ಕೊಪ್ಪಳ : ಬೆಳಗಿನಿಂದಲೇ ಕಾಯುತ್ತ ಕುಳಿತ ಜನತೆ ,ಪಾಸ್ ಇಲ್ಲದೇ ಮತ ಎಣಿಕೆ ಕೇಂದ್ರದಲ್ಲಿ ಕುಳಿತಿದ್ದರಿಂದ ಅವರನ್ನು ಹೊರಹಾಕಲು ಪೊಲೀಸರು ಹರಸಾಹ ಪಡಬೇಕಾಯಿತು. ಪೊಲೀಸರ ಮನವಿ ಮಣಿಯದ್ದರಿಂದ ಜನರ ಮೇಲೆ ಲಘು ಲಾಠಿ ಪ್ರಹಾರ ನಡೆಸಲಾಯಿತು. ಇದರಿಂದಾಗಿ ಮತ ಎಣಿಕೆ ಕೇಂದ್ರದ ಸುತ್ತ ತುಸು ಸಮಯ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಲಾಠಿ ಪ್ರಹಾರಕ್ಕೆ ಹೆದರಿದ ಜನತೆ ದಿಕ್ಕೆಟ್ಟು ಓಡಿದ್ದರಿಂದ ಆವರಣದ ತುಂಬೆಲ್ಲಾ ರಾಶಿಗಟ್ಟಲೇ ಚಪ್ಪಲಿಗಳು ಬಿದ್ದಿದ್ದವು.
ಒಂದೊಂದೆ ಫಲಿತಾಂಶ ಬರುತ್ತಿದ್ದಂತೆ ಅಭ್ಯರ್ಥಿ ಅವರ ಬೆಂಬಲಿಗರು ಬಣ್ಣ ಎರಚಿಕೊಂಡು ಸಂಭ್ರಮಿಸಿದರೆ ಸೋತ ಅಭ್ಯರ್ಥಿಗಳು ಮೆಲ್ಲಗೆ ಜಾಗ ಖಾಲಿ ಮಾಡುತ್ತಿದ್ದರು. ಸೈಲೆನ್ಸ್ರ ಕಿತ್ತ ದ್ವಿಚಕ್ರವಾಹನಗಳನ್ನು ಚಲಾಯಿಸುತ್ತಾ ಬೆಂಬಲಿಗರು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರೆ, ಉರಿ ಬಿಸಿಲಿನಲ್ಲಿ ಎಳೆನೀರು, ಐಸ್ ಕ್ರೀಮ್ ಮಾರಾಟ ಭರದಿಂದ ಸಾಗಿತ್ತು.
ಇವಿಷ್ಟು ಮತ ಎಣಿಕೆ ಕೇಂದ್ರವಾದ ಗವಿಸಿದ್ದೇಶ್ವರ ಮಹಾವಿದ್ಯಾಲಯದ ಆವರಣದಲ್ಲಿ ಮತ ಎಣಿಕೆ ಸಂದರ್ಭದಲ್ಲಿ ಕಂಡು ಬಂದ ದೃಶ್ಯಗಳು. ಸೋಮವಾರ ಬೆಳಿಗ್ಗೆ ಮತ ಎಣಿಕೆ ಆರಂಭಗೊಂಡು ಮಧ್ಯರಾತ್ರಿಯ ತನಕ ಮುಂದುವರೆದಿತ್ತು. ಘೋಷಿತ ಫಲಿತಾಂಶಗಳನ್ನು ಬಿಟ್ಟರೆ ಉಳಿದ ಅಭ್ಯರ್ಥಿಗಳು ತಮ್ಮ ಪಂಚಾಯತ್ ಗಳ ಮತ ಎಣಿಕೆ ಯಾವಾಗ ಶುರುವಾಗುತ್ತೊ ಎಂದು ಕಾಯುತ್ತಾ ಕುಳಿತಿದ್ದರು.
0 comments:
Post a Comment