ಜಿಲ್ಲೆಯಲ್ಲಿ ಇದೀಗ ತಾನೆ ಚಳಿಗಾಲ ಮುಗಿದು, ಬಿಸಿಲಿನ ತಾಪ ಹೆಚ್ಚುತ್ತಿದೆ. ಸದ್ಯ ರಾಜ್ಯಾದ್ಯಂತ ಜಿಲ್ಲಾ ಪಂಚಾಯತ್ ಹಾಗೂ ತಾಲೂಕಾ ಪಂಚಾಯತ್ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿರುವುದರಿಂದ, ಗ್ರಾಮೀಣ ಜನರಲ್ಲಿ ಬಿಸಿಲಿನ ಬೇಗೆಯ ಜೊತೆಗೆ ಚುನಾವಣೆಯ ಕಾವು ಸಹ ಏರತೊಡಗಿದೆ. ಗ್ರಾಮೀಣ ಜನರು ತಮ್ಮ ನೆಚ್ಚಿನ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಂತಹ ಸುಸಂದರ್ಭ ಮತ್ತೊಮ್ಮೆ ಒದಗಿಬಂದಿದೆ. ಇಂತಹಸಂದರ್ಭದಲ್ಲಿ ಕಳೆದ ೨೦೧೦-೧೧ ರಲ್ಲಿ ನಡೆದ ಜಿಲ್ಲಾ ಪಂಚಾಯತ್ ಚುನಾವಣೆಯ ಆಗು ಹೋಗುಗಳ ಕಡೆ ಒಮ್ಮೆ ಗಮನ ಹರಿಸಿದಾಗ ನಿಜಕ್ಕೂ ರೋಚಕ ಅನುಭವ ನೀಡುತ್ತದೆ.
ಕಳೆದ ೨೦೧೦ ರ ಡಿಸೆಂಬರ್ ೩೧ ರಂದು ಜಿಲ್ಲಾ ಪಂಚಾಯತ್‌ಗೆ ನಡೆದ ಚುನಾವಣೆ ಸಂದರ್ಭದಲ್ಲಿ ಎಷ್ಟು ಜನ ಅಭ್ಯರ್ಥಿಗಳು ಕದನ ಕಣದಲ್ಲಿದ್ದರು, ೨೦೧೧ ರ ಜ. ೦೪ ರಂದು ನಡೆದ ಮತ ಎಣಿಕೆಯ ನಂತರ ಯಾರು ವಿಜಯಮಾಲೆ ಧರಿಸಿದರು, ಅಲ್ಪ ಮತಗಳ ಅಂತರದಲ್ಲಿ ಸೋಲು ಅನುಭವಿಸಿದ ಅಭ್ಯರ್ಥಿಗಳು ಯಾರು ಎಂಬುದನ್ನು ಜನತೆ ಈಗಾಗಲೆ ಮರೆಯುವ ಹಂತ ತಲುಪಿದ್ದಾರೆ. ಜಿ.ಪಂ. ಸದಸ್ಯರಾಗಿ ಆಯ್ಕೆಯಾಗಿದ್ದಂತಹ ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಎಷ್ಟೆಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ, ಯಾರು ವಿಫಲವಾಗಿದ್ದಾರೆ ಎಂಬುದು ಆಯಾ ಕ್ಷೇತ್ರದ ಜನತೆಯ ಗಮನಕ್ಕೆ ಬಂದಿರಬಹುದಾಗಿದೆ.
