ಹೂವಿನಿಂದ ನಿತ್ಯ ನಗುವುದನು ಕಲಿ
ದುಂಬಿಂದ ನಿತ್ಯ ಹಾಡುವುದನು
ತರುಗಳ ರೆಂಬೆಂದ ಕಲಿ
ನಿತ್ಯ ತಲೆ ಬಾಗುವುದನು || ೧ ||
ಗಾಳಿಯ ಸೆಳೆತದಿಂದ ಕಲಿ
ಕೊಮಲವಾಗಿ ನಡೆಯುವುದನು
ಹಾಲು ಮತ್ತು ನೀರಿನಿಂದ ಕಲಿ
ಕೂಡುವುದನು ಹಾಗೂ ಕೂಡಿಸುವುದನು || ೨ ||
ಸೂರ್ಯನ ಕಿರಣಗಳಿಂದ ಕಲಿ
ಎಚ್ಚರಗೊಳ್ಳುವುದನು ಹಾಗೂ ಎಚ್ಚರಗೊಳಿಸುವುದನು
ತರು-ಲತೆಗಳಿಂದ ಕಲಿ
ಎಲ್ಲರನೂ ಆಲಂಗಿಸುವುದನು || ೩ ||
ದೀಪದಿಂದ ಕಲಿರಿ ಮಕ್ಕಳೇ
ಅಂಧಕಾರವ ಓಡಿಸುವುದನು ನೀವು
ಪೃಥ್ವಿಂದ ಕಲಿರಿ ಎಲ್ಲರ
ನಿಜವಾದ ಸೇವೆ ಮಾಡುವುದನು || ೪ ||
(ಸೀಖೋ ಹಿಂದಿ ಪದ್ಯದ ಅನುವಾದ)
- ಎ.ಸುಮಿತ್ರಾ, ಗಂಗಾವತಿ.
0 comments:
Post a Comment