ಕೊಪ್ಪಳ : ಶ್ರೀಗವಿಸಿದ್ದೇಶರ ಮಹಾವಿದ್ಯಾಲಯ ಕೊಪ್ಪಳ ಹಾಗೂ ವಿಶ್ವವಿದ್ಯಾಲಯ ದನಸಹಾಯ ಆಯೋಗದ ಪ್ರಾಯೋಜಕತ್ವದಲ್ಲಿ ಇಂದು ಗವಿಸಿದ್ದೇಸ್ವರ ಕಾಲೇಜಿನಲ್ಲಿ ನಡೆದ ಹೈದ್ರಾಬಾದ್ ಕರ್ನಾಟಕದ ಅಭಿವರದ್ದಿಗೆ ವಿಶೇಷ ಸವಲತ್ತಿಗಾಗಿ ಸಂವಿಧಾನದ 371ನೇ ಕಲಂ ತಿದ್ದುಪಡಿ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯಿತು.
ಉದ್ಘಾಟಕರಾಗಿ ಆಗಮಿಸಬೇಕಿದ್ದ ದೂರದ ಧಾರವಾಡದ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಜೆಎಸ್.ಪಾಟಿಲ್ ಗೈರಾದರೆ, ಅತಿಥಿಗಲಾಗಿ ಆಗಮಿಸಬೇಕಿದ್ದ ಕೊಪ್ಪಳ ಜಿಲ್ಲೆಯ ಶಾಸಕರು, ಸಂಸದರು ಕೈಕೊಟ್ಟರೆ ವಿಧಾನಪರಿಷತ್ ಸದಸ್ಯರ ಪೈಕಿ ಹಾಲಪ್ಪ ಆಚಾರ್ ಆಗಮಿಸಿ ತರಾತುರಿಯಲ್ಲಿ ಹೊರನಡೆದರು.
ಒಟ್ಟಿನಲ್ಲಿ ಇಲ್ಲಿನ ಜನಪ್ರತಿನಿಧಿಗಳಿಗ 371ನೇ ಕಲಂ ಬಗ್ಗೆ ಅದೆಂತಹ ಪ್ರೀತಿ ಇದೆ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಇಡೀ ದಿನ ನಡೆಯುವ ರಾಜ್ಯಮಟ್ಟದ ಈ ವಿಚಾರ ಸಂಕಿರಣಕ್ಕೆ ಪ್ರತಿನಿಧಿಗಲಾಗಿ ಬಂದವರು ಕೇವಲ 34 ಜನ. ಅದರಲ್ಲೂ ದಕ್ಷಿಣ ಭಾರತ ಹಿಂದಿ ಪ್ರಚಾರ ಮಹಾಸಭಾಕ್ಕೆ ಸಂಬಂಧಪಟ್ಟವರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. 15 ದಿನಗಳ ಹಿಂದೆ ಇದೇ ಕಾಲೇಜಿನಲ್ಲಿ ಜರುಗಿದ ಒಂದು ವಿಚಾರ ಸಂಕಿರಣಕ್ಕೆ ಇದೇ ಮಹಾಸಭಾದವರು ಹೆಚ್ಚಿನ ಸಂಖ್ಯೆಯಲ್ಲಿದ್ದದ್ದು ಕಾಕತಾಳೀಯವೇನಲ್ಲ.
ಜನಪ್ರತಿನಿದಿಗಳ ಗೈರು ಹಾಜರಿಯಿಂದ ರೊಚ್ಚಿಗೆದ್ದ ವಿದ್ಯಾರ್ಥಿಯೊಬ್ಬ ವೇದಿಕೆ ಬಳಿ ತೆರಲಿ ನಿರೂಪಕರ ಮೈಕ್ ನಲ್ಲಿ ಹಾಜರಾಗದ ಇಂತಹ ಜನಪ್ರತಿನಿಧಿಗಲನ್ನು ಯಾಕೆ ಆಮಂತ್ರಿಸುತ್ತೀರಿ ಎಂದು ಪ್ರಶ್ನಿಸಿದಾಗ ಕಾಲೇಜ್ ನ ಪ್ರಿನ್ಸಿಪಾಲ್ ಅಲ್ಲಮಪ್ರಭು ಬೆಟ್ಟದೂರವರು ಜನಪ್ರತಿನಿಧಿಗಳಿಗೆ 371ನೇ ಕಲಂ ಏನು ಅನ್ನೋದು ತಿಳಿದುಕೊಳ್ಳಲಿ ಎಂದು ಅವರನ್ನು ಅತಿಥಿಯಾಗಿ ಕರೆಯಲಾಗಿತ್ತು ಎಂದು ಸಮಜಾಯಿಷಿದರು. ಹಾಗಾದರೆ ಅವರ ಮನೆಗೆ ಹೊಗಿ ಅವರಿಗೆ ಅದರ ಬಗ್ಗೆ ತಿಳಿ ಹೇಳಿ ಬನ್ನಿ ಎಂಬ ಆಕ್ರೋಶದ ಮಾತು ವೇದಿಕೆ ಮೇಲಿದ್ದ ವೈಜನಾಥ ಪಾಟೀಲರಿಗೂ ಕೇಳಿಸಲಿಲ್ಲ. ಒಟ್ಟಿನಲ್ಲಿ ಜನಪ್ರತಿನಿಧಿಗಳ ಗೈರು ಹಾಜರಿಯು 371ನೇ ಕಲಂ ಕುರಿತು ಅವರಿಗಿರುವ ಅಸಡ್ಡೆಯೋ, ಅಜ್ಞಾನವೋ ಅಥವಾ ಕಾರ್ಯಕ್ರಮ ಆಯೋಜರಕ ಕುರಿತು ಇರುವ ಗೌರವ ಎತ್ತಿತೋರಿತೋ ಎಂಬ ಪ್ರಶ್ನೆಗಳು ಉದ್ಭವಿಸಿದ್ದು ನಿಜ. ಆದರೆ ಉತ್ತರ ಯಾರ ಬಳಿಯೂ ಇರಲಿಲ್ಲ.
0 comments:
Post a Comment