ಕಳೆದ ೨೦೧೦ ರಲ್ಲಿ ಜಿ.ಪಂ. ಹಾಗೂ ತಾ.ಪಂ. ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ೩೬೮೩೦೪ ಪುರುಷ ಹಾಗೂ ೩೬೪೧೩೩ ಮಹಿಳಾ ಮತದಾರರು ಸೇರಿದಂತೆ ೭೩೨೪೩೭ ಮತದಾರರಿದ್ದರು. ಕೊಪ್ಪಳ ಜಿಲ್ಲಾ ಪಂಚಾಯತಿಯ ಒಟ್ಟು ೨೭ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಒಟ್ಟು ಶೇ. ೬೬. ೨೮ ರಷ್ಟು ಮತದಾನವಾಗಿತ್ತು. ಕೊಪ್ಪಳ ತಾಲೂಕಿನಲ್ಲಿ ಅತಿ ಹೆಚ್ಚು ಶೇ. ೬೯. ೫೩, ಯಲಬುರ್ಗಾ- ಶೇ. ೬೪. ೭೫, ಗಂಗಾವತಿ- ೬೬. ೬೦ ಹಾಗೂ ಕುಷ್ಟಗಿ ತಾಲೂಕಿನಲ್ಲಿ ಕಡಿಮೆ ಶೇ. ೬೩. ೫೪ ರಷ್ಟು ಮತದಾನವಾಗಿತ್ತು.
ಕೊಪ್ಪಳ ಜಿಲ್ಲಾ ಪಂಚಾಯತಿಗೆ ನಡೆದ ಚುನಾವಣೆಯಲ್ಲಿ ಗೆದ್ದಂತಹ ಹಾಗೂ ಸಮೀಪದ ಸೋಲು ಅನುಭವಿಸಿದ ಅಭ್ಯರ್ಥಿಗಳ ವಿವರ ಮತ್ತು ಅವರು ಪಡೆದಂತಹ ಮತಗಳ ಸಂಖ್ಯೆಯ ವಿವರ ಈ ಕೆಳಗಿನಂತಿದೆ. ಅಭ್ಯರ್ಥಿಗಳು ಪಡೆದ ಒಟ್ಟು ಮತಗಳನ್ನು ಆವರಣದಲ್ಲಿ ನಮೂದಿಸಲಾಗಿದೆ.
ಕೊಪ್ಪಳ ತಾಲೂಕು ವ್ಯಾಪ್ತಿಯಲ್ಲಿ ಬರುವ ಅಳವಂಡಿ ಕ್ಷೇತ್ರದ ಸದಸ್ಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಒಟ್ಟು ೦೬ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆ ಪೈಕಿ ಜೆಡಿಎಸ್ ಅಭ್ಯರ್ಥಿ ನಾಗನಗೌಡ ಪಾಟೀಲ್ ಅವರು (೭೬೦೫), ಕಾಂಗ್ರೆಸ್ ಅಭ್ಯರ್ಥಿ ಬೋಚನಹಳ್ಳಿ ಬಂಡಿ ಸಣ್ಣ ಭೀಮಪ್ಪ ಹನಮಪ್ಪ (೬೩೯೩) ಅವರಿಗಿಂತ ೧೨೧೨ ಅಧಿಕ ಮತಗಳಿಸಿ ಗೆಲುವು ಸಾದಿಸಿದರು. ಹಿರೇಸಿಂದೋಗಿ ಕ್ಷೇತ್ರದ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಒಟ್ಟು ೦೫ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆ ಪೈಕಿ ಜೆಡಿಎಸ್ ಅಭ್ಯರ್ಥಿ ಭಾಗೀರಥಿ ಶಂಕರಗೌಡ ಪಾಟೀಲ್ (೫೮೭೫) ಅವರು ಸಮೀಪದ ಸ್ಪರ್ಧಿ ಕಾಂಗ್ರೆಸ್ ಪಕ್ಷದ ಹೇಮಾವತಿ ಹಿರೇಗೌಡ್ರ (೫೩೧೨) ಅವರಿಗಿಂತ ೫೬೩ ಹೆಚ್ಚು ಮತಗಳನ್ನು ಪಡೆದು ವಿಜೇತರಾದರು. ಲೇಬಗೇರಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು ೦೫ ಅಭ್ಯರ್ಥಿಗಳು ಆಯ್ಕೆ ಬಯಸಿ ಸ್ಪರ್ಧೆಯಲ್ಲಿದ್ದರು. ಆ ಪೈಕಿ ಜೆಡಿಎಸ್ ಅಭ್ಯರ್ಥಿ ವನಿತಾ ಗಡಾದ ಅವರು(೭೬೭೪) ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಓಜನಹಳ್ಳಿ (೭೩೯೬) ಅವರನ್ನು ೨೭೮ ಮತಗಳ ಅಂತರದಿಂದ ಸೋಲಿಸಿದರು. ಇರಕಲ್ಲಗಡಾ ಕ್ಷೇತ್ರದ ಸದಸ್ಯ ಸ್ಥಾನಕ್ಕಾಗಿ ಒಟ್ಟು ೦೪ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವರಲ್ಲಿ ಕಾಂಗ್ರೆಸ್ ಅಭ್ಯರ್ಥಿ ನೇತ್ರಾವತಿ ಗುಮಗೇರಿ ಅವರು ಗಳಿಸಿದ್ದು ೮೪೨೬ ಮತಗಳಾದರೆ, ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಶರಣವ್ವ ಕುದ್ರಿಮೋತಿ ೫೨೯೫ ಮತಗಳನ್ನು ಪಡೆದರು, ಗೆಲುವಿನ ಅಂತರ ೩೧೩೧ ಮತಗಳು. ಕುತೂಹಲ ಮೂಡಿಸಿದ್ದ ಬಂಡಿಹರ್ಲಾಪುರ ಕ್ಷೇತ್ರದ ಚುನಾವಣೆಯಲ್ಲಿ ೦೭ ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದರು. ಜಿದ್ದಾಜಿದ್ದಿನಿಂದ ಕೂಡಿದ್ದ ಈ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜನಾರ್ಧನ ಹುಲಿಗಿ (೭೪೮೦) ಅವರು ಜೆಡಿಎಸ್ ಪಕ್ಷದ ಅಮರೇಶ ಕರಡಿ (೫೪೪೮) ಅವರಿಗಿಂತ ೨೦೩೨ ಹೆಚ್ಚು ಮತಗಳನ್ನು ಪಡೆದು ಆಯ್ಕೆಗೊಂಡರು.
ಹಿಟ್ನಾಳ್ ಕ್ಷೇತ್ರದಿಂದ ಆಯ್ಕೆ ಬಯಸಿ ಕಣದಲ್ಲಿದ್ದುದು ಒಟ್ಟು ೦೪ ಅಭ್ಯರ್ಥಿಗಳು, ಆ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಘವೇಂದ್ರ ಹಿಟ್ನಾಳ್ (೮೫೨೫) ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್‌ನ ವೀರನಗೌಡ ಪಾಟೀಲ (೫೫೦೮) ಅವರಿಗಿಂತ ೩೦೧೭ ಹೆಚ್ಚು ಮತಗಳನ್ನು ಪಡೆದು ವಿಜಯಶಾಲಿಯಾದರು. ತುರುಸಿನಿಂದ ನಡೆದ ಗಿಣಿಗೇರಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು ೦೩ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆ ಪೈಕಿ ಕಾಂಗ್ರೆಸ್ ಅಭ್ಯರ್ಥಿ ಡಾ. ಸೀತಾ ಗೂಳಪ್ಪ ಹಲಗೇರಿ (೬೯೪೭) ಅವರು ಬಿಜೆಪಿಯ ಪದ್ಮಪ್ರಿಯ ಭರತನಾಯ್ಕ (೪೮೦೦) ಅವರಿಗಿಂತ ೨೧೪೭ ಹೆಚ್ಚು ಮತಗಳನ್ನು ಪಡೆದು ವಿಜಯದ ನಗೆ ಬೀರಿದರು.
