ಕೊಪ್ಪಳ-03- ನಗರದ ಹುಲಿಕೇರಿ ರಸ್ತೆಯಲ್ಲಿ ಶ್ರೀ ಬಸವಾಧಿ ಶರಣರ ಹೂಗಾರ ಮಾದಯ್ಯ ದೇವಸ್ಥಾನ ಧಾರ್ಮಿಕ ಸಮಿತಿಯ ಜೀಣೋದ್ದಾರಕ್ಕೆ ಅಡಿಗಲ್ಲು ಹಾಕಿ ಮೂರು ವರ್ಷ ಗತಿಸಿದರೂ ಯಾವುದೇ ಅಭಿವೃದ್ದಿ ಕಾಮಗಾರಿ ಪೂರ್ಣಗೊಂಡಿಲ್ಲ ೨೦೧೨-೧೩ನೆ ಸಾಳಿನಲ್ಲಿ ಕೊಪ್ಪಳ ವಿಧಾನಸಭಾ ಕ್ಷೇತ್ರ ದೇವಸ್ಥಾನಗಳ ನವೀಕರಣ ಯೋಜನೆಯಡಿ ಕಾಮಗಾರಿಗೆ ಒಪ್ಪಿಗೆ ಸೂಚಿಸಲಾಗಿತ್ತು ೦೨-೧೦-೨೦೧೩ ರಂದು ಶಂಕುಸ್ಥಾಪನೆ ನೆರವೆರಿಸಲಾಯಿತು. ಕೊಪ್ಪಳ ಜಿಲ್ಲಾಡಳಿತದ ಹಾಗೂ ಧಾರ್ಮಿಕ ದತ್ತಿ ಇಲಾಖೆ ನೇತೃತ್ವವಹಿಸಿತ್ತು ಇದಕ್ಕೆ ಬಿ.ಜೆ.ಪಿ ಸರ್ಕಾರದಿಂದ ೧೦.ಲಕ್ಷ ರೂಗಳ ಅನುದಾನವನ್ನು ಶ್ರೀ ಸಂಗಣ್ಣ ಕರಡಿಯವರು ಬಿಡುಗಡೆಮಾಡಿಸಿದ್ದರು ಜಿ.ಪಂ ಅಧ್ಯಕ್ಷರಾಗಿದ್ದ ರಾಘವೇಂದ್ರ ಹಿಟ್ನಾಳ ರವರು ಶಾಸಕರಾಗಿ ಆಯ್ಕೆಯಾದರು ಶಾಸಕರಾದ ಶ್ರೀ ರಾಘವೇಂದ್ರ ಹಿಟ್ನಾಳ ಅವರೇ ಅಡಿಗಲ್ಲು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶಂಕುಸ್ಥಾಪನೆ ನೆರವೆರಿಸಿದರು ಆಗ
ಬಂದುಹೊದವರು ತಿರುಗಿ ಕಾಮಗಾರಿ ಕುರಿತು ಪರಿಶೀಲಿಸಿಲ್ಲ ಕೆಲವು ಹೂಗಾರ ಸಮುದಾಯದ
ಮುಖಂಡರು ಬಿ.ಜೆ.ಪಿಯೊಂದಿಗೆ ಗುರ್ತಿಸಿಕೊಂಡಿದ್ದರಿಂದ ಶಾಸಕರು ಮತ್ತು ಸಚಿವರು ಅನುದಾನ
ಬಿಡುಗಡೆ ಮಾಡಿಲ್ಲ ಎಂಬ ಆರೋಪ ಇದೆ ಆದರೆ ಹೂಗಾರ ಸಮುದಾಯ ಬಹಳಷ್ಟು ಮುಖಂಡರು ಕಾಂಗ್ರೇಸ್
ನಲ್ಲಿ ಇದ್ದಾರೆ ಗ್ರಾ.ಪಂ ಅಧ್ಯಕ್ಷರು, ಸದಸ್ಯರು ಆಗಿದ್ದಾರೆ ಅವರ ಮನವಿಯನ್ನು ಜಿಲ್ಲಾ
ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಶಾಸಕರಾದ ಶ್ರೀ ರಾಘವೇಂದ್ರ ಹಿಟ್ನಾಳ ಇವರುಗಳು
ಪರಿಗಣಿಸುತ್ತಿಲ್ಲ ಸಂಸದರಾದ ಸಂಗಣ್ಣ ಕರಡಿ ಅವರನ್ನು ಕೆಳಿದರೆ ನಮ್ಮ ಪಕ್ಷದಿಂದ
ಹಿಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ ಆದರೂ ೨೦೧೫-೧೬ ನೇ ಸಾಲಿನಲ್ಲಿ ರೂ. ೫.ಲಕ್ಷಗಳ
ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ ಆಗಾಗಿ ಸಮುದಾಯದ ಮುಖಂಡರು ಯಾರನ್ನು
ಕೆಳಬೇಕು ಎನ್ನುವ ಚಿಂತೆಯಲ್ಲಿ ಇದ್ದಾರೆ ಆದ್ದರಿಂದ ಶಾಸಕ ರಾಘವೇಂದ್ರ ಹಿಟ್ನಾಳರು
ಶಂಕುಸ್ಥಾಪನೆ ದಿನ ಮಾತು ಕೊಟ್ಟಂತೆ ರೂ. ೧೦.ಲಕ್ಷಗಳ ಅನುದಾನ ಕೊಡಬೇಕೆಂದು ಹೂಗಾರ
ಸಮುದಾಯದ ಮುಖಂಡರು ಒತ್ತಾಯಿಸುತ್ತಾ. ಈಗ ಆಗುತ್ತಿರುವ ಆಡತಡೆಗಳನ್ನು ನಿವಾರಿಸಬೇಕೆಂದು
ಹೂಗಾರ ಸಮುದಾಯದ ಮುಖಂಡರಾದ ಭೀಮಣ್ಣ ಹೂಗಾರ, ಸಂಗಪ್ಪ ಹೂಗಾರ, ತೇಜಪ್ಪ ಹೂಗಾರ,
ವಿರುಪಾಕ್ಷಪ್ಪ ಹೂಗಾರ, ಗವಿಸಿದ್ದಪ್ಪ ಹೂಗಾರ, ಜಂಬಣ್ಣ ಹೂಗಾರ, ಈಶಪ್ಪ ಹೂಗಾರ, ರಮೇಶ
ಹೂಗಾರ ಇವರುಗಳು ಒತ್ತಾಯಿಸಿದ್ದಾರೆ.
Subscribe to:
Post Comments (Atom)
0 comments:
Post a Comment