PLEASE LOGIN TO KANNADANET.COM FOR REGULAR NEWS-UPDATES


ಉಡುಪಿ: ಯುವ ಪ್ರತಿಭೆಗಳಿಗೆ ಪ್ರಕಾಶಕರು ಪ್ರೋತ್ಸಾಹಿಸಬೇಕಾಗಿದೆ ಎಂದು ಸಾಹಿತಿ ಅಬ್ದುಲ್‌ ಹಮೀದ್‌ ಪಕ್ಕಲಡ್ಕ ಅವರು ಹೇಳಿದ್ದಾರೆ.ಮುಸ್ಲಿಮ್‌ ಲೇಖಕರ ಸಂಘ ಮಂಗಳೂರು - ಉಡುಪಿ ವತಿಯಿಂದ ಕಿದಿಯೂರು ಹೊಟೇಲ್‌ ಸಭಾಂಗಣದಲ್ಲಿ ಶುಕ್ರವಾರ ಜಿ. ಅಬ್ದುಲ್‌ ಸಾಹೇಬ್‌ ಸ್ಮರಣಾರ್ಥ 2009ನೆಯ ಸಾಲಿನ ಮುಸ್ಲಿಮ್‌ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.ಮನಸ್ಸಿನ ಭಾವನೆಗಳನ್ನು ಸಾಹಿತ್ಯ, ಕಥೆಗಳ ಮೂಲಕ ವ್ಯಕ್ತಪಡಿಸಬಹುದು. ಈಗ ಪ್ರಕಾಶಕರ ಕೊರತೆ ಎದ್ದು ಕಾಣುತ್ತಿದ್ದು, ಪ್ರಕಾಶಕರು ವ್ಯವಹಾರ ದೃಷ್ಟಿ ಮರೆತು ಹೊರಬಂದರೆ ಮಾತ್ರ ಯುವ ಪ್ರತಿಭೆಗಳು ಅರಳುವ ಸಾಧ್ಯತೆ ಇದೆ ಎಂದರು.ಪರೀಕ ಎಸ್‌ಡಿಎಂ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಮುಹಮ್ಮದ್‌ ರಫೀಕ್‌ ತೋನ್ಸೆ ಪ್ರಶಸ್ತಿ ಪ್ರದಾನ ಮಾಡಿದರು.ಹಿರಿಯ ಸಾಹಿತಿ ಜಿ.ಎಂ. ಶಿರಹಟ್ಟಿಯವರಿಗೆ ಎಂ.ಬಿ. ಅಬ್ದುಲ್‌ ರಹಮಾನ್‌ ಅವರು ಸಮ್ಮಾನಿಸಿದರು.

ವಿಚಾರಗೋಷ್ಠಿ

'ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಹೇಗೆ?' ಎಂಬ ಕುರಿತು ವಿಚಾರಗೋಷ್ಠಿ ನಡೆಯಿತು. 'ಸನ್ಮಾರ್ಗ' ಪತ್ರಿಕೆಯ ಸಂಪಾದಕ ವಿ.ಕೆ. ಕುಕ್ಕಿಲ ಅವರು ವಿಷಯ ಮಂಡಿಸಿದರು. ಅತಿಥಿಗಳಾಗಿ ಲೇಖಕ ಕೆ. ಪಣಿರಾಜ್‌ ಮತ್ತು ಅಂಕಣಕಾರ ಶಿವಸುಂದರ್‌ ಪಾಲ್ಗೊಂಡ ರು. ಅಧ್ಯಕ್ಷತೆಯನ್ನು ಮುಸ್ಲಿಮ್‌ ಲೇಖಕರ ಸಂಘದ ಅಧ್ಯಕ್ಷ ಎ. ಸಈದ್‌ ಇಸ್ಮಾಈಲ್‌ ಅವರು ವಹಿಸಿದ್ದರು. ಉಮರ್‌ ಯು.ಎಚ್‌. ಸ್ವಾಗತಿಸಿ ಅನ್ವರ್‌ ಅಲಿ ಕಾಪು ವಂದಿಸಿದರು. ಜಿ.ಎಂ. ಶರೀಫ್‌ ಹೂಡೆ ಕಾರ್ಯಕ್ರಮ ನಿರ್ವಹಿಸಿದರು.

