PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಪಂಡಿತ ಪುಟ್ಟರಾಜ ಗವಾಗಳ ನಿಧನಕ್ಕೆ ಕೊಪ್ಪಳ ಜಿಲ್ಲಾಡಳಿತದ ವತಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೌನಾಚರಣೆ ನೆರವೇರಿಸಿ, ಶ್ರದ್ಧಾಂಜಲಿ ಸಲ್ಲಿಸಲಾತು.

ಸರ್ಕಾರಿ ರಜೆ ಘೋಷಣೆ ಮಾಡಿದ್ದು, ಜಿಲ್ಲೆಯಾದ್ಯಂತ ಒಂದು ದಿನದ ಶೋಕಾಚರಣೆ ಆಚರಿಸಲಾತು. ಅಲ್ಲದೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾತು. ಜಿಲ್ಲೆಯಲ್ಲಿ ಯಾವುದೇ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮಗಳನ್ನು ನಡೆಸದಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಮಾತನಾಡಿದ ಅವರು ಪಂಡಿತ ಪುಟ್ಟರಾಜ ಗವಾಗಳು ಅಂಧರ ಬಾಳಿಗೆ ಆಶಾ ಜ್ಯೋತಿಯನ್ನು ಬೆಳಗಿಸಿದವರು, ಅವರ ನಿಧನದಿಂದ ಸಂಗೀತ, ಸಾ"ತ್ಯ ಲೋಕ ಬಡವಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀಗಳ ನಿಧನಕ್ಕೆ ಎರಡು ನಿ"ಷ ಮೌನಾಚರಣೆ ನೆರವೇರಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು. ನಗರದ ಜಿ. ಎಸ್. ಗೋನಾಳ ರವರ ಮನೆಯಲ್ಲಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್, ವರಸಿದ್ಧಿ ವಿನಾಯಕ ಗ್ರಾಮೀಣಾಭವೃದ್ಧಿ ಮತ್ತು ಶಿಕ್ಷಣ ಸಂಸ್ಥೆ ಹಾಗೂ ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಕೊಪ್ಪಳ ಇವರ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ವಿ. ಬಿ. ರಡ್ಡೇರ, ಪುಟ್ಟರಾಜರು ಸಂಗೀತ ಲೋಕದ ಧೃವ ತಾರೆ, ಅಂಧರ ಬಾಳಿನ ಬೆಳಕು, ಶ್ರೀಗಳಿಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ಲಭಿಸಲಿ ಎಂದು ಸಭೆಯಲ್ಲಿ ಆಶಿಸಿದರು. ಸರಕಾರಿ ಅಭಿಯೊಜಕ ಬಿ. ಎಸ್. ಪಾಟೀಲ್ ಮಾತನಾಡಿ ಶ್ರೀಗಳು ೨೧ ನೇ ಶತಮಾನದ ಯುಗಪುರುಷ, ನಮ್ಮ ಪೀಳಿಗೆಯಲ್ಲಿ ಮತ್ತೊಬ್ಬರನ್ನು ಕಾಣಲು ಸಾಧ್ಯ"ಲ್ಲ, ಅವರದು ದೈವಿಶಕ್ತಿಯಿಂದ ಕೂಡಿದ ವ್ಯಕ್ತಿತ್ವ, ನೂರಕ್ಕೂ ಅಧಿಕ ಕೃತಿಗಳನ್ನು ರಚಿಸಿರುವದು ಸಹ ಮೇರು ಕೆಲಸ ಎಂದರು. ಸಭೆಯ ಅಧ್ಯಕ್ಷತೆಯನ್ನು ಡಾ. ಮಹಾಂತೇಶ ಮಲ್ಲನಗೌಡರ ವಹಿಸಿದ್ದರು. ಕಸಾಪ ಅಧ್ಯಕ್ಷರಾದ ಜಿ. ಎಸ್. ಗೋನಾಳ, ಕಾರ್ಯದರ್ಶಿ ಮಂಜುನಾಥ ಗೊಂಡಬಾಳ, ರಾಜಶೇಖರ ಅಂಗಡಿ, ಶಿವಾನಂದ ಹೊದ್ಲೂರ, ಎ. ಪಿ. ಅಂಗಡಿ, ಶ್ರವಣಸಿಂಗ್ ರಜಪೂತ್, ಶಾರದಾ ಸಿಂಗ್, ಶಿವಕುಮಾರ ಕುಕನೂರ, ಶಿ. ಕಾ. ಬಡಿಗೇರ, ಶ್ರೀನಿವಾಸ ಚಿತ್ರಗಾರ, ಸಿದ್ದಪ್ಪ ಮೇಟಿ, ಕೊಟ್ರೇಶ ಸಶಿಮಠ, ಶಂಕ್ರಯ್ಯ ಅಬ್ಬಿಗೇರಿಮಠ, ಪುಷ್ಪಲತಾ ಪ್ರಕಾಶ ಇತರರು ಇದ್ದರು.

Advertisement

0 comments:

Post a Comment

 
Top