ಅಬುಧಾಬಿ ಕನ್ನಡ ಸಂಘವು ಅಲ್ಲಿನ ಇಂಡಿಯಾ ಸೊಶಿಯಲ್ ಆಂಡ್ ಕಲ್ಚರಲ್ ಕ್ಲಬ್ ನಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ನವಂಬರ್ 5 ರಂದು ಆಚರಿಸಲು ನಿರ್ಧರಿಸಿದೆ.
ಯು.ಏ.ಈ ಕನ್ನಡಿಗರ, ಕನ್ನಡ ಚಟುವಟಿಕೆಗಳ ಮಹಾಪೋಷಕರಾದ ಡಾ.ಬಿ.ಆರ್.ಶೆಟ್ಟಿ ಅವರು ದಂಪತಿ ಸಹಿತ ಉಪಸ್ಥಿತರಿದ್ದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಯು ಏ ಇ ಯಲ್ಲಿ ಭಾರತೀಯ ರಾಯಭಾರಿಯಾಗಿರುವ ಎಂ.ಕೆ ಲೋಕೇಶ್ ಅವರು ಮುಖ್ಯ ಅತಿಥಿಗಳಾಗಿರುವರು.
ಕರ್ನಾಟಕದ ಖ್ಯಾತ ಹಾಸ್ಯ ಭಾಷಣಕಾರರಾದ ಗಂಗಾವತಿ ಬೀಚಿ ಖ್ಯಾತಿಯ ಪ್ರಾಣೇಶ್ ಮತ್ತು ಮಿಮಿಕ್ರಿ ಪಟು ನರಸಿಂಹ ಜೋಶಿ ಅವರ ಕಾರ್ಯಕ್ರಮವಿದೆ.
ಅವರು ತಲಾ ಒಂದು ಘಂಟೆಗಳ ಹಾಸ್ಯ ರಸಾಯನ ಉಣ ಬಡಿಸಲಿದ್ದಾರೆ.
ವಿವಿಧ ವಿನೋದಾವಳಿಗಳು, ನೃತ್ಯ,ಹಾಡುಗಳು, ಪ್ರಹಸನಗಳು ನಡೆಯಲಿವೆ. ಸ್ಥಳದಲ್ಲೇ ವಿವಿಧ ಬಹುಮಾನ ಪಡೆಯುವ ಅವಕಾಶಗಳು ಇವೆ.
ಹೊರನಾಡಿನ ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕೆಂದು ಸಂಘಟಕರು ವಿನಂತಿಸಿ ಕೊಂಡಿದ್ದಾರೆ. ಸೋಲೊ ಹಾಡು ಮತ್ತು ನೃತ್ಯಗಳಿಗೆ ಅವಕಾಶವಿಲ್ಲ. ಸಮೂಹ ನೃತ್ಯ ಮತ್ತು ಗಾಯನ ಮತ್ತು ಇತರ ಕಾರ್ಯಕ್ರಮ ನೀಡುವವರು ಕೂಡಲೇ ತಮ್ಮ ಹೆಸರುಗಳನ್ನು ಅನಂತ್(050-7891843)ಅಥವಾ ಮನೋಹರ್ (050-5212079) ಅವರಲ್ಲಿ ನೀಡಬಹುದು.
ಯುಏಇ ಕನ್ನಡಿಗ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ವಿದ್ಯಾರ್ಥಿಗಳಿಗೆ ಪ್ರೊತ್ಸಾಹ ನೀಡುವುದಕ್ಕಾಗಿ ಕಲೆ, ಸಾಹಿತ್ಯ, ಶಿಕ್ಷಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅಪೂರ್ವ ಸೇವೆ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಗುತ್ತಿದೆ.
10 ನೇ ಮತ್ತು 12 ನೇ ಗ್ರೇಡ್ ನಲ್ಲಿ ಬೋರ್ಡ್ ಪರೀಕ್ಷೆಗಳಲ್ಲಿ ೯೦ ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸಿದವರು, ಪಠ್ಯೇತರ ಚಟುವಟಿಕೆಗಳಲ್ಲಿ ಅಪೂರ್ವ ಸಾಧನೆ ಗೈದವರು, ವಿದೇಶಗಳಲ್ಲಿ ನಡೆದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕ್ರೀಡಾ ಪಟು ವಿದ್ಯಾರ್ಥಿಗಳು, ಶೇಖ್ ಹಮ್ ದಾನ್ ಅವಾರ್ಡ್, ದುಬಾಯಿ, ಶಾರ್ಜಾ ಅವಾರ್ಡ್ ಪಡೆದವರು ತಮ್ಮ ವಿವರಗಳನ್ನು ಪರಿಶೀಲನೆಗಾಗಿ sarvo@eim.ae ಅವರಿಗೆ ಮೇಲ್ ಮಾಡಬಹುದು.
ಹೆಚ್ಚಿನ ಮಾಹಿತಿಗೆ: Sarvotham Shetty 50-6125464, Ananth S. 50-7891843,
0 comments:
Post a Comment