PLEASE LOGIN TO KANNADANET.COM FOR REGULAR NEWS-UPDATES

ಬೆಂಗಳೂರು: ರೆಡ್ಡಿಗಳು ತಮ್ಮದೇ ಆದ ಸುದ್ದಿವಾಹಿನಿ ಹುಟ್ಟುಹಾಕುವ ಸನ್ನಾಹದಲ್ಲಿದ್ದಾರೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ ಈ ಹೊಸ ಸುದ್ದಿವಾಹಿನಿಗೆ 'ಜನಶ್ರೀ'ಎಂದು ಹೆಸರಿಡಲಾಗಿದೆ. ಯಾವುದೋ ಸರ್ಕಾರಿ ಯೋಜನೆಯ ಹೆಸರಿನಂತಿದ್ದರೂ, ಇದರರ್ಥ ಬೇರೆ ಇದೆ. ಜನಾರ್ದನ ರೆಡ್ಡಿ ಹೆಸರಿನಿಂದ 'ಜನ' ಹಾಗೂ ಶ್ರೀ ರಾಮುಲು ಹೆಸರಿನಿಂದ 'ಶ್ರೀ' ತೆಗೆದು 'ಜನಶ್ರೀ' ಎಂದು ಹೆಸರಿಸಲಾಗಿದೆಯಂತೆ.
ಕೋರಮಂಗಲದಲ್ಲಿ ತನ್ನ ಕೇಂದ್ರ ಕಚೇರಿಯನ್ನು ಜನಶ್ರೀ ವಾಹಿನಿ ಹೊಂದಲಿದೆ. ಅಗಷ್ಟ್ ವೇಳೆಗೆ ಸುದ್ದಿವಾಹಿನಿ ಪ್ರಸಾರ ಆರಂಭವಾಗುವ ಸಾಧ್ಯತೆಯಿದ್ದರೂ, ಶುಭ ಮಹೂರ್ತಕ್ಕಾಗಿ ದಸರಾ ಅಥವಾ ದೀಪಾವಳಿಯ ವರೆಗೂ ಕಾಯಲು ರೆಡ್ಡಿಗಳು ಸಿದ್ಧರಾಗಿದ್ದರಂತೆ. ಈ ಸುದ್ದಿವಾಹಿನಿ ರಾಜ್ಯದ ಪ್ರವಾಸೋದ್ಯಮ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಕನಸಿನ ಕೂಸಾದರೂ, ವಾಹಿನಿಯ ದೈನಂದಿನ ಕೆಲಸದಲ್ಲಿ ಅವರು ತಲೆ ಹಾಕುವುದಿಲ್ಲವಂತೆ. ಅಧಿಕೃತವಾಗಿ ಇನ್ನೂ ಸುದ್ದಿ ಹೊರಬಿದ್ದಿಲ್ಲವಾದರೂ ಅಗಷ್ಟ್ ವೇಳೆಗೆ ಜನಶ್ರೀ ಬರುವುದು ಖಚಿತ ಎನ್ನಲಾಗುತ್ತಿದೆ.

Advertisement

0 comments:

Post a Comment

 
Top