ಕೊಪ್ಪಳ :ರಾಜ್ಯ ಸರಕಾರವು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿರುವ ಉಪನ್ಯಾಸಕರನ್ನು ಖಾಯಂ ಮಾಡಬೇಕು, ಅತಿಥಿ ಉಪನ್ಯಾಸಕರ ಸಂಬಳವನ್ನು 10 ಸಾವಿರ ರೂಗಳನ್ನು ನೀಡಬೇಕು, ನಿವೃತ್ತಿ ವಯೋಮಾನ ಹೆಚ್ಚಿಸಬಾರದೆಂದು ಕೊಪ್ಪಳ ಜಿಲ್ಲಾ ಸರಕಾರಿ ಪ್ರಥಮ ದರ್ಜೆ ಕಾಲೇಜುಗಲ ಅತಿಥಿ/ಉಪನ್ಯಾಸಕರ ಸಂಘ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಶಿವಬಸಪ್ಪ ಮಸ್ಕಿ, ಬಸವರಾಜ ಸಸಿಮಠ ಉಪನ್ಯಾಸಕರಿಗೆ ಸಂಬಳ ಹೆಚ್ಚಿಸಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆಯ ಸಾಧನೆಗಳು ಪುಸ್ತಕದಲ್ಲಿ ಹೇಳಲಾಗಿದೆ. ಆದರೆ ಅದು ಸುಳ್ಳು ಸಂಗತಿ.ತಮಗೆ ಇದುವರೆಗೆ 10 ಸಾವಿರ ರೂ.ಸಂಬಳ ನೀಡಲಾಗುತ್ತಿಲ್ಲ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಗೌರವಾಧ್ಯಕ್ಷ ಡಾ.ಪ್ರಕಾಶ ಬಳ್ಳಾರಿ, ಬಸವರಾಜ ಅಡಗಿ, ವಾಣಿಶ್ರೀ ಜೈನ್, ಕಲ್ಲೇಶ ಅಬ್ಬಿಗೇರಿ, ಅನಿಲ ನಾಯಕ, ಬಸಮ್ಮ ಜಿಗೇರಿ, ರಾಘವೇಂದ್ರ ಪತ್ತಾರ ಮೊದಲಾದವರು ಉಪಸ್ಥಿತರಿದ್ದರು.
0 comments:
Post a Comment