ಕೊಪ್ಪಳ : ನೆಮ್ಮದಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ನೌಕರರು ಸಂಬಳ ಇಲ್ಲದೇ ಒದ್ದಾಡುತ್ತಿದ್ದಾರೆ. ಕಳೆದ 4 ತಿಂಗಳುಗಳಿಂದ ಇವರಿಗೆ ಸಂಬಳ ಸಿಕ್ಕಿಲ್ಲ. ಕೊಪ್ಪಳಜಿಲ್ಲೆಯ 20 ಹೋಬಳಿಗಳಲ್ಲಿ ಹೋಬಳಿಗೊಬ್ಬರಂತೆ ಒಟ್ಟು 20 ಜನರು ಕಂಪ್ಯೂಟರ್ ಆಪರೇಟರ್ ಗಳೆಂದು . ಕೆಲಸಮಾಡುತ್ತಿದ್ದಾರೆ ಅವರಿಗೆ ನೀಡಲಾಗುತ್ತಿದ್ದ ಸಂಬಳ ತಿಂಗಳಿಗೆ 3500 ರೂ. ಅದೂ ಸಹ ಕಳೆದ ನಾಲ್ಕು ತಿಂಗಳುಗಳಿಂದ ವಿತರಣೆಯಾಗಿಲ್ಲ. ಸಂಬಳವಿಲ್ಲದೇ ಪರದಾಡುತ್ತಿದ್ದು—ತಿಂಗಳುಗಟ್ಟಲೇ ಪಗಾರ ನೀಡಿಲ್ಲ, ಜೀವನ ಸಾಗಿಸುವುದೇ ಕಷ್ಟವಾಗಿದೆ ಎಂದು ನೌಕರರು ತಮ್ಮ ದುಃಖ ತೋಡಿಕೊಂಡಿದ್ದಾರೆ. ಕೊಪ್ಪಳ ಜಿಲ್ಲೆಯ ನೆಮ್ಮದಿ ಕೇಂದ್ರದ ಉಸ್ತುವಾರಿ ಪಡೆದಿರುವವರು ಇತ್ತ ಗಮನ ಹರಿಸಲಿ.
0 comments:
Post a Comment