PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ, ಮಾ.೧೦ (ಕ ವಾ) ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸುಗ್ಗಿ-ಹುಗ್ಗಿ ೨೦೧೬ ಜಾನಪದ ಉತ್ಸವ ಕಾರ್ಯಕ್ರಮವನ್ನು ಮಾ.೧೨ ರಂದು ಜಿಲ್ಲೆಯ ಕುಷ್ಟಗಿಯ ಬನ್ನಿಕಟ್ಟಿ ಮೈದಾನದಲ್ಲಿ  ಸಂಜೆ ೫ ಗಂಟೆಗೆ ಆಯೋಜಿಸಿದೆ.
       ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಶಿವರಾಜ.ಎಸ್.ತಂಗಡಗಿ ಕಾರ್ಯಕ್ರಮ ಉದ್ಘಾಟಿಸುವರು. ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅಧ್ಯಕ್ಷತೆ ವಹಿಸುವರು.  ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ರಾಘವೇಂದ್ರ ಹಿಟ್ನಾಳ್, ವಿಧಾನ ಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಶರಣಪ್ಪ ಮಟ್ಟೂರ, ಅಮರನಾಥ ಪಾಟೀಲ್, ಕುಷ್ಟಗಿ ತಹಶಿಲ್ದಾರ ಎಂ.ವೇದವ್ಯಾಸ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು.ಸಿ. ಮಾನೆ, ಪುರಸಭೆ ಮುಖ್ಯಾಧಿಕಾರಿ ನಬಿಸಾಬ ಖುದಾನವರ್, ಕುಷ್ಟಗಿ ಆರಕ್ಷಕ ವಲಯ ನಿರೀಕ್ಷಕ ಗಿರೀಶ್.ಪಿ.ರೋಡ್‌ಕರ್, ಜಿಲ್ಲಾ ವಾರ್ತಾಧಿಕಾರಿ ಬಿ.ವಿ.ತುಕಾರಾಮರಾವ್, ಕೊಪ್ಪಳ ವಿಶೇಷ ಪೊಲೀಸ ಠಾಣೆ ಸಿ.ಪಿ.ಐ ರುದ್ರೇಶ್.ಎಸ್.ಉಜ್ಜನಕೊಪ್ಪ ಮುಖ್ಯ ಅತಿಥಿಗಾಳಾಗಿ ಭಾವವಹಿಸುವರು. ಹಾಗೂ ಸಿ.ವಿ. ಜಡಿಯವರ ವಿಶೇಷ ಉಪವ್ಯಾಸ ನೀಡುವರು.
     ಸುಗ್ಗಿ-ಹುಗ್ಗಿ ಜಾನಪದ ಉತ್ಸವದ ಅಂಗವಾಗಿ ಅಂದು ವಿವಿಧ ಜಾನಪದ ಕಲಾತಂಡಗಳು ಪ್ರದರ್ಶನ ನೀಡಲಿದ್ದು, ವಿವರ ಇಂತಿದೆ. ಅಂದು ಸಂಜೆ ೫ ಗಂಟೆಗೆ ಕುಷ್ಟಗಿಯ ತಹಶಿಲ್ದಾರ ಕಛೇರಿ ಆವರಣದಿಂದ ಬನ್ನಿಕಟ್ಟಿ ಮೈದಾನದವರೆಗೆ ಜಾನಪದ ಕಲಾತಂಡಗಳು ಸಾಗಿ ಬರಲಿವೆ.  