ಕೊಪ್ಪಳ, ಮಾ.೧೪ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಮಾ.೧೫ ರಂದು ಬೆಳಿಗ್ಗೆ ೧೦.೩೦ ಕ್ಕೆ ಗಂಗಾವತಿಯ ಹೆಚ್. ಆರ್. ಶ್ರೀರಾಮುಲು ಮಹಾವಿದ್ಯಾಲಯದ ಸರಸ್ವತಿ ಗಿರಿಯಲ್ಲಿ ಜರುಗಲಿದೆ.'ಆಂಟಿಬಯೋಟಿಕ್ಸ್‌ಗಳೇ ಆಹಾರವಾಗದಿರಲಿ' ಎಂಬ ಘೋಷವಾಕ್ಯದೊಂದಿಗೆ ಆರಂಭವಾಗಲಿರುವ ಈ ಕಾರ್ಯಕ್ರಮಕ್ಕೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಏಕತಾ ಹೆಚ್.ಡಿ. ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಕಾರ್ಯಕ್ರಮ ಉದ್ಘಾಟಿಸುವರು, ಮುಖ್ಯ ಅತಿಥಿಯಾಗಿ ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರನ್ ಆರ್, ಅತಿಥಿಯಾಗಿ ತಹಶಿಲ್ದಾರ ಎಲ್.ಡಿ. ಚಂದ್ರಕಾಂತ ಭಾಗವಹಿಸುವರು.ಪ್ರೋ.ಪುಟ್ಟಸ್ವಾಮಿ, ಎಫ್.ಹೆಚ್.ಚಿತ್ರಗಾರ, ಲಲಿತಾ ಬಾವಿಕಟ್ಟಿ ವಿಶೇಷ ಆಹ್ವಾನಿರಾಗಿ ಪಾಲ್ಗೊಳ್ಳುವರು, ನ್ಯಾಯವಾದಿ ಎಸ್.ಬಿ.ರೆಡ್ಡಿ ಗ್ರಾಹಕರ ಹಕ್ಕುಗಳ ಕುರಿತು ಉಪನ್ಯಾಸ ನೀಡುವರು. ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ವೈ.ಹೆಚ್.ಲಂಬು ತಿಳಿಸಿದ್ದಾರೆ.
Subscribe to:
Post Comments (Atom)
0 comments:
Post a Comment