ಮಹಿಷಿ ವರದಿ ಜಾರಿಗಾಗಿ ಹೋರಾಟಕ್ಕೆ ಸಿದ್ದರಾಗಬೇಕು !
ಮಹಿಷಿ ವರದಿ ಜಾರಿಯಾದರೆ ಬಹುಪಾಲು ಉದ್ಯೋಗಗಳು ಕನ್ನಡಿಗರಿಗೆ ಸಿಗುತ್ತವೆ. ಅದಕ್ಕಾಗಿ ದಿಟ್ಟ ಹೋರಾಟ ಮಾಡಲು ಕನ್ನಡಿಗರು ಸಿದ್ದರಾಗಬೇಕೆಂದು ಬಂಡಾಯ ಸಾಹಿತಿ , ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಸದಸ್ಯರಾದ ಶ್ರೀ ಅಲ್ಲಮ ಪ್ರಭು ಬೆಟ್ಟದೂರು ಅಭಿಪ್ರಾಯ ಪಟ್ಟಿದ್ದಾರೆ.
ಸ್ಥಳೀಯ ಅಗ್ನಿದಿವ್ಯ ಪತ್ರಿಕೆಯ ನೆನಪುಗಳ ಮಾತು ಅಂಕಣದಲ್ಲಿ ಕರೆ ನೀಡಿರುವ ಬೆಟ್ಟದೂರರು ಕನ್ನಡ ಮಾಧ್ಯಮದಿಂದ ಬಂದ ವಿದ್ಯಾರ್ಥಿಗಳಿಗೆ ಮೆಡಿಕಲ್, ಇಂಜಿನಿಯರಿಂಗ್ ಕೋರ್ಸ್ ಗಳಲ್ಲಿ ಶೇ.5ರಷ್ಟು ಮೀಸಲಾತಿ ಸಿಗಲು ಬರಗೂರು ರಾಮಚಂದ್ರಪ್ಪ ಕಾರಣರಾಗಿದ್ದಾರೆ. ಎಷ್ಟು ಪ್ರತಿಶತ ಕನ್ನಡ ಮಾಧ್ಯಮದ ವಿದ್ಯಾರ್ಥಿಗಲಿದ್ದಾರೋ ಅಷ್ಟು ಮೀಸಲಾತಿ ಕನ್ನಡಿಗ ವಿದ್ಯಾರ್ಥಿಗಳಿಗೆ ನೀಡಬೇಕೆಂದು ತಮ್ಮ ನಿಲುವು ವ್ಯಕ್ತಪಡಿಸಿದ್ದಾರೆ.
ಆಡಳಿತದಲ್ಲಿ ಕನ್ನಡ ಕೆಳಹಂತದಲ್ಲಿ ಇದೆ. ಆದರೆ ವಿಧಾನಸೌಧದಲ್ಲಿ ಸಂಪೂರ್ಣ ಕನ್ನಡ ವಾತಾವರಣವಿಲ್ಲ. ಐ ಎ ಎಸ್ ಅಧಿಕಾರಿಗಳು ಇಂಗ್ಲಿಷ್ ನ ಭ್ರಮೆಯಿಂದ ಹೊರಬಂದಿಲ್ಲ. ಜನ ಭಾಷೆಯಲ್ಲಿ ಆಡಳಿತ ನಡೆದಾಗ ಮಾತ್ರ ಜನರಿಗೆ ತಿಳಿಯುತ್ತದೆ ಎಂದಿರುವ ಅವರು ನಮ್ಮ ಬಹುಪಾಲು ಜನಪ್ರತಿನಿಧಿಗಳು ಹೆಚ್ಚಿಗೆ ಓದಿದವರಿಲ್ಲ. ಅವರನ್ನು ಮೋಸಗೊಳಿಸಲು ಐ ಎ ಎಸ್ ಅಧಿಕಾರಿಗಳು ಮದ್ದಾಂ ಇಂಗ್ಲೀಷನ್ನು ಬಳಸುತ್ತಾರೆ ಎಂದಿರುವ ಅವರು ಪಾಟೀಲ ಪುಟ್ಟಪ್ಪ, ಚಂಪಾ ಅಂಥ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದನ್ನು ಅಂಕಣದಲ್ಲಿ ನೆನಪಿಸಿಕೊಂಡಿದ್ದಾರೆ.
ನಾನು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯನಾಗಿದ್ದೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಕಚೇರಿಗಳನ್ನು ಪರಶೀಲಿಸಿದ ನಮ್ಮ ಕಾಲೇಜನ್ನು ಪರಿಶೀಲಿಸಿದೆ ಎಂದು ತಮ್ಮ ಸದಸ್ಯತ್ವದ ಕಾರ್ಯಗಳನ್ನು ಅಂಕಣದಲ್ಲಿ ನೆನಪಿಸಿಕೊಂಡಿರುವ ಬೆಟ್ಟದೂರವರು ಮಹಿಷಿ ವರದಿ ಜಾರಿಗಾಗಿ ದಿಟ್ಟ ಹೋರಾಟ ಮಾಡಲು ಕನ್ನಡಿಗರು ಸಿದ್ದರಾಗಬೇಕೆಂದು ಅವರು ಅಂಕಣದಲ್ಲಿ ಕರೆನೀಡಿದ್ದಾರೆ.
Home
»
»Unlabelled
» ಮಹಿಷಿ ವರದಿ ಜಾರಿಗಾಗಿ ಹೋರಾಟಕ್ಕೆ ಸಿದ್ದರಾಗಬೇಕು !
Subscribe to:
Post Comments (Atom)
0 comments:
Post a Comment