ಕೊಪ್ಪಳ : ವಿರೋಧ ಪಕ್ಷದ ಸದಸ್ಯರ ಗದ್ದಲ ,ಕೊಲಾಹಲದ ನಡುವೆ 8.36 ಲಕ್ಷ ರೂಪಾಯಿಯ ಉಳಿತಾಯ ಬಜೆಟ್ ಮಂಡಿಸಲಾಯಿತು. ಬಜೆಟ್ ಗೆ ಉಳಿದ ಸದಸ್ಯರು ಅನುಮೋಧನೆ ನೀಡಿದರು. ಸದಸ್ಯರ ಸಲಹೆ ಪಡೆಯದೆ ತಮಗಿಷ್ಟ ಬಂದಂತೆ ಬಜೆಟ್ ರೂಪಿಸಲಾಗಿದೆ ಎಂದು ಪ್ರತಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿ ಧರಣಿ ನಡೆಸಿದರು. ಇದೇ ಮೊದಲ ಬಾರಿಗೆ ಸಿ ಎಂ ಅನುದಾನದಲ್ಲಿ ದೊಡ್ಡ ಮಟ್ಟದ ಅನುದಾನ ಬಂದಿರವುದರಿಂದ ನಗರದ ಜನತೆಗೆ ಯಾವುದೇ ಹೊಸ ತೆರಿಗೆ ಹಾಕಲಾಗಿಲ್ಲ. ಅಷ್ಟರಮಟ್ಟಿಗೆ ನಗರದ ನಿವಾಸಿಗಳು ಸೇಫ್. ವಿವಿದ ಮೂಲಗಳಿಂ ದ ಮತ್ತು ಮುಖ್ಯಮಂತ್ರಿಯವರ ಅನುದಾನದಿಂದ 15 ಕೋಟಿ ಹೀಗೆ ಒಟ್ಟು ರೂ. 27.92 ಕೋಟಿ ರೂಗಳ ಅನುದಾನ ಬರುವ ನಿರೀಕ್ಷೆ ಇದೆ. ಇದರಲ್ಲಿ 27.84 ಕೋಟಿ ರೂಗಳ ವೆಚ್ಚದ ಬಜೆಟ್ ನ್ನು ಮಂಡಿಸಲಾಗಿದ್ದು ಒಟ್ಟು 8.36 ಲಕ್ಷ ರೂಪಾಯಿ ಉಳಿತಾಯವಾಗಲಿದೆ ಎಂದು ಅಧ್ಯಕ್ಷರಾದ ಚಂದ್ರಶೇಖರ್ ಕವಲೂರ್ ತಿಳಿಸಿದರು.
ಇದಕ್ಕೂ ಮೊದಲು ವೀರಣ್ಣ ಹಂಚಿನಾಳ, ಅಮ್ಜದ್ ಪಟೇಲ್,ಕಾಟನ್ ಪಾಷ, ಮಾನ್ವಿ ಪಾಷಾ ಸೇರಿದಂತೆ ಇತರರು ಸಭಾತ್ಯಾಗ ಮಾಡಿ ಅಧ್ಯಕ್ಷರು ತಮಗಿಷ್ಟ ಬಂದಂತೆ ಬಜೆಟ್ ರೂಪಿಸಿದ್ದಾರೆ. ಸದಸ್ಯರ ಸಲಹೆಯನ್ನು ಸಹ ಕೇಳಿಲ್ಲ ಎಂದು ಆರೋಪಿಸಿದರು.
0 comments:
Post a Comment