ಶಿಕ್ಷೆ - ಕಪ್ಪು ಪಟ್ಟಿ - ಪ್ರತಿಭಟನೆ

ಛತ್ತೀಸ್‌ಗಢದಲ್ಲಿ ಬಿನಾಯ್‌ ಸೇನ್‌ ಅವರಿಗೆ ಶಿಕ್ಷೆಯಾದುದನ್ನು ಪ್ರತಿಭಟಿಸಿ ಕೆ.ಪಣಿರಾಜ್‌ ಮತ್ತು ಶಿವಸುಂದರ್‌ ಅವರು ಕಪ್ಪುಪಟ್ಟಿ ಧರಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸೇನ್‌ ಅವರಿಗೆ ನಕ್ಸಲೀಯ ಆರೋಪದಲ್ಲಿ ಶಿಕ್ಷೆಯಾಗಿದೆ. ಇವರು ಮಾನವ ಹಕ್ಕು ಹೋರಾಟ ಗಾರರು. ಇವರಿಗೆ ಶಿಕ್ಷೆಯಾದುದು ಖಂಡನೀಯ ಎಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಸಲ್ಲಿಸಿದರು.

ಉಡುಪಿ : ‘ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಹೇಗೆ?’ ಕುರಿತ ವಿಚಾರಗೋಷ್ಠಿ : ಚಳವಳಿಯ ಮೂಲಕ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ’

ಉಡುಪಿ, ಡಿ.24: ಬದುಕಿನ ಬವಣೆಯನ್ನು ಮರೆಮಾಚುವ ಹಾಗೂ ಮೋಸ ಗೊಳಿಸುವ ವೌಲ್ಯಗಳು ಈಗ ಸಮಾಜ ದಲ್ಲಿ ಬೇರೂರುತ್ತಿವೆ. ವ್ಯವಸ್ಥಿತವಾಗಿ ಎಲ್ಲ ರೀತಿಯ ವೌಲ್ಯಗಳನ್ನು ಭ್ರಷ್ಟಗೊಳಿಸುವ ಹುನ್ನಾರ ನಡೆಯುತ್ತಿದೆ. ಚಳವಳಿಯ ಮೂಲಕ ಮಾತ್ರವೇ ಈ ಭ್ರಷ್ಟಾ ಚಾರ ವನ್ನು ನಿರ್ಮೂಲನೆ ಮಾಡಿ ಹೊಸ ಸಮಾಜ ಕಟ್ಟಬಹುದೇ ಹೊರತು ಯಾವುದೇ ಲೋಕಾಯುಕ್ತ ಸಂಸ್ಥೆ ಯಿಂದ ಅಲ್ಲ ಎಂದು ಅಂಕಣಕಾರ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಶಿವ ಸುಂದರ್ ಹೇಳಿದ್ದಾರೆ.