ಮಂಡ್ಯದ ದೇವರಾಜ ಮತ್ತು ತಂಡದಿಂದ ಪೂಜಾ ಕುಣಿತ, ಭಾಗ್ಯನಗರದ ವೀರೇಶ ಮುಂಡಾಸದ ಮತ್ತು ತಂಡದಿಂದ ವೀರಗಾಸೆ, ಕನಕಗಿರಿಯ ಬಸವರಾಜ್ ದಾಲ್‌ಪಟ್ ಮತ್ತು ತಂಡದಿಂದ ಮೋಜಿನ ಗೊಂಬೆಗಳು(ತಾಷಾ ರಂಡೋಲ್), ಕುಷ್ಟಗಿ ತಾಲೂಕಿನ ಶಿವಪ್ಪ ಮತ್ತು ತಂಡದಿಂದ ಡೊಳ್ಳು ಕುಣಿತ, ತಾವರಗೇರಾದ ಶ್ಯಾಮಣ್ಣ ಶಿರವಾಟಿ ಮತ್ತು ತಂಡದಿಂದ ಹಗಲು ವೇಷ, ಹುಬ್ಬಳ್ಳಿಯ ಕಲ್ಲಪ್ಪ.ಮ.ಕುಂಬಾರ ಮತ್ತು ತಂಡದಿಂದ ಜಗ್ಗಲಿಗೆ, ಯಲಬುರ್ಗಾ ತಾ. ರಾಜೂರಿನ ಶಂಕ್ರಪ್ಪ ಭಜಂತ್ರಿ ಮತ್ತು ತಂಡದಿಂದ ಹಲಗೆವಾದನ, ಹಳೇ ದರೋಜಿಯ ತಿಮ್ಮಪ್ಪ ಮತ್ತು ತಂಡದಿಂದ ಹುಲಿ ವೇಷ, ರಾಮಸಾಗರದ ವಸಂತ ಕುಮಾರ ಮತ್ತು ತಂಡದಿಂದ ಕಹಳೆ ವಾದನ, ಹೊಸಪೇಟೆಯ ಯೂಸುಫ್ ಮತ್ತು ತಂಡದಿಂದ ಮರಗಾಲು ಕುಣಿತ ಪ್ರದರ್ಶನಗೊಳ್ಳಲಿದೆ.
     ಸಾಂಸ್ಕೃತಿಕ ಕಾರ್ಯಕ್ರಮಗಳು: ಸಂಜೆ ೫.೩೦ ರಿಂದ ಬನ್ನಿಕಟ್ಟಿ ಮೈದಾದಲ್ಲಿ ಕುಷ್ಟಗಿಯ ಶರಣಪ್ಪ ವಡಿಗೇರಿ ಅವರಿಂದ ತತ್ವಪದಗಳು, ಮರಿಯಮ್ಮನಹಳ್ಳಿಯ ಮಂಜವ್ವ ಜೋಗತಿ ಮತ್ತು ತಂಡದಿಂದ ಜೋಗತಿ ನೃತ್ಯ, ಯಲಬುರ್ಗಾ ತಾ. ಹೈದರ್‌ನಗರದ ಮಂಜುಳಾ ಮತ್ತು ತಂಡದಿಂದ ಲಂಬಾಣಿ ನೃತ್ಯ, ಕುಷ್ಟಗಿಯ ದುರಗಪ್ಪ ಅವರಿಂದ ಜಾನಪದ ಗೀತೆಗಳು, ತಾವರಗೇರಾದ ತಿಪ್ಪಣ್ಣ ಅಂಬಾಜಿ ಸುಗತೇಕರ ರಿಂದ ಗೊಂದಲಿಗರ ಪದ, ಹಾಬಲಕಟ್ಟಿಯ ದಾವಲ್‌ಸಾಬ್ ಅತ್ತಾರ್‌ರಿಂದ ಗೀಗೀ ಪದಗಳು, ಕಾರಟಗಿಯ ರಿಯಾನ ಮತ್ತು ತಂಡದಿಂದ ಜಾನಪದ ನೃತ್ಯ, ಕೊಪ್ಪಳ.ತಾ ಕುಣಿಕೇರಿಯ ಬಸಮ್ಮ ಸೋಂಪುರ ರಿಂದ ಸಂಪ್ರದಾಯ ಪದಗಳು, ಬಸವರಾಜ್.ಬೇವಿನಕಟ್ಟಿ ಅವರಿಂದ ಜಾನಪದ ಗೀತೆಗಳು, ಮೋರನಾಳದ ಭೀಮವ್ವ ಶಿಳ್ಳೆಕ್ಯಾತರ ರಿಂದ ತೊಗಲು ಗೊಂಬೆ ಪ್ರದರ್ಶನ, ಶರಣಪ್ಪ ಬನ್ನಿಗೋಳ್ ಮತ್ತು ತಂಡದಿಂದ ಬಯಲಾಟ ಪ್ರದರ್ಶನಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ತಿಳಿಸಿದ್ದಾರೆ.

Advertisement

0 comments:

Post a Comment

 
Top