PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಮಾ. ೦೫ (ಕ ವಾ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಗಿರಿಜನ ಉಪಯೋಜನೆಯಡಿ 'ಗಿರಿಜನ ಉತ್ಸವ-೨೦೧೬' ಸಾಂಸ್ಕೃತಿಕ ಕಾರ್ಯಕ್ರಮ ಮಾ. ೦೮ ರಂದು ಸಂಜೆ ೦೫ ಗಂಟೆಗೆ ತಾಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿದೆ.
     ಜಿಲ್ಲಾ ಉಸ್ತುವಾರಿ ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ ಎಸ್ ತಂಗಡಗಿ ಉದ್ಘಾಟನೆ ನೆರವೇರಿಸುವರು.  ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಸಮಾರಂಭದ ಅಧ್ಯಕ್ಷತೆ ವಹಿಸುವರು.  ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನಪರಿಷತ್ ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಅಮರನಾಥ ಪಾಟೀಲ, ಶರಣಪ್ಪ ಮಟ್ಟೂರ, ಹುಲಿಗಿ ಗ್ರಾ.ಪಂ. ಅಧ್ಯಕ್ಷೆ ರೇಣುಕಾ ರಾಮಣ್ಣ, ಉಪಾಧ್ಯಕ್ಷ ದುರಗಪ್ಪ ಬೋವಿ, ಜಿ.ಪಂ. ಸದಸ್ಯೆ ಗಾಯತ್ರಿ ವೆಂಕಟೇಶ್, ತಾ.ಪಂ. ಸದಸ್ಯ ಜಿ. ಪಾಲಾಕ್ಷಪ್ಪ, ತಹಸಿಲ್ದಾರ್ ಪುಟ್ಟರಾಮಯ್ಯ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಮೂರ್ತಿ, ಡಿವೈಎಸ್‌ಪಿ ಶ್ರೀಕಾಂತ್ ಕಟ್ಟಿಮನಿ, ವಿಶೇಷ ಪೊಲೀಸ್ ಠಾಣೆ ಸಿಪಿಐ ರುದ್ರೇಶ್ ಎಸ್ ಉಜ್ಜನಕೊಪ್ಪ, ಹುಲಿಗೆಮ್ಮ ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
     ಗಿರಿಜನ ಉತ್ಸವದ ಅಂಗವಾಗಿ ಅಂದು ಸಂಜೆ ೫-೩೦ ಗಂಟೆಗೆ ಕಂಪ್ಲಿಯ ಶಂಕ್ರಪ್ಪ ಮತ್ತು ತಂಡದಿಂದ ತಾಷಾ ರಂಡೋಲ್, ಜಾನಕಿ ಮತ್ತು ತಂಡದಿಂದ ಹಕ್ಕಿ-ಪಿಕ್ಕಿ ನೃತ್ಯ.  ತರ್‍ಲಕಟ್ಟಿಯ ಶ್ರೀಕಾಂತ ಮಾಲಿಪಾಟೀಲ್‌ರಿಂದ ಗೀಗೀ ಪದಗಳು.  ಕಾರಟಗಿಯ ಪ್ರಿಯಾಂಕ ಬೂದಿ ಮತ್ತು ತಂಡದಿಂದ ಸಮೂಹ ನೃತ್ಯ.  ಕುಷ್ಟಗಿಯ ವಾಲ್ಮೀಕಿ ಯಕ್ಕರನಾಳರಿಂದ ಜಾನಪದ ಗೀತೆಗಳು.  ಯರೇಹಂಚಿನಾಳದ ಹನುಮಂತ ನರೇಗಲ್‌ರಿಂದ ಹಿಂದೂಸ್ತಾನಿ ಗಾಯನ.  ವಜ್ರಬಂಡಿ ಮಾನಪ್ಪ ಅವರಿಂದ ರಂಗ ಗೀತೆಗಳು.  ಬಸವಣ್ಣ ಕ್ಯಾಂಪ್‌ನ ನಾಗಮ್ಮ ಮತ್ತು ತಂಡದಿಂದ ನೃತ್ಯ ಪ್ರದರ್ಶನ.  ಕುಷ್ಟಗಿ ರಾಮಣ್ಣ ತೆಗ್ಗಿಹಾಳರಿಂದ ಚೌಡ್ಕಿ ಪದಗಳು.  ಹುಲಿಗಿಯ ಶೃತಿ ಹ್ಯಾಟಿ ಅವರಿಂದ ಸುಗಮ ಸಂಗೀತ.  ಭಾಗ್ಯನಗರದ ನಾಗರಾಜ ಶ್ಯಾವಿ ರಿಂದ ಕೊಳಲು ವಾದನ.  ಹನುಮಸಾಗರದ ಗ್ಯಾನಪ್ಪ ತಳವಾರ್‌ರಿಂದ ಭಾವಗೀತೆಗಳು.  ನವಲಿಯ ಗೋಪಾಲ ನಾಯಕ್‌ರಿಂದ ಭಜನಾ ಪದಗಳು.  ಕುಣಿಕೇರಿಯ ಮುದಕಪ್ಪ ತಂಡದಿಂದ ಬಯಲಾಟ ದೃಶ್ಯಾವಳಿ.  ಕೇಸರಹಟ್ಟಿಯ ಸಂಗೀತ ಅವರಿಂದ ವಚನ ಗಾಯನ.  ಹಾಗೂ ಹುಲಗಿಯ ಟಿ. ಸುಭಾಶ್ಚಂದ್ರ ತಂಡದಿಂದ 'ವೀರ ಎಚ್ಚಮ ನಾಯಕ' ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ತಿಳಿಸಿದ್ದಾರೆ.
ಮಹಿಳಾ ದಿನಾಚರಣೆ : ಮಾ. ೮ ರಂದು ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ.
ಕೊಪ್ಪಳ ಮಾ. ೦೫ (ಕ ವಾ) ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮ ಮಾ. ೦೮ ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾ ನ್ಯಾಯಾಲಯ ಆವರಣದ ಸಾಕ್ಷಿದಾರ ಮೊಗಸಾಲೆಯಲ್ಲಿ ನಡೆಯಲಿದೆ.
     ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ. ನಾಗರತ್ನ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸುವರು.  ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ. ಪಾನಘಂಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.  ಹಿರಿಯ ಸಿವಿಲ್ ನ್ಯಾಯಾಧೀಶ ಬಿ. ದಶರಥ, ಕಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಶಿವರಾಯ ಉಂಡೋಡಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯೆ ಸಂಧ್ಯಾ ಬಿ. ಮಾದಿನೂರ, ಜಿಲ್ಲಾ ಸರ್ಕಾರಿ ವಕೀಲ ಆಸೀಫ್ ಅಲಿ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಯು.ಎ. ಮಾಳೆಕೊಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.  ಕಾರ್ಯಕ್ರಮದ ಅಂಗವಾಗಿ ವಕೀಲ ವಿ.ಎಂ. ಭೂಸನೂರಮಠ ಅವರಿಂದ ಹಿಂದು ಮಹಿಳಾ ಆಸ್ತಿ ಹಕ್ಕು ಕುರಿತು.  ವಿಜಯಲಕ್ಷ್ಮಿ ಕೋಟಗಿ ಅವರಿಂದ ಮಹಿಳೆ ದೌರ್ಜನ್ಯ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ.

Advertisement

0 comments:

Post a Comment

 
Top