ಬರುವ ಕಲಾವಿದರು, ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂತರ್ಿ ಅವರು ಹೇಳಿದರು. ಇದೇ ಸಂದರ್ಭದಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಜಿ.ಪಂ. ಸದಸ್ಯೆ ವಿಜಯಲಕ್ಷ್ಮಿ ರಾಮಕೃಷ್ಣ ಅವರು ಉತ್ಸವ ಆಚರಣೆ ಕುರಿತಂತೆ ಮಾತನಾಡಿದರು. ಜಿ.ಪಂ. ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಎಚ್. ಮೂತರ್ಿ, ಗಂಗಾವತಿ ನಗರ ಪ್ರಾಧಿಕಾರ ಅಧ್ಯಕ್ಷ ಎಚ್. ಪ್ರಭಾಕರ್, ಗ್ರಾ.ಪಂ. ಅಧ್ಯಕ್ಷೆ ಜೈತ್ ಉನ್ನಿಸಾಬೇಗಂ ಸೇರಿದಂತೆ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Advertisement

0 comments:

Post a Comment

 
Top