ಕೊಪ್ಪಳ : ಉರಿಬಿಸಿಲಿನಲ್ಲಿ ಡಿಸಿ ಕಚೇರಿಗೋ, ನಗರಸಭೆಗೋ ಇಲ್ಲವೇ ಗಡಿಯಾರ ಕಂಬದ ಸರ್ಕಲ್ ಹತ್ತಿರವೋ ಜನ ಸೇರುತ್ತಲೇ ಇದ್ದಾರೆ. ಪ್ರತಿಯೊಂದಕ್ಕೂ ಪ್ರತಿಭಟನೆಯ ಮಾಡಲೇಬೇಕಾದ ಅನಿವಾರ್ಯತೆಗೊಳಗಾಗಿರುವ ಜನತೆ ಕುಡಿಯುವ ನೀರಿಗೆ, ಶೌಚಾಲಯಕ್ಕೆ, ಒತ್ತುವರಿಗೆ, ಅಗಲೀಕರಣದಿಂದಾದ ಹಾನಿಗೆ ಒಟ್ಟಿನಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ.
ನಿನ್ನೆ ಶ್ರೀಕಾಳಿಕಾಂಬಾದೇವಿ ಮಹಿಳಾ ಸಂಘ ಜಿಲ್ಲಾಧಿಕಾರಿಗಳಿಗೆ ನಗರದ ವಿವಿದೆಡೆ ಕೈಗೊಂಡಿರುವ ತೆರವು ಕಾರ್ಯಾಚರಣೆ ನಡೆಸುವ ಮುನ್ನ ತಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು. ನಗರದ ವಿವಿದ ಸರ್ಕಲ್ ಗಳಲ್ಲಿ ಡಬ್ಬಾ ಅಂಗಡಿಗಳನ್ನಿಟ್ಟುಕೊಂಡು ಜೀವಿಸುತ್ತಿರುವ ನೂರಾರು ಜನರಿಗೆ ಯಾವುದೇ ಮುನ್ಸೂಚನೆ ನೀಡದೆ ತೆರವು ಮಾಡುತ್ತಿರುವುದರಿಂದ ತಮ್ಮ ಜೀವನಕ್ಕೆ ಬಹ ಳತೊಂದರೆಯಾಗಿದೆ. ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಕಾರ್ಯಾಚರಣೆ ಮುಂದುವರೆಸಲಬೇಕೆಂದು ಆಗ್ರಹಿಸಿದ್ದಾರೆ.
ಇನ್ನೊಂದೆರೆ ತೆರವು ಕಾರ್ಯಾಚರಣೆಯಲ್ಲಿ ತಾರತಮ್ಯಮಾಡಲಾಗುತ್ತಿದೆ ಎಂದು ಆರೋಪಿಸಿ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಲಾಯಿತು. ತೆರವು ಕಾರ್ಯಾಚರಣೆಯಲ್ಲಿ ಕೆಲವು ಅಂಗಡಿಗಳನ್ನು ತೆಗೆಸಿ ಕೆಲವನ್ನು ಹಾಗೇಯೆ ಬಿಡಲಾಗಿದೆ. ಈ ತಾರತಮ್ಯ ಏಕೆ ಮಾಡುತ್ತೀರಿ. ತೆರವು ಮಾಡುವಂತಿದ್ದರೆ ಎಲ್ಲವನ್ನು ಮಾಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತರು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.
ನಗರಸಭೆಗೆ ಬೀಗ ಹಾಕಿ ಬಹಾರಪೇಟೆಯ ನಿವಾಸಿಗಳು ಪ್ರತಿಭಟನೆ ಮಾಡಿದರು. ಬಹಾರಪೇಟೆ ಸ್ಕೂಲ್ ಹತ್ತಿರ ಇರುವ ಶೌಚಲಯದಿಂದ ವಾರ್ಡಿನ ತುಂಬ ಗಬ್ಬು ನಾತ ಹರಡಿಕೊಂಡಿದೆ ಸ್ವಚ್ಛತೆಗಾಗಿ ಆಗ್ರಹಿಸಿದರೂ ಯಾವುದೇ ಸ್ವಚ್ಚ ಕಾರ್ಯ ನಡೆಯುತ್ತಿಲ್ಲ ನಗರಸಭೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಆಕ್ರೋ ಶವ್ಯಕ್ತಪಡಿಸಿದರು. ನಗರಸಭೆಯ ಪೌರಾಯುಕ್ತರು ಬಂದು ಮನವಿ ಸ್ವೀಕರಿಸಿ ಸೂಕ್ತ ಕ್ರಮದ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.
0 comments:
Post a Comment