PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಹಿರೇಹಳ್ಳ ಯೋಜನೆಯಡಿ ಸ್ವಾಧೀನಪಡಿಸಿಕೊಳ್ಳಲಾಗಿರುವ ಭೂ"ಯಲ್ಲಿ ರೈತರು ಈ ಬಾರಿ ಯಾವುದೇ ಬೆಳೆ ಬೆಳೆಯದಂತೆ ತುಂಗಭದ್ರಾ ಜಲಾಶಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಸೂಚನೆ ನೀಡಿದ್ದಾರೆ.

ಹಿರೇಹಳ್ಳ ಯೋಜನೆಯಡಿ ಹಿನ್ನೀರಿನಿಂದ ಶೀತಪೀಡಿತವಾಗುವ ಯಲಬುರ್ಗಾ ತಾಲೂಕಿನ ಶಿರೂರು, ವಿರಾಪುರ, ಮುತ್ತಾಳ ಹಾಗೂ ಬಸಿನೀರಿನಿಂದ ಬಾಧಿತವಾಗುವ ಕೊಪ್ಪಳ ತಾಲೂಕಿನ ಮುದ್ಲಾಪುರ ಗ್ರಾಮವನ್ನು ಪುನರ್ವಸತಿ ಮತ್ತು ಪುನರ್ ನಿರ್ಮಾಣ ಅಡಿ ಸ್ಥಳಾಂತರಿಸಲು ಈ ಭಾಗದ ಭೂ"ಯನ್ನು ಇಲಾಖೆಂದ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇದಕ್ಕಾಗಿ ಈಗಾಗಲೆ ಸಂಬಂಧಪಟ್ಟವರಿಗೆ ಪರಿಹಾರ ಹಣವನ್ನು ಪಾವತಿ ಮಾಡಲಾಗಿದೆ. ಈ ರೀತಿ ವಶಪಡಿಸಿಕೊಂಡ ಭೂಮಿಯಲ್ಲಿ ಲೇಔಟ್ ಕಾರ್ಯ ನಡೆದಿರುವುದರಿಂದ, ಪ್ರಸಕ್ತ ಸಾಲಿನಿಂದ ಈ ಭೂಮಿಯಲ್ಲಿ ಯಾವುದೇ ರೈತರು, ಯಾವುದೇ ತರಹದ ಬೆಳೆಗಳನ್ನು ಬೆಳೆಯಬಾರದು. ಒಂದು ವೇಳೆ ಯಾರಾದರೂ ಬೆಳೆ ಬೆಳೆದಲ್ಲಿ ಉಂಟಾಗುವ ನಷ್ಟಕ್ಕೆ ಸಂಬಂಧಪಟ್ಟವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ತುಂಗಭದ್ರಾ ಜಲಾಶಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Advertisement

0 comments:

Post a Comment

 
Top