PLEASE LOGIN TO KANNADANET.COM FOR REGULAR NEWS-UPDATES

ನಗರದ ದದೇಗಲ್‌ನಲ್ಲಿ ಇರುವ ಸರಕಾರಿ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳೊಂದಿಗೆ ಎನ್ ಹೆಚ್ ೬೩ ಯಲ್ಲಿ ಟಯರ್ ಗೆ ಬೆಂಕಿ ಹಚ್ಚಿ ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ರವಿಚಂದ್ರಗೌಡ ಪಾಟಿಲ ಮಾತನಾಡಿ ಕೂಡ್ಲಗಿಯ ಡಿ.ವೈ.ಎಸ್.ಪಿ ಯಾಗಿ ಪ್ರಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದ್ದ ದಕ್ಷತೆಯಿಂದ ಹೆಸರಾಗಿದ್ದ ಶ್ರೀಮತಿ ಅನುಪಮಾ ಶೆಣೈ ರವರನ್ನು ವರ್ಗಾವಣೆ ಮಾಡಿ ಪುನ: ಮತ್ತೆ ರಾಜ್ಯ ಸರಕಾರ ತಪ್ಪನ್ನು ಒಪ್ಪಿಕೊಂಡು ಅಲ್ಲೆ ನಿಯುಕ್ತಿ ಗೊಳಿಸಿ ತಮ್ಮ ಅಧಿಕಾರಿಗಳ ಮೇಲಿನ ದೌರ್ಜನ್ಯವನ್ನು ಒಪ್ಪಿಕೊಂಡಿದೆ. ಮತ್ತು ಇದನ್ನು ಪ್ರಶ್ನೆಸಲು ಹೋದ ಮಾಧ್ಯಮದ ವರದಿಗಾರರ ಮೇಲೆ ಹಲ್ಲೆಯನ್ನು ಮಾಡಿದ್ದಾರೆ.
    ಗವಿಸಿದ್ದಪ್ಪ ಜಂತಕಲ್ ಮಾತನಾಡಿ  ಇದಕ್ಕೆಲ್ಲಾ ಮೂಲ ಕಾರಣಿ ಬೂತರಾದ ಬಳ್ಳಾರಿ ಜಿಲ್ಲಾ ಉಸ್ತುವಾರಿ ಮತ್ತು ಕಾರ್ಮಿಕ ಸಚಿವರಾದ  ಪರಮೇಶ್ವರ ನಾಯಕರವರ ರಾಜಿನಾಮೆ ಪಡೆದು ಜನತೆಗೆ ಪ್ರಜಾಪ್ರಭುತ್ವಕ್ಕೆ ಗೌರವ ತಂದುಕೊಡಬೇಕಾಗಿ ಮತ್ತು ರಾಜ್ಯ ಸರಕಾರ ಮತ್ತು ಮುಖ್ಯ ಮಂತ್ರಿಗಳು ತಮ್ಮ ಗೌರವವನ್ನು ರಾಜ್ಯದ ಜನತೆಗೆ ತೋರಿಸಬೇಕು ಮತ್ತು ಕರ್ನಾಟಕದಲ್ಲಿ ನಿಷ್ಠಾಂವತ ಅಧಿಕಾರಿಗಳಿಗೆ ಸೂಕ್ತ ಗೌರವ ಕಲೆಸ ನಿರ್ವಹಿಸಲು ಸಂಪೂರ್ಣವಾದ ಸ್ವತಂತ್ರ್ಯ ಇಲ್ಲದಂತಾಗಿದೆ. ಸರಕಾರಿ ಅಧಿಕಾರಿಗಳು ಸಚಿವರ ಕೈಗೊಂಬೆಯಾಗಿ ಕೆಲಸ ನಿರ್ವಹಿಸುತ್ತಿದ್ದು ತಮ್ಮ ಹುದ್ದೆಗೆ ತಕ್ಕ ಗೌರವ ಸಿಗದಂತಾಗಿದೆ. ಇದು ಇಲ್ಲಿಗೆ ನಿಲ್ಲಬೇಕು. ಇಲ್ಲವಾದಲ್ಲಿ  ಮುಂದಿನ ದಿನನಗಳಲ್ಲಿ ಎ.ಬಿ.ವಿ.ಪಿ ಸಂಘಟನೆಯಿಂದ ಉಗ್ರವಾದ ಪ್ರತಿಭಟನೆಯನ್ನು  ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
    ಗವಿಸಿದ್ದಪ್ಪ ಜಂತ್‌ಕಲ್, ರಾಕೇಶ ಪಾನಘಂಟಿ, ಪ್ರಶಾಂತ, ರವಿ, ಶರಣು, ರಾಧಾ, ಪೂಜಾ, ಸಂಗೀತಾ, ಗುರು, ಸರೋಜಾ, ವಿರೇಶ, ಶಾಂತು, ಬಸವರಾಜ ಮುಂತಾದವರು ಈ ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

Advertisement

0 comments:

Post a Comment

 
Top