
ಲಾರಿ ಗಾಲಿಗೆ ಸಿಕ್ಕ ಹುಲಿಗೆಮ್ಮ (7) ಎಂಬ ಬಾಲಕಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಸರಕಾರಿ ಆಸ್ಪತ್ರೆ ಎದುರಿನ ರಸ್ತೆ ಪೊಲೀಸ್ ಸ್ಟೇಷನ್ ಗೆ ಹೋಗುವ ದಾರಿಯಲ್ಲಿ ಸೈಕಲ್ ಹಿಂದೆ ಕುಳಿತಿದ್ದ ಬಾಲಕಿ ಆಕಸ್ಮಿಕವಾಗಿ ಲಾರಿ ಹಿಂದಿನ ಗಾಲಿಗೆ ಸಿಲುಕಿ ಮೃತಪಟ್ಟಿದ್ದಾಳೆ. ಲಾರಿ ಬಾಲಕಿಯ ತಲೆಯ ಮೇಲೆ ಹಾಯ್ದು ಹೋಗಿದೆ. ಪ್ರಕರಣವನ್ನು ಪೋಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.
0 comments:
Post a Comment