PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಮಾ,೦೬ ಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಮತ್ತು ಗೋವಾದ ಬಿಚ್ಚೋಲಿಯ ಕರ್ಮಭೂಮಿ ಕನ್ನಡ ಸಂಘ ಸಹಯೋಗದಲ್ಲಿ ಗೋವಾದ ಬಿಚ್ಚೋಲಿಯಲ್ಲಿ ಏಪ್ರಿಲ್ ೧೦ರಂದು ನಡೆಯಲಿರುವ ಹೊರನಾಡ ಕನ್ನಡಿಗರ ೮ನೇ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕೊಪ್ಪಳದ ಎಂ ತಾಹೀರ್ ಅಲಿ ಮೈಸೂರು ಅವರನ್ನು  ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಮಾಲಾಗಿದ್ದು ಅವರ ನಿವಾಸ ಮೈಸೂರಿನಲ್ಲಿ ಅವರನ್ನು ಸನ್ಮಾನಿಸಿ ಅಧಿಕೃತ ಆಹ್ವಾನ ನೀಡಲಾಯಿತು. ಎಂದು ಕಾರ್ಯಕ್ರಮ ಸಂಚಾಲಕ ಮಹೇಶ ಬಾಬು ಸುರ್ವೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
  ಅವರ ನಿವಾಸ ಮೈಸೂರಿನ ಭಾರತನಗರದಲ್ಲಿ ಏರ್ಪಡಿಸಿದ ಸನ್ಮಾನ ಮತ್ತು ಆಹ್ವಾನ ನೀಡುವ ಕಾರ್ಯಕ್ರಮದಲ್ಲಿ ಮೈಸೂರಿನ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾರತನಗರದ ನಿವಾಸಿಗಳು ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡು ಸಂಭ್ರಮಿಸಿದರು. ಸಭೆಯಲ್ಲಿ ನಾಗರಿಕರ ವೇದಿಕೆಯ ರಾಜ್ಯಾಧ್ಯಕ್ಷಹಾಗೂ  ಕಾರ್ಯಕತ್ರಮ ಸಂಘಟಕ  ಮಹೇಶಬಾಬು ಸುರ್ವೆ  ಕಿರಯತೆರೆ ನಟ ಮಂಜುನಾಥ ಪಾಂಡವಪುರ, ತಿರುಳ್ಗನ್ನಡ ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎಂ.ಸಾದಿಕ್ ಅಲಿ, ಹಿರಿಯ ಪತ್ರಕರ್ತ ಹರೀಶ್ ಹೆಚ್.ಎಸ್.  ಹನುಮಂತ ಹಳ್ಳಿಕೇರಿ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

 
Top