PLEASE LOGIN TO KANNADANET.COM FOR REGULAR NEWS-UPDATES


ಕೊಪ್ಪಳ : ಜಾತಿ ಎನ್ನುವ ಕಟುವಾಸ್ತವ, ಕಹಿ ಸತ್ಯಗಳನ್ನು ಮೀರಿ ಬದುಕಲು ಸಂಪ್ರದಾಯ ಬಿಡುತ್ತಿಲ್ಲ, ಪ್ರೀತಿಗೆ ಅಡ್ಡ ಬರುತ್ತಲೇ ಇದೆ. ಸಮಕಾಲೀನ ಸಮಸ್ಯೆಗಳನ್ನು ಕಾವ್ಯವಾಗಿಸುವುದು ಕಷ್ಟದ ಕೆಲಸ ಆದರೂ ಕಾವ್ಯಾತ್ಮಕ ರಚನೆ ಬೇಕು ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಹೇಳಿದರು. ಅವರು ಕನ್ನಡನೆಟ್.ಕಾಂ ಕವಿಸಮೂಹದ ೪೦ನೇ ಕವಿಸಮಯ ಕಾರ್‍ಯಕ್ರಮದಲ್ಲಿ ಮಾತನಾಡುತ್ತಿದ್ದರು. ನಮ್ಮ ಸುತ್ತಮುತ್ತಲೂ ನಡೆಯುತ್ತಿರುವ ಘಟನೆಗಳಿಗೆ ಸ್ಪಂದಿಸುತ್ತ ಅದನ್ನು ಕಾವ್ಯದಲ್ಲಿ ಅಭಿವ್ಯಕ್ತಿಗೊಳಿಸಬೇಕು ಆದರೆ ಆ ಕಾವ್ಯವು ವಾಚ್ಯತೆಯನ್ನು ಮೀರಬೇಕು. ನಮ್ಮ ಜೀವನದಲ್ಲಿ ಮೌಢ್ಯತೆಯನ್ನು ತೊರೆದು ವೈಜ್ಞಾನಿಕ ವಿವೇಚನೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಇದಕ್ಕೂ ಮೊದಲು ನಡೆದ ಕವಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಹೆಚ್.ಯಲಬುರ್ಗಾ-ಬಾ ಗೆಳೆಯ, ಶಾಂತಪ್ಪ ಬಡಿಗೇರ- ಚುಟುಕು, ವಾಗೀಶ ಪಾಟೀಲ- ವಡ್ಡರ ಹುಡುಗಿ, ಬಸವರಾಜ ಸಂಕನಗೌಡರ- ತಿರುಕರು, ಶಿವಪ್ರಸಾದ ಹಾದಿಮನಿ- ಅಕ್ರಮ ಗಣಿಗಾರಿಕೆ, ಡಾ.ಮಹಾಂತೇಶ ಮಲ್ಲನಗೌಡರ- ನೀನಿಲ್ಲದ ನಾನು, ಪುಷ್ಪಲತಾ ಏಳುಬಾವಿ- ಗೃಹಿಣಿ ಮತ್ತು ಇರುಳು, ಸಿರಾಜ್ ಬಿಸರಳ್ಳಿ-ಮಡೆಸ್ನಾನ, ಸುಮತಿ ಹಿರೇಮಠ- ಬೆನ್ನ ಹಿಂದಿನ ಹೆರಳು-೨ , ಅಲ್ಲಮಪ್ರಭು ಬೆಟ್ಟದೂರ- ಅಮೇರಿಕಾ ಕವನಗಳನ್ನು ವಾಚನ ಮಾಡಿದರು. ನಂತರ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ- ಕುಡಿ ಕಥೆಯನ್ನು ವಾಚನ ಮಾಡಿದರು.
ಕಾರ್‍ಯಕ್ರಮದಲ್ಲಿ ಶಿವನಗೌಡರ ಬೂದಗುಂಪಾ,ಕರಿಯಪ್ಪ ಬೂದಗುಂಪಾ, ಮಾಲತೇಶ, ಯಶವಂತ್ ಮೇತ್ರಿ, ವೀರಣ್ಣ ಹುರಕಡ್ಲಿ, ವಾಯ್ .ಬಿ.ಜೂಡಿ, ಜಿ.ಎಸ್.ಗೋನಾಳ, ಹನುಮಂತಪ್ಪ ಅಂಡಗಿ, ಮಹೇಶ ಬಳ್ಳಾರಿ ಇತರರು ಭಾಗವಹಿಸಿದ್ದರು. ಶಿವಪ್ರಸಾದ ಹಾದಿಮನಿ ಸ್ವಾಗತ ಕೋರಿದರು. ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು.

Advertisement

0 comments:

Post a Comment

 
Top