PLEASE LOGIN TO KANNADANET.COM FOR REGULAR NEWS-UPDATES

ಕೂಕನೂರ-11- ಯಲಬುರ್ಗಾ ತಾಲೂಕಿನ ವೀರಾಪೂರ ಗ್ರಾಮದ ಶ್ರೀಶಿವಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕೊಪ್ಪಳ ಜಿಲ್ಲಾ ಅಂಧತ್ವ ನಿಯಂತ್ರಣ ಸಂಘ, ವಿನಾಯಕ ನೇತ್ರ ಸೇವಾ ಸಂಸ್ಥೆ ಕೊಪ್ಪಳ, ನೇತ್ರ ತಜ್ಞೆ ಡಾ.ವರ್ಷಾ ಅಶೋಕ ಬಂಗಾರ ಶೆಟ್ಟರ್ ಅವರ ಅಶೋಕ ಮಲ್ಟಿ ಸೋಪರ್ ಸ್ಪೇಷಾಲಿಟಿ ಆಸ್ಪತ್ರೆ ಹುಬ್ಬಳ್ಳಿ, ವೀರಾಪೂರ ಗ್ರಾಮದ ಶ್ರೀಶಿವಬಸವೇಶ್ವರ ದೇವಸ್ಥಾನ ಸೇವಾ ಸಮಿತಿ ಹಾಗೂ ವಿನಾಯಕ ಆಪ್ಟಿಕಲ್ಸ್ ಕುಷ್ಟಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಮಾ. ೧೩ ಭಾನುವಾರ ದಿವಸ ತಾಲೂಕಿನ ವೀರಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ.  ಆರ್ಥಿಕವಾಗಿ ಹಿಂದುಳಿದ ಕಡು ಬಡವರಿಗಾಗಿ ಈ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ ಕಾರಣ ಸಾರ್ವಜನಿಕರು ಇದರ ಸದುಪಯೋಗಪಡೆದುಕೋಳ್ಳಬೇಕು. ಬೆಳಗ್ಗೆ ೮ ರಿಂದ ಮಧ್ಯಾಹ್ನ ೩ ಗಂಟೆವರೆಗೂ ಹೆಸರುಗಳನ್ನು ನೊಂದಾಯಿಸಿಕೋಳ್ಳಲಾಗುವುದು. ಕಣ್ಣಿಗೆ ಪೊರೆ ಹೊಂದಿ ಶಸ್ತ್ರ ಚಿಕಿತ್ಸೆಗೆ ಆಯ್ಕೆದವರನ್ನು ಮಾ.೧೩ ರಂದು ರಾತ್ರಿ ೮ ಗಂಟೆಗೆ ಹುಬ್ಬಳ್ಳಿಯ ಅಶೋಕ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗುವುದು.  ರಾಷ್ಟ್ರೀಯ ಸ್ವಾಸ್ಥ ಭೀಮಾ ಯೋಜನೆ ಹಾಗೂ ಸಹಕಾರ ಇಲಾಖೆಯಿಂದ ಪಡೆದ ಯಶಸ್ವಿನಿ ಫಲಾನುಭವಿಗಳಿಗೆ ವಿಶೇಷ ಶಸ್ತ್ರ ಚಿಕಿತ್ಸೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿನಾಯಕ ನೇತ್ರ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಪಲ್ಲೇದ (೯೮೪೫೦೩೪೯೧೭), ಕಾರ್ಯದರ್ಶಿ ಪ್ರಭು ಜ್ಯಾಗೀರದಾರ (೯೬೬೩೬೯೭೮೪೮)  ಇವರನ್ನು ಸಂರ್ಪಕಿಸಲು ಕೋರಲಾಗಿದೆ.

Advertisement

 
Top