ಗಂಗಾವತಿ ತಾಲೂಕು ವ್ಯಾಪ್ತಿಯ ಪ್ರತಿಷ್ಠಿತ ಕ್ಷೇತ್ರಗಳಲ್ಲೊಂದಾದ ಆನೆಗುಂದಿ ಕ್ಷೇತ್ರದ ಸ್ಪರ್ಧೆಯಲ್ಲಿ ೦೬ ಅಭ್ಯರ್ಥಿಗಳು ಆಯ್ಕೆ ಬಯಸಿ ಕಣದಲ್ಲಿದ್ದರು, ಈ ಸ್ಪರ್ಧಿಗಳ ಪೈಕಿ ಕಾಂಗ್ರೆಸ್ ಅಭ್ಯರ್ಥಿ ವಿಜಯಲಕ್ಷ್ಮಿ ರಾಮಕೃಷ್ಣ (೯೦೪೯) ಅವರು ತಮ್ಮ ಸಮೀಪದ ಸ್ಪರ್ಧಿ ಬಿಜೆಪಿಯ ಪಾರ್ವತೆಮ್ಮ ಸಿದ್ದರಾಮಸ್ವಾಮಿ (೭೬೦೬) ಅವರಿಗಿಂತ ೧೪೪೩ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಮರಳಿ ಕ್ಷೇತ್ರದ ಚುನಾವಣೆಯಲ್ಲಿ ೦೩ ಅಭ್ಯರ್ಥಿಗಳು ಸ್ಪರ್ಧಿಸಿದ್ದರು, ಆ ಪೈಕಿ ಬಿಜೆಪಿ ಅಭ್ಯರ್ಥಿ ಪಿಲ್ಲಿ ವೆಂಕಟರಾವ್ (೭೦೬೬) ಅವರು ಕಾಂಗ್ರೆಸ್ ಅಭ್ಯರ್ಥಿ ರೆಡ್ಡಿ ಶ್ರೀನಿವಾಸ ವೀರರಾಜು (೬೫೭೨) ಅವರಿಗಿಂತ ೪೯೪ ಅಧಿಕ ಮತಗಳನ್ನು ಪಡೆದು ಜಯಶಾಲಿಯಾದರು. ಸಿದ್ದಾಪುರ ಕ್ಷೇತ್ರದ ಸ್ಪರ್ಧೆಯಲ್ಲಿ ಕಣದಲ್ಲಿದ್ದಿದ್ದು ೦೫ ಅಭ್ಯರ್ಥಿಗಳು, ಇವರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೇಮಾವತಿ ಲಂಕೇಶ (೬೪೩೫) ಅವರು ಕಾಂಗ್ರೆಸ್ ಅಭ್ಯರ್ಥಿ ಪೂಲಮ್ಮ ತಾರಪ್ಪ ರಾಠೋಡ (೬೦೪೮) ಅವರನ್ನು ೩೮೭ ಮತಗಳ ಅಂತರದಿಂದ ಸೋಲುಣಿಸಿದರು. ಕಾರಟಗಿ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಅಂತಿಮ ಕಣದಲ್ಲಿ ಉಳಿದಿದ್ದು ೦೫ ಅಭ್ಯರ್ಥಿಗಳು. ಕುತೂಹಲ ಮೂಡಿಸಿದ್ದ ಈ ಸ್ಪಧೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಅಮರೇಶಪ್ಪ ಕಂತೆಪ್ಪ ಕುಳಗಿ (೬೫೫೦) ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಸಿದ್ದನಗೌಡ ಭೈರೆಡ್ಡಿಗೌಡ (೬೧೧೬) ಅವರಿಗಿಂತ ೪೩೪ ಅಧಿಕ ಮತಗಳನ್ನು ಪಡೆದು ವಿಜಯಮಾಲೆ ಧರಿಸಿದರು. ಹೇರೂರು ಕ್ಷೇತ್ರದ ಸ್ಪರ್ಧೆಯಲ್ಲಿ ಒಟ್ಟು ೦೪ ಅಭ್ಯರ್ಥಿಗಳು ಆಯ್ಕೆ ಬಯಸಿದ್ದರು. ಅವರಲ್ಲಿ ಬಿಜೆಪಿ ಅಭ್ಯರ್ಥಿ ಚನ್ನಮ್ಮ ವಿರುಪಾಕ್ಷಗೌಡ ಹೇರೂರು (೯೪೧೪) ಅವರು ತಮ್ಮ ಸಮೀಪದ ಪ್ರತಿಸ್ಫರ್ದಿ ಕಾಂಗ್ರೆಸ್‌ನ ಬಸವರಾಜೇಶ್ವರಿ ಡ್ಯಾಗಿ (೫೯೨೭) ಅವರಿಗಿಂತ ೩೪೮೭ ಅಧಿಕ ಮತಗಳನ್ನು ಪಡೆದು ಆಯ್ಕೆಯಾದರು. ಕನಕಗಿರಿ ಕ್ಷೇತ್ರದ ಸ್ಪಧೆಯಲ್ಲಿ ೦೯ ಅಭ್ಯರ್ಥಿಗಳು ಸ್ಪರ್ಧಿಸಿದರು, ಆ ಪೈಕಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಂಗಣ್ಣ ಸಮಗಂಡಿ (೬೭೩೫) ತಮ್ಮ ಸಮೀಪದ ಪ್ರತಿಸ್ಪರ್ಧಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಶ್ರೀಧರ ಕೇಸರಹಟ್ಟಿ (೪೮೧೦) ಅವರನ್ನು ೧೯೨೫ ಮತಗಳ ಅಂತರದಿಂದ ಸೋಲಿಸಿ, ಆಯ್ಕೆಯಾದರು. ಕುತೂಹಲ ಮೂಡಿಸಿದ ಹುಲಿಹೈದರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದು ೦೫ ಅಭ್ಯರ್ಥಿಗಳು. ಇವರಲ್ಲಿ ಜೆಡಿಎಸ್‌ನ ವೀರೇಶಪ್ಪ ಸಾಲೋಣಿ (೬೩೯೬) ಅವರು ಬಿಜೆಪಿ ಅಭ್ಯರ್ಥಿ ಹುಗ್ಗಿ ನಾಗಪ್ಪ ಮರಿಯಪ್ಪ (೫೨೧೧) ಅವರಿಗಿಂತ ೧೧೮೫ ಅಧಿಕ ಮತಗಳನ್ನು ಪಡೆದು ವಿಜಯಶಾಲಿಯಾದರು. ನವಲಿ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ನಡದ ಸ್ಪರ್ಧೆಯಲ್ಲಿ ಕೇವಲ ೦೩ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಆ ಪೈಕಿ ಬಿಜೆಪಿ ಪಕ್ಷದ ಅಭ್ಯರ್ಥಿ ಜ್ಯೋತಿ ನಾಗರಾಜ ಬಿಲ್ಗಾರ (೬೩೬೩) ತಮ್ಮ ಪ್ರತಿಸ್ಪರ್ಧಿ ಜೆಡಿಎಸ್‌ನ ಶಾಂತಾ ರಮೇಶ ನಾಯಕ (೫೩೮೫) ಅವರನ್ನು ೯೭೮ ಮತಗಳ ಅಂತರದಿಂದ ಸೋಲಿಸಿ ಆಯ್ಕೆಯಾದರು.
ಕುಷ್ಟಗಿ ತಾಲೂಕು ವ್ಯಾಪ್ತಿಯಲ್ಲಿ ಬರುವ ಹನಮನಾಳ ಕ್ಷೇತ್ರದ ಸ್ಪರ್ಧೆಯಲ್ಲಿ ಕಣದಲ್ಲಿದ್ದಿದ್ದು ೦೫ ಅಭ್ಯರ್ಥಿಗಳು, ಅವರಲ್ಲಿ ಬಿಜೆಪಿ ಅಭ್ಯರ್ಥಿ ವಿದ್ಯಾಶ್ರೀ ಈರಣ್ಣ ಗಜೇಂದ್ರಗಡ (೭೭೬೦) ಅವರು ಸಮೀಪದ ಪ್ರತಿಸ್ಪರ್ದಿಯಾದ ಕಾಂಗ್ರೆಸ್ ಅಭ್ಯರ್ಥಿ ಶ್ಯಾವಂತ್ರವ್ವ ಮೇಲಸಕ್ರಿ (೭೨೦೪) ಅವರನ್ನು ೫೫೬ ಮತಗಳ ಅಂತರದಿಂದ ಮಣಿಸಿದರು. ಹನುಮಸಾಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸ್ಪರ್ಧಿಸಿದ್ದು ಒಟ್ಟು ೦೪ ಅಭ್ಯರ್ಥಿಗಳು, ಆ ಪೈಕಿ ಬಿಜೆಪಿ ಅಭ್ಯರ್ಥಿ ಲಕ್ಷ್ಮೀದೇವಿ ಹಳ್ಳೂರು (೯೧೦೨), ಕಾಂಗ್ರೆಸ್ ಪಕ್ಷದ ಅಭ್ಯಥಿ ಡಾ. ಸುವರ್ಣ ಹವಾಲ್ದಾರ (೮೪೫೭) ಅವರಿಗಿಂತ ೬೪೫ ಅಧಿಕ ಮತಗಳನ್ನು ಪಡೆದು ಆಯ್ಕೆಯಾದರು. ಚಳಗೇರಾ ಕ್ಷೇತ್ರದ ಚುನಾವಣೆಯಲ್ಲಿ ೦೩ ಅಭ್ಯರ್ಥಿಗಳು ಸ್ಪರ್ಧಿಸಿದ್ದರು, ಇವರಲ್ಲಿ ಬಿಜೆಪಿ ಅಭ್ಯರ್ಥಿ ಹನಮಕ್ಕ ಚೌಡ್ಕಿ (೭೪೯೪) ಅವರು ಕಾಂಗ್ರೆಸ್ ಅಭ್ಯರ್ಥಿ ಶರಣಮ್ಮ ಮಾಲಿಪಾಟೀಲ(೬೩೯೪) ಅವರನ್ನು ೧೧೦೦ಮತಗಳ ಅಂತರದಿಂದ ಸೋಲಿಸಿ, ಗೆಲುವಿನ ನಗು ಬೀರಿದರು. ಕೊರಡಕೇರಾ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ನಡೆದ ಚುನಾವಣೆಗಾಗಿ ಸ್ಪರ್ಧಿಸಿದ್ದು ೦೫ ಅಭ್ಯರ್ಥಿಗಳು, ಆ ಪೈಕಿ ಬಿಜೆಪಿ ಅಭ್ಯರ್ಥಿ ಪರಸಪ್ಪ ಮರಿಯಪ್ಪ ಕತ್ತಿ (೭೧೦೦) ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಮಲ್ಲಣ್ಣ ಹನಮಪ್ಪ ಪಲ್ಲೇದ (೬೦೫೩) ಅವರಿಗಿಂತ ೧೦೪೭ ಅಧಿಕ ಮತಗಳನ್ನು ಪಡೆದು ಆಯ್ಕೆಗೊಂಡರು. ಹಿರೇಮನ್ನಾಪುರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಣದಲ್ಲಿ ಉಳಿದಿದ್ದು ಕೇವಲ ೩ ಅಭ್ಯರ್ಥಿಗಳು, ಇವರ ಪೈಕಿ ಬಿಜೆಪಿ ಅಭ್ಯರ್ಥಿ ಅನ್ನಪೂರ್ಣ ಕಂದಕೂರಪ್ಪ (೬೮೨೩) ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ರಂಗಮ್ಮ ನಾಯಕ್ (೫೨೦೧) ಅವರನ್ನು ೧೬೨೨ ಮತಗಳಿಂದ ಸೋಲಿಸಿ ಆಯ್ಕೆಗೊಂಡರು. ತಾವರಗೇರಾ ಕ್ಷೇತ್ರದ ಸ್ಪರ್ಧೆಯಲ್ಲಿದ್ದಿದ್ದು ೦೫ ಅಭ್ಯರ್ಥಿಗಳು, ಇವರಲ್ಲಿ ಬಿಜೆಪಿಯ ವಿನಯಕುಮಾರ ಮೇಲಿನಮನಿ (೭೧೧೯) ಅವರು ಕಾಂಗ್ರೆಸ್ ಅಭ್ಯರ್ಥಿ ಶ್ಯಾಮಣ್ಣ ನಾರಿನಾಳ (೬೪೬೯) ಅವರಿಗಿಂತ ೬೫೦ ಅಧಿಕ ಮತಗಳನ್ನು ಪಡೆದು ವಿಜೇತರಾದರು.
