PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಪದವಿಪೂರ್ವ ಕಾಲೇಜುಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಅಧ್ಯಾಪಕರ ಪಾತ್ರ ಹಿರಿಯದಾಗಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಅವರು ಹೇಳಿದ್ದಾರೆ. ಬಾಲಕರ ಸ.ಪ.ಪೂ. ಕಾಲೇಜಿನಲಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರುಗಳಿಗೆ ಏರ್ಪಡಿಸಲಾಗಿದ್ದ ಐದು ದಿನಗಳ ತರಬೇತಿ ಕಾರ್ಯಾಗಾರದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಗುಲಬರ್ಗಾ ಮತ್ತು ಬೆಳಗಾವಿ ವಿಭಾಗದಲ್ಲಿ ಅತ್ಯಂತ ಕಡಿಮೆ ಫಲಿತಾಂಶ ಬಂದಿರುವ ಹತ್ತು ಜಿಲ್ಲೆಗಳನ್ನು ಆಯ್ದುಕೊಂಡು, ಹತ್ತು ವಿಷಯಗಳಲ್ಲಿ ಪ್ರಾಚಾರ್ಯರು ಹಾಗೂ ಉಪನ್ಯಾಸಕರುಗಳಿಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಕುರಿತಾಗಿ ಉಪನ್ಯಾಸಕರುಗಳಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿರುವುದು ಸ್ವಾಗತಾರ್ಹವಾಗಿದೆ. ಪ್ರತಿಯೊಂದು ಪ.ಪೂ. ಕಾಲೇಜುಗಳಲ್ಲಿ ದಾಖಲಾದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಅವರ ತಿಳುವಳಿಕೆ ಮಟ್ಟಕ್ಕನುಗುಣವಾಗಿ ಪಾಠ ಪ್ರವಚನಗಳು ನಡೆಯಬೇಕಾಗಿರುತ್ತದೆ. ಉಪನ್ಯಾಸಕರ ಅನಾಸಕ್ತಿಂದ ಕೆಲವೊಂದು ವಿಷಯಗಳಲ್ಲಿ ಸರಿಯಾದ ರೀತಿಯಲ್ಲಿ ಪಾಠ-ಪ್ರವಚನಗಳು ನಡೆಯದೇ ಹೋಗುತ್ತವೆ. ಉಪನ್ಯಾಸಕರುಗಳು ಕಾಲೇಜು ವಿಷಯಗಳ ಹೊರತಾಗಿ ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಜಾತಿ ವಿಷಯಗಳಲ್ಲಿ ಭಾಗವವಿಸುವುದರಿಂದ ಬಹುಶಃ ಶೈಕ್ಷಣಿಕ ಗುಣಮಟ್ಟ ಕೆಳಮಟ್ಟಕ್ಕೆ ಬರಲು ಕಾರಣವಾಗಿರಬಹುದು. ಉಪನ್ಯಾಸಕರು ವಿದ್ಯಾರ್ಥಿಗಳ ಪರಿಸರ, ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಶೈಕ್ಷಣಿಕ ವಿಚಾರವನ್ನು ಮನವರಿಕೆ ಮಾಡಿಕೊಳ್ಳುವಲ್ಲಿ ಆದ್ಯತೆ ವಹಿಸಿಕೊಳ್ಳಬೇಕಾಗಿರುವುದು ಅಗತ್ಯವಾಗಿದೆ. ಪ್ರತಿಯೊಂದು ವಿಷಯದಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯಲು ಕಾರಣವೇನು? ಹವಿದ್ಯಾರ್ಥಿಗಳು ಅಥವಾ ಉಪನ್ಯಾಸಕರು ಕಾರಣವೇ? ಎಂಬುದನ್ನು ಕಂಡುಕೊಳ್ಳಬೇಕು. ಪ್ರತಿ ಕಾಲೇಜಿನಲ್ಲಿ ಅಧ್ಯಾಪಕರು, ಮೇಲಧಿಕಾರಿಗಳು ಈ ಕುರಿತು ಚಿಂತನ, ಮಂಥನ ನಡೆಸಬೇಕಾದ ಅಗತ್ಯವಿದೆ. ರಾಜ್ಯದಲ್ಲಿಯೇ ಶೈಕ್ಷಣಿಕವಾಗಿ ಕೊನೆಯ ಹಾಗೂ ಕೆಳಸ್ಥರದ ಫಲಿತಾಂಶ ಹೊಂದಿರುವ ಜಿಲ್ಲೆಗಳನ್ನು ಗುರುತಿಸಲಾಗಿದೆ. ಅದರಂತೆ ಕೊಪ್ಪಳ ಜಿಲ್ಲೆ ೩೦ ನೇ ಸ್ಥಾನ ಹೊಂದಿದೆ. ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಒಟ್ಟಿಗೆ ಸೇರಿ ಈ ಕುರಿತು ಆಲೋಚನೆ ನಡೆಸಿದಾಗ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಾಧ್ಯ. ಇಲ್ಲದೇ ಹೋದಲ್ಲಿ, ಸರ್ಕಾರ ಶಿಕ್ಷಣಕ್ಕಾಗಿ ವ್ಯಯ ಮಾಡುತ್ತಿರುವ ಹಣ, ನೀರಿನಲ್ಲಿ ಹಾಕಿದಂತಾಗುತ್ತದೆ. ಈಗಲೂ ಕಾಲ ಮಿಂಚಿಲ್ಲ, ಉಪನ್ಯಾಸಕ ವರ್ಗದವರು ಈ ಬಗ್ಗೆ ಗಮನ ಹರಿಸಿ, ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ, ಪರಿಶ್ರಮ ವಹಿಸುವುದು ಅಗತ್ಯವಾಗಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಬಸವರಾಜ ಆಕಳವಾಡಿ ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ.ಪೂ. ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಿ.ಬಿ. ದೊಡ್ಡಮನಿ ಅವರು ಮಾತನಾಡಿ, ಕೊಪ್ಪಳ ಜಿಲ್ಲೆ ಪ.ಪೂ. ಶಿಕ್ಷಣ ಗುಣಮಟ್ಟದಲ್ಲಿ ೩೦ ನೇ ರ್‍ಯಾಂಕ್ ಪಡೆದುಕೊಂಡಿದೆ. ಇದು ಕಳವಳಕಾರಿ ಸಂಗತಿಯಾಗಿದೆ. ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ, ಉಪನ್ಯಾಸಕರು ಹಾಗೂ ಪ್ರಾಚಾರ್ಯರು ಸಮನ್ವಯ ಸಾಧಿಸಬೇಕಾದ ಅಗತ್ಯವಿದೆ. ಮೊದಲನೆ ಹಂತದ ಕಾರ್ಯಾಗಾರ ಅಕ್ಟೋಬರ್ ೧೯ ರಿಂದ ೨೩ ರವರೆಗೆ ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಜೀವಶಾಸ್ತ್ರ, ಗಣಿತ, ಇಂಗ್ಲೀಷ್ ನಡೆದಿದೆ. ಎರಡನೇ ಹಂತದಲ್ಲಿ ಅ. ೨೬ ರಿಂದ ೩೦ ರವರೆಗೆ ಐದು ದಿನಗಳ ಕಾಲ ನಗರದ ಬಾಲಕರ ಸ.ಪ.ಪೂ. ಕಾಲೇಜಿನಲ್ಲಿ ಇತಿಹಾಸ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರ ಹಾಗೂ ರಾಜ್ಯ ಶಾಸ್ತ್ರ ವಿಷಯಗಳ ಕುರಿತು ಉಪನ್ಯಾಸಕರುಗಳಿಗೆ ತರಬೇತಿ ಕಾರ್ಯಾಗಾರ ನಡೆಯಲಿದೆ. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನ" ಮಾಡಿಕೊಂಡರು.

ಕಾರ್ಯಾಗಾರದ ಉದ್ಘಾಟನೆ ಸಮಾರಂಭದಲ್ಲಿ ಪ್ರಾಂಶುಪಾಲರಾದ ಎ.ಜಿ. ಶರಣಪ್ಪ ಮಸೂತಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಪ್ರಾಂಶುಪಾಲ ಎಸ್.ಬಿ. ರಾಜೂರ ಸ್ವಾಗತಿಸಿದರು, ವಿ.ಸಿ. ಬೆನ್ನಳ್ಳಿ ವಂದಿಸಿದರು.

Advertisement

0 comments:

Post a Comment

 
Top