ಕೊಪ್ಪಳ-23- ದೈರ್ಯ, ಸಾಹಸ, ಸ್ವಾಭಿಮಾನ ಮತ್ತು ಕ್ರಾಂತಿಗಳ ಮೂಲಕ ಹೋರಾಟ ಮಾಡಿ ಹುತಾತ್ಮರಾದವರೇ ನೇತಾಜಿ ಸುಭಾಸ ಚಂದ್ರಭೋಸ್. ನಮ್ಮ ರಾಷ್ಟ್ರದ ಸ್ವಾತಂತ್ರ್ಯಕಾಗಿ ಹೋರಾಟ ಮಾಡಿದ ನಾಯಕ. ಹೋರಾಟಗಾರರಲ್ಲಿ ದೈರ್‍ಯ ಮತ್ತು ಸ್ಪೂರ್ತಿ ತುಂಬಿದ ಹೋರಾಟಗಾರ ಸುಭಾಸ್ ಚಂದ್ರ ಭೋಸ್ ಎಂದು ಹಿರಿಯ ಸಾಹಿತಿ, ಪ್ರಾಂಶುಪಾಲ ಡಾ.ವಿ.ಬಿ.ರಡ್ಡೇರ್ ಹೇಳಿದರು. ನಗರದ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೇತಾಜಿ ಸುಭಾಸ ಚಂದ್ರ ಭೋಸ್ ರವರ ೧೧೯ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನೇತಾಜಿಯವ
ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಕಾರ್‍ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
ತಮ್ಮ ಹೋರಾಟಗಳಿಂದ ಬ್ರಿಟಿಷರ ಸಿಂಹಸ್ವಪ್ನವಾಗಿದ್ದರು ನೇತಾಜಿ. ಜೀವನದಲ್ಲಿ
ಅಸಾಧ್ಯವಾದುದ್ದು ಯಾವುದೂ ಇಲ್ಲ ಸತತ ಪರಿಶ್ರಮದಿಂದ ಎಲ್ಲವೂ ಸಾಧ್ಯ ಎಂಬ ಧ್ಯೇಯ
ನಿಮ್ಮದಾಗಲಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಮಕ್ಕಳು ನೇತಾಜಿಯವರ ವಿಚಾರಧಾರೆಯನ್ನು ಹೋರಾಟದ ಕಿಚ್ಚನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದು ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಕಾರ್‍ಯದರ್ಶಿ ಆರ್.ಎಚ್.ಅತ್ತನೂರ ಹೇಳಿದರು. ವೇದಿಕೆಯ ಮೇಲೆ ಮುಖ್ಯೋಪಾಧ್ಯಾಯನಿ ಶ್ರೀಮತಿ ರೇಣುಕಾ ಅತ್ತನೂರ, ಶಿಕ್ಷಕರಾದ ಮರಿಶಾಂತೇಶ, ಗುಳನಗೌಡ್ರ ,ಜ್ಯೋತಿ ಉಪಸ್ಥಿತರಿದ್ದರು. ಕಾರ್‍ಯಕ್ರಮದಲ್ಲಿ ಶಾಲೆಯ ಮಕ್ಕಳು, ಪಾಲಕರು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಕಾರ್‍ಯಕ್ರಮಕ್ಕೆ ಸ್ವಾಗತವನ್ನು ಜ್ಯೋತಿ ಆರ್.ಕೆ ಮಾಡಿದರು. ಪ್ರಾರ್ಥನೆಯನ್ನು ವಿದ್ಯಾರ್ಥಿಗಳಾದ ನಿರ್ಮಲಾ ಮತ್ತು ಸಂಗಡಿಗರು ನೆರವೇರಿಸದರು. ನಿರೂಪಣೆಯನ್ನು ಮು.ಶಿ. ಆಶಾ.ವೈ.ದೊಡ್ಡಮನಿ ಮಾಡಿದರು. ಕೊನೆಯಲ್ಲಿ ವಂದನಾರ್ಪಣೆಯನ್ನು ಹನುಮೇಶ ನೆರವೇರಿಸಿದರು.

0 comments:
Post a Comment