ಯಲಬುರ್ಗಾ ತಾಲೂಕು ವ್ಯಾಪ್ತಿಯ ಹಿರೇವಂಕಲಕುಂಟಾ ಕ್ಷೇತ್ರದ ಚುನಾವಣೆಯಲ್ಲಿ ೦೪ ಅಭ್ಯರ್ಥಿಗಳು ಸ್ಪರ್ಧಿಸಿದರು. ಆ ಪೈಕಿ ಪಕ್ಷೇತರ ಅಭ್ಯರ್ಥಿ ಶಾಮೀದಸಾಬ ಚಳ್ಳಾರಿ (೫೮೫೪) ಅವರು ಬಿಜೆಪಿ ಅಭ್ಯರ್ಥಿ ಅರವಿಂದಗೌಡ ಪಾಟೀಲ (೫೫೧೧) ಅವರಿಗಿಂತ ೩೪೩ ಅಧಿಕ ಮತಗಳನ್ನು ಪಡೆದು ಆಯ್ಕೆಗೊಂಡರು. ಚಿಕ್ಕಮ್ಯಾಗೇರಿ ಕ್ಷೇತ್ರ ಸ್ಪರ್ಧೆಯಲ್ಲಿ ಕಣದಲ್ಲಿ ಇದ್ದದ್ದು ೦೪ ಅಭ್ಯರ್ಥಿಗಳು, ಇವರ ಪೈಕಿ ಕಾಂಗ್ರೆಸ್ ಅಭ್ಯರ್ಥಿ ರಾಮಣ್ಣ ಸಾಲಭಾವಿ (೭೭೯೭) ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿ ಪಕ್ಷದ ರೇವಣಪ್ಪ ಸಂಗಟಿ (೬೪೨೮) ಅವರನ್ನು ೧೩೬೯ ಮತಗಳ ಅಂತರದಿಂದ ಪರಾಭವಗೊಳಿಸಿದರು. ಮಂಗಳೂರು ಕ್ಷೇತ್ರ ಸದಸ್ಯ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ೦೬ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಇವರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ ತೋಟದ (೪೪೬೨) ಅವರು ಪಕ್ಷೇತರ ಅಭ್ಯರ್ಥಿ ನಿಂಗಪ್ಪ ಕೊಳಜಿ (೩೫೧೫) ಅವರಿಗಿಂತ ೯೪೭ ಅಧಿಕ ಮತಗಳನ್ನು ಪಡೆದು ವಿಜಯದ ನಗೆ ಬೀರಿದರು. ತಳಕಲ್ ಕ್ಷೇತ್ರದ ಸದಸ್ಯ ಸ್ಥಾನಕ್ಕಾಗಿ ೦೫ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿರುಸಿನಿಂದ ನಡೆದ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮಾ ಶಿವಪ್ಪ ಮುತ್ತಾಳ (೮೪೮೦) ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ರೇಣುಕಾ ಮಾದಿನೂರ (೬೦೭೨) ಅವರನ್ನು ೨೪೦೮ ಮತಗಳ ಅಂತರದಿಂದ ಸೋಲಿಸಿ ಆಯ್ಕೆಗೊಂಡರು. ಕುತೂಹಲ ಮೂಡಿಸಿದ ಕುಕನೂರು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು ೦೬ ಅಭ್ಯರ್ಥಿಗಳು ಸ್ಪರ್ಧಿಸಿದ್ದ ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈರಪ್ಪ ಕುಡಗುಂಟಿ (೯೫೨೮) ಅವರು ಬಿಜೆಪಿ ಅಭ್ಯರ್ಥಿ ರಾಮಣ್ಣ ಭಜಂತ್ರಿ (೫೯೨೦) ಅವರಿಗಿಂತ ೩೬೦೮ ಹೆಚ್ಚು ಮತಗಳನ್ನು ಪಡೆದು ವಿಜೇತರಾದರು. ಮುಧೋಳ ಕ್ಷೇತ್ರದ ಸದಸ್ಯ ಸ್ಥಾನಕ್ಕೆ ನಡೆದ ಸ್ಪರ್ಧೆಯಲ್ಲಿ ಕೇವಲ ೦೩ ಅಭ್ಯರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೇಮಲತಾ ಪೋ. ಪಾಟೀಲ (೭೫೦೮) ಅವರು ಬಿಜೆಪಿ ಅಭ್ಯರ್ಥಿ ಪ್ರೇಮಾ ಮುದಗಲ್ (೫೬೩೩) ಅವರನ್ನು ೧೮೭೫ ಮತಗಳ ಅಂತರದಿಂದ ಮಣಿಸಿ ವಿಜಯದ ನಗೆ ಬೀರಿದರು.