ಮುಸ್ಲಿಮ್ ಲೇಖಕರ ಸಂಘದ ವತಿಯಿಂದ ಶುಕ್ರವಾರ ಉಡುಪಿಯ ಕಿದಿಯೂರು ಹೊಟೇಲಿನ ಮಾಧವ ಕೃಷ್ಣ ಹಾಲ್‌ನಲ್ಲಿ ಆಯೋಜಿ ಸಲಾದ ‘ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಹೇಗೆ?’ ಕುರಿತ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಜಾಗತೀಕರಣ ಹಾಗೂ ಖಾಸಗೀಕರಣ ಬಂದ ನಂತರ ಭ್ರಷ್ಟಾಚಾರ ಎಂಬುದು ವ್ಯವಸ್ಥೆಯ ಭಾಗವಾಗಿ ಬಿಟ್ಟಿದೆ. ಇಂದು ಭ್ರಷ್ಟಾಚಾರ ಗಳೆಲ್ಲ ಕಾನೂನು ಬದ್ಧವಾಗಿಯೇ ನಡೆಯತ್ತಿರುವುದು ದುರಂತ. ಹೀಗೆ ಭ್ರಷ್ಟಾಚಾರ ನೀತಿಯಾಗಿ ಮಾರ್ಪಟ್ಟಿದೆ ಎಂದು ಅವರು ತಿಳಿಸಿ ದರು. ಜನಪರ ಚಳವಳಿಯ ಆತ್ಮವೇ ನಿಜವಾದ ಆಧ್ಯಾತ್ಮ. ಭ್ರಷ್ಟಾಚಾರವನ್ನು ಕೇವಲ ಭೌತಿಕ ಮಾನದಂಡದಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ.

ಇಂದು ಭೌತಿಕ ಹಾಗೂ ಬೌದ್ಧಿಕ ಭ್ರಷ್ಟಾಚಾರಗಳು ನಮ್ಮ ನಡುವೆ ಇವೆ. ಕಾನ್ಸ್‌ಸ್ಟೆಬಲ್ ಪಡೆದ 20ರೂ. ಲಂಚ ಹಾಗೂ 2ಜಿ ಸ್ಪೆಕ್ಟ್ರಮ್ ಹಗರಣಗಳು ಮೂಲಭೂತವಾಗಿ ಒಂದೇ ಆಗಲು ಸಾಧ್ಯವೇ ಇಲ್ಲ ಎಂದು ಅವರು ಅಭಿಪ್ರಾಯಪಟ್ಟರು.

2000 ಇಸವಿಯ ನಂತರ ಸ್ವಿಸ್ ಬ್ಯಾಂಕ್‌ನಲ್ಲಿ ನಮ್ಮ ಭ್ರಷ್ಟ ರಾಜಕಾರಣಿ ಗಳು ಇಟ್ಟಿರುವ ಒಟ್ಟು ಹಣ 5ಲಕ್ಷ ಕೋಟಿಯಿಂದ 50ಲಕ್ಷ ಕೋಟಿ ರೂ. ವರೆಗೆ ಇರಬಹುದು ಎಂದು ವರದಿ ತಿಳಿ ಸುತ್ತದೆ. ಈ ಮೊತ್ತ ಕರ್ನಾಟಕ ರಾಜ್ಯದ 100 ವರ್ಷಗಳ ಬಜೆಟ್‌ಗೆ ಸಮಾನ ವಾಗಿದೆ. ಇದೆಲ್ಲ ನಮ್ಮಿಂದಲೇ ಸುಲಿಗೆ ಮಾಡಿರುವ ಹಣ ಎಂದು ಹೇಳಿದರು.

ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಏ.ಕೆ.ಕುಕ್ಕಿಲ ವಿಷಯ ಮಂಡಿಸಿದರು. ಚಿಂತಕ ಕೆ.ಫಣಿರಾಜ್ ಭ್ರಷ್ಟಾಚಾರದ ಕುರಿತು ಮಾತ ನಾಡಿದರು. ಅಧ್ಯಕ್ಷತೆ ಯನ್ನು ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷ ಎ.ಸಈದ್ ಇಸ್ಮಾಯೀಲ್ ವಹಿಸಿ ದ್ದರು. ಅಬ್ದುಲ್ ಹಮೀದ್ ಪಕ್ಕಲಡ್ಕ, ಡಾ.ಮುಹಮ್ಮದ್ ರಫೀಕ್ ತೋನ್ಸೆ, ಜಿ.ಎಂ.ಶಿರಹಟ್ಟಿ ಉಪಸ್ಥಿತರಿದ್ದರು.

ಕೃಪೆ : ಗಲ್ಪ್ ಕನ್ನಡಿಗ

Advertisement

0 comments:

Post a Comment

 
Top