ಕೊಪ್ಪಳ : ರಾಜ್ಯದ ರಾಜಕೀಯದಲ್ಲಿ ಎದ್ದ ಬಿರುಗಾಳಿಯಿಂದ ಮೂರು ಪಕ್ಷಗಳು ಪ್ರತ್ಯೇಕವಾಗಿ ಕಾರ್ಯಾಚರಣೆಗಿಳಿದಿದ್ರೆ, ಕೊಪ್ಪಳದಲ್ಲಿ ಮೂರು ಪಕ್ಷದ ರಾಜಕಾರಣಿಗಳು ಒಂದೇ ವೇದಿಕೆಯಲ್ಲಿ ಕಲೆತು ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ರ ಗುಣಗಾನ ಮಾಡಿದ ಪ್ರಸಂಗ ನಡೆಯಿತು.
ಬೆಂಗಳೂರಿನ ಜೆ.ಎಚ್.ಪಟೇಲ್ ಪ್ರತಿಷ್ಠಾನದ ವತಿಯಿಂದ ನಡೆಯುತ್ತಿದ್ದ ಪಟೇಲ್ ರ ಹುಟ್ಟುಹಬ್ಬದ ಕಾರ್ಯಕ್ರಮವನ್ನು ಈ ಬಾರಿ ಕುಷ್ಟಗಿಯ ಕಾಂಗ್ರೆಸ್ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಆಯೋಜಿಸಿದ್ದರ ಕಾರ್ಯಕ್ರಮ ಅಧ್ಯಕ್ಷತೆ ಜೆಡಿ ಎಸ್ ನ ಶಾಸಕ ಸಂಗಣ್ಣ ಕರಡಿ ವಹಿಸಿದ್ದು. ಕಾರ್ಯಕ್ರಮದ ಉದ್ಘಾಟನೆ ಬಿಜೆಪಿಯ ಸಂಸದ ಶಿವರಾಮಗೌಡ ನೆರವೇರಿಸಿದ್ದು ವಿಶೇಷ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಶಿವರಾಮಗೌಡ ಕೊಪ್ಪಳವನ್ನು ರಾಯಚೂರಿನಿಂದ ಬೇರ್ಪಡಿಸಿ ಜಿಲ್ಲೆಯಾಗಿಸಿದ್ದಕ್ಕೆ ಜೆ.ಹೆಚ್.ಪಟೇಲ್ ರಿಗೆ ಋಣಿಯಾಗಿರಬೇಕು, ಬಸವಣ್ಣನವರ ಕೂಡಲ ಸಂಗಮದ ಅಭಿವೃದ್ದಿಗಾಗಿ ಕಾಯಕಲ್ಪ ನೀಡಲು ಕೂಡಲ ಸಂಗಮ ಪ್ರಾಧಿಕಾರ ರಚನೆ ಮಾಡಿದ್ದು ಕೂಡ ಅವರ ಹೆಗ್ಗಳಿಗೆ . ಅವರದು ವರ್ಣರಂಜಿತ ವ್ಯಕ್ತಿತ್ವ ಎಂದರು.
ಜೆ.ಎಚ್.ಪಟೇಲ್ ರ ಭಾವಚಿತ್ರವನ್ನು ಅನಾವರಣಗೊಳಿಸಿದ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಪಿ.ನಾಡಗೌಡ ಪಟೇಲರೊಂದಿಗಿನ ರಾಜಕೀಯ ಬದುಕಿನ ದಿನಗಳನ್ನು ಮೆಲಕು ಹಾಕಿದರು. ನಂತರ ಮಾತನಾಡಿದ ಮಾಜಿ ಸಚಿವ ಬಸವರಾಜ ರಾಯರಡ್ಡಿ ಪಟೇಲರು ರಾಜಕಾರಣಿಗಳಲ್ಲಿ , ದಾರ್ಶನಿಕರಿದ್ದಂತೆ ಇದ್ದರು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಸಾನಿಧ್ಯ ಶ್ರೀಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀಹರಿಖೋಡೆ , ಜೆ.ಎಚ್.ಪಟೇಲ್ ರ ಪತ್ನಿ ಸುಮಂಗಳಾ ಪಟೇಲ್ , ಪುತ್ರರಾದ ಮಹಿಮಾ ಪಟೇಲ್, ಫಣಿ ಪಟೇಲ್ ಹಾಗೂ ಪಟೇಲ್ ರ ಅಭಿಮಾನಿಗಳು ಉಪಸ್ಥಿತರಿದ್ದರು. ಪತ್ರಕರ್ತೆ ಸಾವಿತ್ರಿ ಮುಜುಮದಾರ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment