
ಕೊಪ್ಪಳ ೧೪ : ನಗರದ ಯುವ ವರ್ತಕರಾದ ಪದಮಚಂದ್ ಮೆಹತಾ ಇವರಿಗೆ ಹುಬ್ಬಳ್ಳಿ ಪಿಂಜರಾಪೋಳ ಸಂಸ್ಥೆ ಕೊಡಲ್ಪಡುವ ೨೦೧೧ ರ ಸಾಲಿನ 'ಕರುಣಾ ಸಾಗರ ಸನ್ಮಾನ' ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯು ಗೋ ಸಂರಕ್ಷಣಾ ಸೇವೆಗಾಗಿ ಇವರಿಗೆ ದೊರೆತಿದೆ. ಇದೇ ದಿ. ೧೬-೦೧-೨೦೧೧ ರವಿವಾರದಂದು, ಹುಬ್ಬಳ್ಳಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಪ್ರಶಸ್ತಿ ದೊರೆತಿದ್ದಕ್ಕೆ ಶರಣಬಸವನಗೌಡ, ಪ್ರಕಾಶ ಬಳ್ಳಾರಿ, ಅಬ್ದುಲ್ ರವೂಫ್, ವಿರೇಶ ಬಳ್ಳಾರಿ, ಶಿವಬಸಪ್ಪ ಮಸ್ಕಿ, ರಿಕಬ್‌ಚಂದ್ ಸುರಾಣ, ಪ್ರಕಾಶ ಚೋಪ್ರಾ, ಲಲಿತ್ ಜೈನ್, ಮಹಾವೀರ ಮೆಹತಾ, ಜಾವಿದ್, ಮಂಜುನಾಥ ನಾಯ್ಕ, ಜಂಭಣ್ಣ ಅಭಿನಂದನೆ ಸಲ್ಲಿಸಿದ್ದಾರೆ.
0 comments:
Post a Comment