ಗಲ್ಲು ಶಿಕ್ಷೆಯ ಕುಣಿಕೆಯಿಂದ
ಅಮಾಯಕನೋರ್ವ ಪಾರಾಗಿಬಂದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳ
ಜಿಲ್ಲೆಯ ಗಂಗಾವತಿಯ ಶ್ಯಾಮರಾವ್ ನೇ ಆ ಅದೃಷ್ಟವಂತ. ಹೆಸರು, ಮುಖಚರ್ಯೆ,ತಂದೆಯ ಹೆಸರು, ದೇಹದ ರಚನೆ,
ಬರವಣಿಗೆ, ತಿಳಿದಿರುವ ಭಾಷೆ ಹೋಲುತ್ತಿದ್ದರಿಂದ ಹಿಮಾಚಲ
ಪ್ರದೇಶದ ಪ್ರಥಮ ದರ್ಜೆ ಕೋರ್ಟ ವಿಧಿಸಿದ್ದ ಗಲ್ಲು ಕುಣಿಕೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.
ಗಂಗಾವತಿಯ ವಿದ್ಯಾನಗರದ ಶ್ಯಾಮಲರಾವ್ ಮೂಲತಃ ಆಂದ್ರಪ್ರದೇಶ ದ ಪೂರ್ವಗೋದಾವರಿ ಪ್ರದೇಶದವರು ಡಿಪ್ಲೋ ಅನಿಮೇಷನ್,
ಸಿವಿಲ್ ಎಂಜಿಯನಿಯರಿಂದ ವ್ಯಾಸಾಂಗ ಮಾಡಿ 10 ವರ್ಷ ತೆಲಗು
ಇಂಡಸ್ಟ್ರೀಯಲ್ಲಿ ಅನಿಮೇಷನ್ ಕಲಾವಿದರಾಗಿ ಕೆಲಸ ಮಾಡಿದ್ದರು. ಗಂಗಾವತಿಯ
ಸಂಬಂಧಿಕೊಬ್ಬರನ್ನು ಮದುವೆ ಮಾಡಿಕೊಂಡು ಇಲ್ಲಿಯೇ ನೆಲಸಿದ್ದಾರೆ. ಅವರ ದೇಹದ ಎತ್ತರ ಮತ್ತು ಕೂದಲು ಮರುಜನ್ಮ
ನೀಡಿವೆ. ಹಿಮಾಚಲ ಪ್ರದೇಶದ ಶಿಮ್ಲಾ ಜಿಲ್ಲೆಯ ಸದರ್ ಪೊಲಿಸ್ ಠಾಣೆಯಲ್ಲಿ
2001ರ ನವಂಬರ್ 15ರಂದಯ ಸೂದ್ ದಂಪತಿಯ ಕೊಲೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಕೊಲೆ ಆರೋಪಿಗೆ ಅಲ್ಲಿನ ಪ್ರಥಮ ದರ್ಜೆ ಕೋರ್ಟ 2004 ಮೇ 17ರಂದು
ಗಲ್ಲು ಶಿಕ್ಷೆ ವಿದಿಸಿತ್ತು. ನಂತರ ಆರೋಪಿಯನ್ನು ಸೆಂಟ್ರಲ್ ಜೈಲಿನಲ್ಲಿ
ಇರಿಸಲಾಗಿತ್ತು. ಆರೋಪಿ 2004 ಅಗಷ್ಟ್
16ರಂದು ಜೈಲಿನಿಂದ ಪರಾರಿಯಾಗಿದ್ದ. ಕಳೆದ 12 ವರ್ಷದಿಂದ
ನಾಪತ್ತೆಯಾದ ಆರೋಪಿಗಾಗಿ ಶಿಮ್ಲಾ ಠಾಣೆಯ ಪೊಲೀಸರು ಸೈಬರ್ ಕ್ರೈಂ ವಿಭಾಗದವರು ನಾನಾ ಕಡೆದ ಶೋಧ ನಡೆಸಿದ್ದರು.
ಇದೇ ವೇಳೆ ಆರೋಪಿಯನ್ನೇ ಹೋಲುತ್ತಿದ್ದ ಗಂಗಾವತಿ ವಿದ್ಯಾನಗರದ ಶ್ಯಾಮಲರಾವ್ ರನ್ನು
ಫೇಸ್ ಬುಕ್ ನಲ್ಲಿ ಪತ್ತೆ ಹಚ್ಚಿದ್ದರು. ಪೇಸ್ ಬುಕ್ ನ ಭಾವಚಿತ್ರ ಮತ್ತು
ಮೊಬೈಲ್ ನಂಬರ್ ನಿಂದ ಶೋಧಕಾರ್ಯ ಆರಂಭಿಸಿದ ಪೊಲೀಸರಿಗೆ ಲೊಕೇಷನ್ ಗಂಗಾವತಿ ತೋರಿಸಿದೆ.
ಅದನ್ನು ಆದರಿಸಿ ಗಂಗಾವತಿ ಪೊಲೀಸರ ಸಹಾಯದಿಂದ ಶ್ಯಾಮಲರಾವ್ ರನ್ನು ಬಂಧಿಸಿದ್ದರು.
2016 ಮಾ 6 ರಂದು ಶಿಮ್ಲಾಕ್ಕೆ ಕರೆದೊಯ್ದು ತೀವ್ರವಾದ
ವಿಚಾರಣೆ ನಡೆಸಿದ್ದರು. ದಂಪತಿ ಕೊಲೆಯ ಆರೋಪಿಯ ಹೆಸರ, ತಂದೆಯ ಹೆಸರು, ಅವರಿಬ್ಬರ ನಡುವಿನ ಹೋಲಿಗೆಗಳು , ತಿಳಿದಿರುವ ಭಾಷೆ ಎಲ್ಲವೂ ಸೇರಿ ಅನುಮಾನ ಮೂಡಿಸಿದ್ದವು. ಗಂಗಾವತಿಯ
ಶ್ಯಾಮಲರಾವ್ ತಂದೆ ಗಾಯ್ಡು ಆಂದ್ರಪ್ರದೇಶದ ಪೂರ್ವ ಗೋದಾವರಿಯವರು .ಆದರೆ
ಆರೋಪಿ ಶ್ಯಾಮಲರೆಡ್ಡಿ ಪಶ್ಚಿಮ ಗೋದಾವರಿ ಪ್ರದೇಶದವರು. ಆದರೆ ದೇಹದ ಸಮಗ್ರ
ತಪಾಸಣೆ ಬಳಿಕ ಅವರಿಬ್ಬರ ಕೂದಲಿನ ಮಾದರಿ ಹಾಗೂ ದೇಹದಲ್ಲಿ ಯ ಎತ್ತರದ ವ್ಯತ್ಯಾಸ ಕಂಡು ಬಂದಿದೆ.
ಆರೋಪಿ 5.5.ಅಡಿ ಎತ್ತರವಿದ್ದರೆ ಅಮಾಯಕ ಶ್ಯಾಮರಾವ್
5.3 ಅಡಿ ಎತ್ತರವಿದ್ದಾನೆ ಈ ಹಿನ್ನೆಲೆಯಲ್ಲಿ ಗಂಗಾವತಿಯ ಶ್ಯಾಮಲರಾವ್ ನಿರಪರಾಧಿ
ಎಂದು ಸಾಭಿತಾಗಿದ್ದರಿಂದ ಮಾರ್ಚ 17ರಂದು ಗಂಗಾವತಿ ಠಾಣೆಗೆ ಅವರನ್ನು ಒಪ್ಪಿಸಿದ್ಧಾರೆ.
Home
»
koppal district information
»
Koppal News
»
Koppal News news
»
koppal organisations
» ಗಲ್ಲು ಶಿಕ್ಷೆಯ ಕುಣಿಕೆಯಿಂದ ಅಮಾಯಕನೋರ್ವ ಪಾರಾಗಿ ಬಂದ !!!
Subscribe to:
Post Comments (Atom)
0 comments:
Post a Comment