PLEASE LOGIN TO KANNADANET.COM FOR REGULAR NEWS-UPDATES

ಮೀರ್‍ಪುರ್ ಟಿ-20 ವಿಶ್ವಕಪ್, ವಿಶ್ವಕಪ್, ಏಷ್ಯಾಕಪ್ ಗೆಲ್ಲುವ ಮೂಲಕ ಧೋನಿ ತಾನು ಭಾರತ ತಂಡದ ಶ್ರೇಷ್ಠ ನಾಯಕ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಅಷ್ಟೇ ಅಲ್ಲದೇ ಈ ಪಂದ್ಯದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಮತ್ತೊಮ್ಮೆ ತಾನು ಮ್ಯಾಚ್ ಫಿನಿಶರ್ ಎನ್ನುವುದನ್ನೂ ತೋರಿಸಿಕೊಟ್ಟಿದ್ದಾರೆ. ಆದರೆ ಧೋನಿಯ ಇಂದಿನ ಆಟವನ್ನು ಜನ ಸಾಮಾಜಿಕ ಜಾಲತಾಣಗಳಲ್ಲಿ 2011ರ ಶ್ರೀಲಂಕಾ ವಿರುದ್ಧದ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಅಂದಿನ ಪಂದ್ಯದಲ್ಲಿ ಶ್ರೀಲಂಕಾ 274 ರನ್‍ಗಳಿಸಿದ್ದರೆ, ಭಾರತ 48.2 ಓವರ್‍ಗಳಲ್ಲಿ 277 ರನ್‍ಗಳಿಸುವ ಮೂಲಕ ವಿಶ್ವಕಪ್ ಎತ್ತಿತ್ತು. ಈ ಪಂದ್ಯದಲ್ಲಿ ಧೋನಿ 91 ರನ್(79 ಎಸೆತ, 8 ಬೌಂಡರಿ, 2 ಸಿಕ್ಸರ್) ಬಾರಿಸಿ ಅಜೇಯರಾಗಿ ಉಳಿದಿದ್ದರು. ಅಷ್ಟೇ ಅಲ್ಲದೇ ನುವಾನ್ ಕುಲಶೇಖರ ಎಸೆದ ಎಸೆತವನ್ನು ಸಿಕ್ಸರ್‍ಗೆ ಅಟ್ಟುವ ಮೂಲಕ ಭಾರತಕ್ಕೆ ಜಯವನ್ನು ತಂದುಕೊಟ್ಟಿದ್ದರು.
ಏಷ್ಯಕಪ್ ಫೈನಲ್‍ನಲ್ಲೂ ಧೋನಿ ಕ್ರೀಸ್‍ಗೆ ಬರುವಾಗ ಭಾರತಕ್ಕೆ 20 ಎಸೆತಗಳಲ್ಲಿ 21 ರನ್ ಬೇಕಿತ್ತು. ಕ್ರೀಸ್ ಆಗಮಿಸಿದ ಧೋನಿ ಬಂದವರೇ ಕೇವಲ ಆರು ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್ ಬಾರಿಸಿ 20 ರನ್ ಸಿಡಿಸಿ ಭಾರತಕ್ಕೆ ಜಯವನ್ನು ತಂದುಕೊಟ್ಟರು. ಇನ್ನೂ 7 ಎಸೆತಗಳು ಇರುವಂತೆಯೇ ಅಮಿನ್ ಹುಸೇನ್ ಎಸೆತವನ್ನು ಸಿಕ್ಸರ್‍ಗೆ ಅಟ್ಟುವ ಮೂಲಕ ಮ್ಯಾಚ್ ಫಿನಿಶರ್ ಆಗಿ ಮತ್ತೊಮ್ಮೆ  ಹೊರಹೊಮ್ಮಿದ್ದಾರೆ. ಅಭಿಮಾನಿಗಳು ಫುಲ್ ಹ್ಯಾಪಿ: ಫೈನಲ್ ಪಂದ್ಯಕ್ಕೂ ಮುನ್ನ ಬಾಂಗ್ಲಾದ ಅಭಿಮಾನಿಯೊಬ್ಬ ವೇಗದ ಬೌಲರ್ ತಸ್ಕಿನ್ ಅಹ್ಮದ್ ಧೋನಿ ತಲೆಯನ್ನು ಹಿಡಿದಿರುವ ದೃಶ್ಯವಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ. ಇದು ಭಾರತದ ಅಭಿಮಾನಿಗಳಿಗೆ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಭಾರತದ ಅಭಿಮಾನಿಗಳು ಧೋನಿ ಕೈಯಲ್ಲಿ ತಸ್ಕಿನ್ ಅಹ್ಮದ್ ತಲೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡಿ ಸೇಡು ತೀರಿಸಿಕೊಂಡಿದ್ದಾರೆ.

Advertisement

0 comments:

Post a Comment

 
Top