ಯಲಬುರ್ಗಾ-17- ದ್ವೀಚಕ್ರ ವಾಹನ ಸವಾರರಿಗೆ ಹೆಲ್ಮೇಟ್ ಕಡ್ಡಾಯಗೊಳಿಸುವ ಸಲುವಾಗಿ ಪಟ್ಟಣದ ಯಲಬುರ್ಗಾ ಪೋಲಿಸ್ ಠಾಣೆ ವತಿಯಿಂದ ಪಿ.ಎಸ್.ಐ ವಿನಾಯಕರವರ ನೇತೃತ್ವದಲ್ಲಿ ಠಾಣೆಯ ಪೋಲಿಸ್ ಸಿಬ್ಬಂದಿಯೊಂದಿಗೆ ಹೆಲ್ಮೇಟ್ ಹಾಕಿಕೊಂಡು ಬೈಕ್ ರ್‍ಯಾಲಿ ಮೂಲಕ ಜಾಗೃತಿ ಮೂಡಿಸಿದರು. ಪಿ.ಎಸ್.ಐ ವಿನಾಯಕ ಮಾತನಾಡಿ ದ್ವೀಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಹಾಕಿಕೊಂಡು ವಾಹನ ಚಲಾಯಿಸಬೇಕು ಇಲ್ಲವಾದರೆ ಅಪಘಾತ ಸಂಭವಿಸಿ ಕುಟುಂಬ ಸದಸ್ಯರು ವ್ಯಥೆ ಪಡುವಂತಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಹೆಲ್ಮೇಟ್ ಧರಿಸಬೇಕು ಎಂದು ಹೇಳಿದರು. ಈ ಸಂಧರ್ಭದಲ್ಲಿ ಎ.ಎಸ್.ಐ ಮಾರ್ತಾಂಡಪ್ಪ ಹಾಗೂ ಸಿಬ್ಬಂದಿಗಳಾದ ವೆಂಕಟೇಶ , ರಮೇಶ , ಬಿ.ಎಸ್.ಬೋರಣ್ಣವರ , ರವಿಶಂಕರ್, ರಿಯಾಜ್, ತಮ್ಮನಗೌಡ , ಗವೀಶ , ಶ್ರೀಧರ , ವಿರೇಶ ಮತ್ತಿತರರು ಇದ್ದರು.
Home
»
Koppal News
»
koppal organisations
» ಹೆಲ್ಮೇಟ್ ಕಡ್ಡಾಯಗೊಳಿಸಲು ಯಲಬುರ್ಗಾ ಪೋಲಿಸ್ ಠಾಣೆ ವತಿಯಿಂದ ಬೈಕ್ ರ್‍ಯಾಲಿ ಮೂಲಕ ಜಾಗೃತಿ.
Subscribe to:
Post Comments (Atom)
0 comments:
Post a Comment