೨೦೧೦ ರಲ್ಲಿ ಜರುಗಿದ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಪಕ್ಷಗಳ ಬಲಾಬಲ ಈ ರೀತಿ ಇತ್ತು ಒಟ್ಟು ೨೭ ಸ್ಥಾನಗಳ ಪೈಕಿ ಬಿಜೆಪಿ ಪಕ್ಷ ಅತಿ ಹೆಚ್ಚು ೧೨ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತು. ಉಳಿದಂತೆ ಕಾಂಗ್ರೆಸ್-೧೦, ಜೆಡಿಎಸ್- ೦೪ ಕ್ಷೇತ್ರದಲ್ಲಿ ವಿಜಯ ಸಾಧಿಸಿದರೆ, ೦೧ ಕ್ಷೇತ್ರಗಳು ಪಕ್ಷೇತರ ಅಭ್ಯರ್ಥಿ ಪಾಲಾಯಿತು.
ಹಿರೇವಂಕಲಕುಂಟ ಕ್ಷೇತ್ರದ ಪಕ್ಷೇತರ ಸದಸ್ಯರಾಗಿದ್ದ ಶಾಮೀದ್ ಸಾಬ್ ನಿಧನರಾದ ಕಾರಣದಿಂದ ಜರುಗಿದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅರವಿಂದಗೌಡ ಪಾಟೀಲ್ ಅವರು ಆಯ್ಕೆಯಾದರು. ಇರಕಲ್ಲಗಡ ಕ್ಷೇತ್ರದ ಸದಸ್ಯೆಯಾಗಿದ್ದ ಕಾಂಗ್ರೆಸ್‌ನ ನೇತ್ರಾವತಿ ಗುಮಗೇರಿ ಅವರ ಅಕಾಲಿಕ ಸಾವಿನಿಂದ ತೆರವಾಗಿದ್ದ ಸ್ಥಾನಕ್ಕಾಗಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಸ್ತೂರಮ್ಮ ಬಿ. ಪಾಟೀಲ್ ಅವರು ಆಯ್ಕೆಯಾಗಿದ್ದರು. ಉಪಚುನಾವಣೆಗಳ ನಂತರ ಪಕ್ಷಗಳ ಬಲಾಬಲ, ಬಿಜೆಪಿ-೧೪, ಕಾಂಗ್ರೆಸ್-೦೯ ಹಾಗೂ ಜೆ.ಡಿಎಸ್ ಪಕ್ಷದ ೦೪ ಸದಸ್ಯರು ಇದ್ದರು.
ಈಗ ಮತ್ತೊಮ್ಮೆ ಜಿ.ಪಂ. ಹಾಗೂ ತಾ.ಪಂ. ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿದೆ. ಇದೇ ಫೆ. ೨೦ ರಂದು ಮತದಾನ ನಡೆಯಲಿದ್ದು, ಸುಗಮವಾಗಿ ಹಾಗೂ ಶಾಂತಿಯುತ ಚುನಾವಣೆ ನಡೆಸಲು ಜಿಲ್ಲಾಡಳಿತ ಸರ್ವಸನ್ನದ್ಧವಾಗಿದೆ. ಈ ಚುನಾವಣೆಯನ್ನು ಶಾಂತಿಯುತವಾಗಿ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಅನುಕೂಲವಾಗುವಂತೆ ಸಾರ್ವಜನಿಕರೂ ಸಹ ಜಿಲ್ಲಾ ಆಡಳಿತದೊಂದಿಗೆ ಕೈಜೋಡಿಸುವುದು ಅಗತ್ಯವಾಗಿದೆ.

0 comments:
Post a Comment