PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಜ. : ಕೊಪ್ಪಳ ತಾಲ್ಲೂಕಿನ ಕಾಸನಕಂಡಿಯ ಸಾಹಿತಿ ಕೋಳಿ ಫಾರಂ, ಗಿಣಿಗೇರಾದಲ್ಲಿನ ಎಂ. ಕೃಷ್ಣಾ ರೆಡ್ಡಿ ಕೋಳಿ ಫಾರಂ ಮತ್ತು ಎಂ.ಎಸ್.ಆರ್ ಕೋಳಿ ಫಾರಂ ಹಿರೇಬೊಮ್ಮನಾಳ ಗಳಿಗೆ ಜಿಲ್ಲಾ ಮಕ್ಕಳ ರಕ್ಷಣಾ ಯೋಜನಾ ತಂಡ ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಹಠಾತ್ ದಾಳಿ ಮಾಡಿ ೩೧ ಬಾಲಕಾರ್ಮಿಕ ಮಕ್ಕಳನ್ನು ದುಡಿತದಿಂದ ಬಿಡಿಸಿ ಪುನರ್ವಸತಿಗೊಳಿಸಲಾಗಿದೆ.
ದಿನಾಂಕ ೧೪.೦೧.೨೦೧೧ರಂದು ಕೊಪ್ಪಳ ತಾಲ್ಲೂಕಿನ ಕಾಸನಕಂಡಿಯ ಸಾಹಿತಿ ಕೋಳಿ ಫಾರಂಗೆ ದಾಳಿಮಾಡಿದಾಗ ೧೪ ವರ್ಷದೊಳಗಿನ ೧೪ ಮಕ್ಕಳು ಹಾಗೂ ೧೪ರಿಂದ ೧೮ ವರ್ಷದೊಳಗಿನ ೮ ಮಕ್ಕಳ ಹೀನಾಯ ಸ್ಥಿತಿಯಲ್ಲಿ ಕೆಲಸಕ್ಕಿಟ್ಟಿರುವುದು ಕಂಡುಬಂದಿದ್ದು ಮಕ್ಕಳನ್ನು ಕೆಲಸದಿಂದ ಬಿಡಿಸಿ ಮಾಲೀಕರ ಮೇಲೆ ಬಾಲಕಾರ್ಮಿಕ ಪದ್ದತಿ (ನಿಯಂತ್ರಣ ಮತ್ತು ನಿಷೇಧ ಕಾಯ್ದೆ - ೧೯೮೬ ಮತ್ತು ಕನಿಷ್ಠ ವೇತನ ಕಾಯ್ದೆ ಮತ್ತು ಇತರ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾತು. ೧೪ ಮಕ್ಕಳಲ್ಲಿ ೨ ಮಕ್ಕಳು ಕಾಸನಕಿಂಡಿ ಗ್ರಾಮದವರಾಗಿದ್ದು, ೬ ಮಕ್ಕಳು ಗಿಣಿಗೇರಾ ಗ್ರಾಮದವರಾಗಿದ್ದರು ಉಳಿದ ೬ ಮಕ್ಕಳು ಲಾಚನಕೇರಿ ಗ್ರಾಮದವರಾಗಿದ್ದರು.
ದಿನಾಂಕ ೨೪.೦೧.೨೦೧೧ರಂದು ಗಿಣಿಗೇರಾದಲ್ಲಿನ ಎಂ. ಕೃಷ್ಣಾ ರೆಡ್ಡಿ ಕೋಳಿ ಫಾರಂ ಮತ್ತು ಎಂ.ಎಸ್.ಆರ್ ಕೋಳಿ ಫಾರಂ ಹಿರೇಬೊಮ್ಮನಾಳ ಗಳಿಗೆ ದಾಳಿಮಾಡಿದಾಗ ೧೪ ವರ್ಷದೊಳಗಿನ ೯ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ದುಡಿಸಿಕೊಂಡಿರುವುದು ಕಂಡುಬಂತು. ಮಾಲೀಕರ ಮೇಲೆ ಬಾಲಕಾರ್ಮಿಕ ಪದ್ದತಿ (ನಿಯಂತ್ರಣ ಮತ್ತು ನಿಷೇಧ ಕಾಯ್ದೆ - ೧೯೮೬ ಮತ್ತು ಕನಿಷ್ಠ ವೇತನ ಕಾಯ್ದೆ ಯನ್ವಯ ಪ್ರಕರಣ ದಾಖಲಿಸಲಾತು. ೯ ಮಕ್ಕಳಲ್ಲಿ ೨ ಮಕ್ಕಳು ಕಾಮನೂರು ಗ್ರಾಮದವರಾಗಿದ್ದು ಇವರನ್ನು ಲೇಬಗೇರಿ ಪ್ರೌಢ ಶಾಲೆಗೆ ದಾಖಲಿಸಲಾಗಿದ್ದು, ೩ ಮಕ್ಕಳು ಹಿರೇ ಬೊಮ್ಮನಾಳ ಗ್ರಾಮದವರಾಗಿದ್ದು, ಉಳಿದ ನಾಲ್ಕು ಮಕ್ಕಳು ಚಳ್ಳಾರಿ ಗ್ರಾಮದವರಾಗಿದ್ದರು.
ತಂಡವು ನಂತರ ಮಕ್ಕಳ ಗ್ರಾಮಗಳಿಗೆ ತೆರಳಿ ಪಾಲಕರಿಗೆ ಶಿಕ್ಷಣದ ಮಹತ್ವದ ಬಗ್ಗೆ ಮನವರಿಕೆ ಮಾಡಿ ಅವರಿಂದ ಇನ್ನು ಮುಂದೆ ಯಾವುದೇ ಕಾರಣಕ್ಕೂ ಮಕ್ಕಳನ್ನು ದುಡಿತಕ್ಕೆ ಕಳು"ಸುವುದಿಲ್ಲ ಎಂದು ಮುಚ್ಚಳಿಕೆ ಪತ್ರವನ್ನು ಪಡೆಯಲಾತು. ಎಲ್ಲಾ ಮಕ್ಕಳನ್ನು ಅವರ ಊರಿನ ಸರಕಾರಿ ಶಾಲೆಗಳಿಗೆ ದಾಖಲಿಸಲು ಕ್ರಮ ಜರುಗಿಸಲಾಗಿದೆ.

Advertisement

0 comments:

Post a Comment

 
Top