PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಮಾ.೮ ಮನುಷ್ಯ ಜನ್ಮ ಅತ್ಯಂತ ದೊಡ್ಡ ಜನ್ಮ, ಇದನ್ನು ಹಾಳು ಮಾಡಿಕೊಳ್ಳದೆ ಸದಾಚಾರಗಳಿಗೆ ಬಳಕೆ ಮಾಡಿಕೊಳ್ಳುವ ಮೂಲಕ ಒಳ್ಳೆಯ ಬದುಕು ಸಾಗಿಸಿ ಎಂದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ಕಿನ್ನಾಳ ರಸ್ತೆಯಲ್ಲಿರುವ ಶ್ರೀ ಶಿವಶರಣೇ ಹೇಮರಡ್ಡಿ  ಮಲ್ಲಮ್ಮ ದೇವಸ್ಥಾನದಲ್ಲಿ  ಮಹಾಶಿವರಾತ್ರಿ ನಿಮಿತ್ತ ಹಮ್ಮಿಕೊಂಡಿದ್ದ  ಸವಿಜೇನು ಸಂಗೀತ ಹಾಗು ಹಾಸ್ಯ ಕಾರ್ಯಕ್ರಮದಲ್ಲಿ  ಸಾನಿಧ್ಯ ವಹಿಸಿ ಮಾತನಾಡಿದರು.
 ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವ್ಯಕ್ತಿಯೋರ್ವ ಕೊನೆಯದಾಗಿ ಶ್ರೀಗಳನ್ನು ಭೇಟಿಯಾದ. ಶ್ರೀಗಳು ಪತ್ರವಳಿ ಎಲೆಯನ್ನು ಹೆಣೆಯುತ್ತಿದ್ದರು. ಅವರ ಮುಂದೆ  ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದಾಗ ಶ್ರೀಗಳು ಆಯ್ತು, ಮೊದಲು ಹೆಣೆದಿರುವ ಈ ಪತ್ರವಳಿಯನ್ನು  ತಿಪ್ಪೆಗೆ ಬೀಸಾಕಿ ಬಾ ಎಂದರು. ತಕ್ಷಣ ಆ ವ್ಯಕ್ತಿ ಏನ್ ಸ್ವಾಮಿಜಿಗಳೇ ನೀವು, ಹೆಣದಿರುವ ಪತ್ರವಳಿಯನ್ನು ತಿಪ್ಪಗೆ ಬೀಸಾಕಿ ಎನ್ನುತ್ತಿದ್ದಿರಿ, ಇದರಲ್ಲಿ ಯಾರಾದರೂ ಪ್ರಸಾದ ಸ್ವೀಕಾರ ಮಾಡುತ್ತಾರೆ ಎಂದ. ಆಗ ಶ್ರೀಗಳು ನಾನು ಹೆಣದಿರುವ ಪತ್ರವಳಿ ಹಾಳು ಮಾಡುವುದಕ್ಕೆ ನಿನಗೆ ಇಷ್ಟವಿಲ್ಲ, ದೇವರು ಸೃಷ್ಟಿ ಮಾಡಿದ ನಿನ್ನ ಜೀವವನ್ನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು. ಆಗ ಆ ವ್ಯಕ್ತಿಗೆ eನೋದಯವಾಗಿ ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಹಿಂದೆ ಸರಿದ.
ಮನುಷ್ಯ ಜನ್ಮ ಇದು ಅತ್ಯಂತ ದೊಡ್ಡ ಜನ್ಮವಾಗಿದೆ. ಇಂಥ ಜನ್ಮವನ್ನು ಹಾಳು ಮಾಡಿಕೊಳ್ಳದೆ ಒಳ್ಳೆಯ ಕಾರ್ಯಕ್ಕೆ ಸದ್ವಿನಿಯೋಗ ಮಾಡಿಕೊಳ್ಳಬೇಕು. ಕಷ್ಟಗಳು ಎಲ್ಲರ ಬದುಕಿನಲ್ಲಿ  ಬರುತ್ತವೆ. ಅದನ್ನು ಎದುರಿಸಬೇಕು ಇಲ್ಲದಿದ್ದರೇ ಅದರಿಂದ ದೂರ ಸರಿದು ನಿಲ್ಲಬೇಕು. ಆಗ ತಮ್ಮಿಂದ ತಾವೆ ಅವು ಪರಿಹಾರವಾಗುತ್ತವೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಸರಿಯಲ್ಲ ಎಂದರು.
ನಾನು ಗವಿಮಠದ ಕಾರ್ಯಕ್ರಮದಲ್ಲಿ   ನಿಂತು ಮಾತನಾಡಿದಂತೆ ಭಾಷವಾಗುತ್ತದೆ. ಅಷ್ಟೊಂದು ಅದ್ಭುತ ಕಾರ್ಯಕ್ರಮವನ್ನು ಮಹಾಶಿವರಾತ್ರಿಯ ನಿಮಿತ್ತ   ಶ್ರೀ ಶಿವಶರಣೇ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಗುಡ್ಡದಲ್ಲಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಇದಕ್ಕೂ ಮೊದಲು ಸಂಸದ ಸಂಗಣ್ಣ  ಕರಡಿ ಅವರು ಮಾತನಾಡಿ, ಇಂಥದ್ದೊಂದು ಸ್ಥಳವನ್ನು ಗುರುತಿಸಿದ ಹೆಬ್ಬಾಳ ಶಿವಪ್ಪ ಅವರ ದೂರದೃಷ್ಠಿಗೆ ಸಾಕ್ಷಿಯಾಗಿದೆ. ಇನ್ನು ಈ ಗುಡ್ಡ ರಡ್ಡಿ ಸಮುದಾಯದ ಕೈಗೆ ಸಿಕ್ಕು ಡೈಮಾಂಡ್ ಆಗಿದೆ ಎಂದರು.
ಜನಮನಸೂರೆ ಃ- ನಾಗರಾಜ ಶ್ಯಾವಿ ಅವರ ಬಾನ್ಸುರಿ ವಾದನಕ್ಕೆ  ಸೇರಿದ್ದ ಸಹಸ್ರಾರು ಜನರು ತಲೆದೂಗಿದರು. ಅವರು ಅದನ್ನು ನಾನಾ ನಾದದಲ್ಲಿ  ಬಾರಿಸುವ ಮೂಲಕ ಸೇರಿದ್ದ ಜನಸ್ತೋಮದ ಮನಗೆದ್ದರು. ಇದಾದ ನಂತರ  ಪ್ರಕಾಶ ಜೈನ್ ಅವರ ಸುಗಮ ಸಂಗೀತ ಜನಮನಸೂರೆಗೊಂಡಿತು. ಮಧ್ಯೆ ರಾತ್ರಿ  ೧೨ ಗಂಟೆಯಾಗಿದ್ದರೂ ಪ್ರಕಾಶ ಜೈನ್ ಅವರನ್ನು ಮತ್ತೆ ಮತ್ತೆ ಹಾಡಿ ಎಂದು ಒತ್ತಾಯ ಮಾಡುತ್ತಲೇ ಇದ್ದದ್ದು  ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಗಿತ್ತು.
ಮಿರ್ಚಿ - ವಗ್ಗರಣೆ ಃ ಮಹಾಶಿವರಾತ್ರಿ ವಿಶೇಷ ಎನ್ನುವಂತೆ ಮಂಡಾಳು ವಗ್ಗರಣೆ ಮತ್ತು ಮಿರ್ಚಿಯನ್ನು ಸವಿದ ಭಕ್ತರು ಅಬ್ಬಾ ಏನ್ ರುಚಿ ಎಂದು ಬಣ್ಣಿಸಿದರು. ನಿರೀಕ್ಷೆಗೂ ಮೀರಿ ಜನ ಸೇರಿದ್ದರಿಂದ ಸಾಲುಗಟ್ಟಿ ನಿಂತು ವಗ್ಗರಣೆ ಮಿರ್ಚಿಯನ್ನು ತಿಂದಿದ್ದು ವಿಶೇಷವಾಗಿತ್ತು.

Advertisement

0 comments:

Post a Comment

 
Top